ಬೆಂಗಳೂರು, (www.thenewzmirror.com) ;
ಕಾಂಗ್ರೆಸ್ ಅಧಿನಾಯಕಿ ಹಾಗೂ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ತಾಯಿ ಇಟಲಿಯಲ್ಲಿ ಆಗಸ್ಟ್ 27 ರಂದು ನಿಧನರಾಗಿದ್ದಾರೆ.
ಪಾವೊಲಾ ಮೈನೋ ಇಟಲಿಯ ತಮ್ಮ ಮನೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ. ಈ ಕುರಿತಂತೆ ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಟ್ವೀಟ್ ಮಾಡಿ ಈ ವಿಚಾರವನ್ನು ತಿಳಿಸಿದ್ದಾರೆ.
ತಾಯಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಕಳೆದ ವಾರ ಇಟಲಿಗೆ ತೆರಳಿದ್ದರು. ಸೋನಿಯಾ ಜೊತೆ ರಾಹುಲ್, ಪ್ರಿಯಾಂಕಾ ಗಾಂಧಿ ವಿದೇಶಕ್ಕೆ ತೆರಳಿದ್ದರು.