ಬೆಂಗಳೂರು, (www.thenewzmirror.com) ;
ದಿನಕಳೆದಂತೆ ಪರಿಸರದಲ್ಲಿ ಉತ್ತಮ ಗಾಳಿ ಸಿಗುತ್ತಿಲ್ಲ.., ಹೆಚ್ಚುತ್ತಿರುವ ಮಾಲಿನ್ಯದಿಂದ ಜೀವನ ನಡೆಸುವುದೇ ಕಷ್ಟವಾಗುತ್ತಿದೆ. ಇದನ್ನ ಅರಿತ ಸಾರಿಗೆ ಇಲಾಖೆ ಪ್ರತಿ ವರ್ಷ ನವೆಂಬರ್ ತಿಂಗಳನ್ನ ಮಾಲಿನ್ಯ ನಿಯಂತ್ರಣ ಮಾಸ ಅಂತ ಆಚರಿಸಿಕೊಂಡು ಬರುತ್ತಿದೆ.
ಅದೇ ರೀತಿ ರಾಜ್ಯದಲ್ಲಿರುವ ಎಲ್ಲಾ ಸಾರಿಗೆ ಕಚೇರಿಯಲ್ಲಿ ನವೆಂಬರ್ ತಿಂಗಳನ್ನ ಮಾಲಿನ್ಯ ನಿಯಂತ್ರಣ ಮಾಸ ಎಂದು ಆಚರಿಸುತ್ತಿದೆ. ಅದೇ ರೀತಿ ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನಲ್ಲಿರುವ ಬೆಂಗಳೂರು ಕೇಂದ್ರ ಸಾರಿಗೆ ಕಚೇರಿಯಲ್ಲಿ ಅರ್ಥ ಪೂರ್ಣವಾಗಿ ಮಾಲಿನ್ಯ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲಾಯಿತು.









ಸ್ವಂತ ಕಚೇರಿ ಹೊಂದಿರುವ ಕಚೇರಿಯ ಆವರಣದಲ್ಲಿ ಸಸಿ ನೆಡುವ ಮೂಲಕ ಮಾಲಿನ್ಯ ನಿಯಂತ್ರಣ ಮಾಸಾಚರಣೆ ಆಚರಿಸಲಾಯಿತು. ಒಂದು ಸಸಿ ನೂರಾರು ಜೀವಗಳನ್ನ ಬದುಕಿಸುತ್ತೆ ಅನ್ನೋ ಮಾತಿನಂತೆ ಹಸಿರೀಕರಣಕ್ಕೆ ಉತ್ತೇಜನ ನೀಡುವ ಕೆಲಸವನ್ನ ಮಾಡಲಾಯಿತು.
ದಿನದಿಂದ ದಿನಕ್ಕೆ ಪರಿಸರದಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚುತ್ತಿದೆ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾರ್ವಜನಿಕರು ಯಾವ ರೀತಿ ಹಸಕರಿಸ್ಬೇಕು ಅನ್ನುವುದರ ಬಗ್ಗೆಯೂ ಮಾಹಿತಿ ನೀಡಲಾಯಿತು.
ಈ ವೇಳೆ ಬೆಂಗಳೂರು ಕೇಂದ್ರ ಆರ್ ಟಿಓ ಅಧಿಕಾರಿ ಪಿ. ರಂಜಾನ್, ಆರ್ ಟಿಓ ಇನ್ಸ್ ಪೆಕ್ಟರ್ ನಿಸಾರ್ ಅಹಮದ್, ಹೆಚ್ ಎಸ್ ಆರ್ ಲೇಔಟ್ ಟ್ರಾಫಿಕ್ ಇನ್ಸ್ ಪೆಕ್ಟರ್ ನವೀನ್ ಕುಮಾರ್ ಕಚೇರಿಯ ಇತರ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು