ಬೆಂಗಳೂರು:
ಬೆಂಗಳೂರು ನಗರ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ.., ನಗರದಲ್ಲಿ ಜನಸಂಖ್ಯೆ ಹೆಚ್ಚುತಿದ್ದು, ಉತ್ತಮ ಪರಿಸರ ಸಿಗದ ಸ್ಥಿತಿ ನಿರ್ಮಾಣವಾಗಿದೆ. ಇದನ್ನ ಮನಗಂಡ ಸರ್ಕಾರ ಇದೀಗ ಮತ್ತೊಂದು ಬಿಗ್ ಪಾರ್ಕ್ (ಉದ್ಯಾನವನ) ನಿರ್ಮಿಸೋಕೆ ಮುಂದಾಗಿದೆ. ಅದು ಕಬ್ಬನ್ಪಾರ್ಕ್ ಹಾಗೂ ಲಾಲ್ಬಾಗ್ ಅನ್ನೂ ಮೀರಿಸಲಿದೆ.
ಯಲಹಂಕ ಬಳಿಯ ಜಾರಕ್ಬಂಡೆ ಜೆವಿ ಕಾವಲ್ನ ಸರ್ವೆ.ನ 59 ರಲ್ಲಿ 644 ಎಕರೆ ಅರಣ್ಯ ಪ್ರದೇಶದ 300 ಎಕರೆ ಜಾಗದಲ್ಲಿ ಈ ಪಾರ್ಕ್ ನಿರ್ಮಾಣವಾಗುತ್ತಿದ್ದು, ತೋಟಗಾರಿಕಾ ಸಚಿವ ಮುನಿರತ್ನ ಹಾಗೂ ಬಿಡಿಎ ಅಧ್ಯಕ್ಷ ವಿಶ್ವನಾಥ್ ಅಧಿಕಾರಿಗಳ ಜತೆ ಸ್ಥಳಪರಿಶೀಲನೆ ನಡೆಸಿದರು.
ಕಬನ್ಪಾರ್ಕ್ 170 ಎಕರೆ, ಲಾಲ್ಬಾಗ್ 240 ಎಕರೆ ಪ್ರದೇಶ ಒಳಗೊಂಡಿದೆ. ಆದ್ರೆ ಭವಿಷ್ಯದಲ್ಲಿ ನಿರ್ಮಾಣವಾಗುವ ಪಾರ್ಕ್ 644 ಎಕರೆ ವಿಶಾಲವಾದ ಸ್ಥಳದಲ್ಲಿ ಇರಲಿದೆ. 32 ಸಾವಿರ ನೀಲಿಗಿರಿ ಮರಗಳಿದ್ದು, ಅದನ್ನ ತೆಗೆದು ಉದ್ಯಾನವನ ನಿರ್ಮಿಸಲು ಸರ್ಕಾರ ಹೊರಟಿದೆ.