ಹೈದರಬಾದ್, (www.thenewzmirror.com) :
ಭಾರತ ಕಂಡ ಸಂತ ಶ್ರೇಷ್ಠರಲ್ಲಿ ಶ್ರೀ ರಾಮಾನುಜಾಚಾರ್ಯರೂ ಒಬ್ಬರು. ವೈಷ್ಣವ ಸಂತ ಎಂದೇ ಕರೆಯಲ್ಪಡುವ ರಾಮಾನುಜಾಚಾರ್ಯರು, ವಿಶಿಷ್ಟಾದ್ವೈತ ಪಂತದ ಮೂಲಕ ಸನಾತನ ಸಂಸ್ಕೃತಿಗೆ ತಮ್ಮದೇ ಆದ ಅಪಾರ ಕೊಡುಗೆ ಕೊಟ್ಟವರು.ಅವರ 1000ನೇ ಜನ್ಮ ದಿನೋತ್ಸವ ಆಚರಿಸಲಾಗ್ತಿದೆ. ಇದರ ಅಂಗವಾಗಿ ಹೈದ್ರಾಬಾದ್ ನಲ್ಲಿ 216 ಅಡಿ ಎತ್ತರದ ಬೃಹತ್ ಪ್ರತಿಮೆ ಇದೀಗ ಲೋಕಾರ್ಪಣೆಯಾಗಿದೆ.
ರಾಮಾನುಜಾಚಾರ್ಯರು ತಮಿಳುನಾಡಿನ ಪೆರಂಬುದೂರು ಎಂಬಲ್ಲಿ ಸುಮಾರು ೧೦೧೭ರಲ್ಲಿ ಹುಟ್ಟಿದರು. ರಾಮಾನುಜ ಅವರ ಗುರುಗಳು ಯಾದವ ಪ್ರಕಾಶ.ಇವರು ಬಹು ದೊಡ್ಡ ವಿದ್ವಾಂಸರು. ಇವರು ಪ್ರಾಚೀನ ಅದ್ವೈತ ವೇದಾಂತ ಸನ್ಯಾಸ ಸಂಪ್ರದಾಯದ ಭಾಗವಾಗಿದ್ದರು.
ಸ್ವಾಮಿ ರಾಮಾನುಜಾಚಾರ್ಯರು ಭಾರತದಲ್ಲಿ ಭಕ್ತಿ ಚಳವಳಿಗೆ ಸುವರ್ಣ ಶಿಖರವನ್ನು ನಿರ್ಮಿಸಿದರು. ಅವರ ಕೃಪೆಯಿಂದ ಸಮಾಜದ ಪ್ರತಿಯೊಬ್ಬರೂ ನಾರಾಯಣ ಮಂತ್ರವನ್ನು ಜಪಿಸುವಂತಾಗಿದೆ. ಈ ಗುರುವಿನಿಂದಾಗಿ ಎಲ್ಲರಿಗೂ ಮುಕ್ತಿ ಅಷ್ಟಾಕ್ಷರಿ ಮಂತ್ರ ‘ಓಂ ನಮೋ ನಾರಾಯಣಾಯ’ ಲಭಿಸಿತು. ಎಲ್ಲರ ಶ್ರೇಯೋಭಿವೃದ್ಧಿಗಾಗಿ ರಾಮಾನುಜಾಚಾರ್ಯರು ವೇದಗಳ ಸಾರವನ್ನು 9 ಗ್ರಂಥಗಳ ರೂಪದಲ್ಲಿ ಪ್ರಸ್ತುತಪಡಿಸಿದರು.
45 ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಒಟ್ಟು ನಾಲ್ಕು ಬೃಹತ್ ಪ್ರವೇಶ ದ್ವಾರಗಳು ಹಾಗೂ ಸುಮಾರು 3000 ವಾಹನಗಳ ಪಾರ್ಕಿಂಗ್ ಸ್ಥಳವಿದೆ. ಪ್ರವೇಶ ದ್ವಾರದ ವಿನ್ಯಾಸವನ್ನು ತೆಲಂಗಾಣದ ವಿಶಿಷ್ಟವಾದ ‘ಕಾಗಡಿಯಾ’ ಶೈಲಿಯಲ್ಲಿ ಮಾಡಲಾಗಿದೆ. 18 ಅಡಿ ಮುಖ್ಯದ್ವಾರದಲ್ಲಿ ಹನುಮಾನ್ ಮತ್ತು ಗರುಡನ ಎತ್ತರದ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಸಂದರ್ಶಕರ ಅನುಕೂಲಕ್ಕಾಗಿ ಪ್ರವೇಶ ಟಿಕೆಟ್ ಕೌಂಟರ್ ಬಳಿಯೇ ಲಗೇಜ್, ಚೆಕ್-ಇನ್ ಕೌಂಟರ್ ಅನ್ನು ಸ್ಥಾಪಿಸಲಾಗಿದೆ.
ಇನ್ನು 216 ಅಡಿ ಎತ್ತರದ ರಾಮಾನುಜಾಚಾರ್ಯರ ಪ್ರತಿಮೆ ಯೋಜನೆಯ ಪ್ರಮುಖ ಅಂಶಗಳನ್ನ ನೋಡೋದಾದ್ರೆ.., 216 ಅಡಿ ಎತ್ತರದ ರಾಮಾನುಜಾಚಾರ್ಯರ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ತಾಮ್ರದಿಂದ ಮಾಡಿದ 42 ಅಡಿ ಎತ್ತರದ ಸಂಗೀತ ಕಾರಂಜಿಯನ್ನು ನಿರ್ಮಿಸಲಾಗಿದೆ. ಬಲಿಪೀಠದಲ್ಲಿ ರಾಮಾನುಜಾಚಾರ್ಯರ 54 ಇಂಚು ಎತ್ತರದ ಚಿನ್ನದ ದೇವರ ಪ್ರತಿಮೆ ಇದೆ. 24 ಕ್ಯಾರೆಟ್ ನ 120 ಕೆ.ಜಿ. ಚಿನ್ನ ಬಳಸಿ ದೇವರ ಪ್ರತಿಮೆ ನಿರ್ಮಾಣ ಮಾಡಲಾಗಿದೆ. 108 ದಿವ್ಯ ದೇಶಂ ಹಾಗೂ ಸ್ಪೂರ್ತಿ ಕೇಂದ್ರ ನಿರ್ಮಾಣ ಮಾಡಲಾಗಿದೆ. ಸಂಕೀರ್ಣದಲ್ಲಿ ಆನ್ ಲೈನ್ ಡಿಜಿಟಲ್ ಲೈಬ್ರರಿ ನಿರ್ಮಿಸಲಾಗಿದೆ. ಓಮ್ನಿಮ್ಯಾಕ್ಸ್ ಥಿಯೇಟರ್ ನಿರ್ಮಿಸಲಾಗಿದೆ.