ಬೆಂಗಳೂರು,(www.thenewzmirror.com):
ಕೋವಿಡ್ ಸಂದರ್ಭದಲ್ಲಿ ಪ್ರವಾಸೋದ್ಯಮ ವಲಯಗಳಾದ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್, ಮನರಂಜನಾ ಪಾರ್ಕ್ ಹಾಗೂ ಮತ್ತೀತರ ಕ್ಷೇತ್ರಗಳು ತೀವ್ರವಾದ ಹೊಡೆತ ಹೊಂದಿ ನಷ್ಟ ಅನುಭವಿಸಿರುತ್ತವೆ. ಆದ್ದರಿಂದ ರಾಜ್ಯ ಸರ್ಕಾರ ಪ್ರವಾಸಿ ವಲಯಗಳನ್ನು ಪುನ:ಶ್ಚೇತನಗೊಳಿಸಿ ಚಟುವಟಿಕೆಯನ್ನು ಆರಂಭಿಸಲು ಪ್ರವಾಸೋದ್ಯಮ ಭಾಗಿದಾರರ ಅನುಕೂಲಕ್ಕಾಗಿ ಆಸ್ತಿ ತೆರಿಗೆ ವಿನಾಯಿತಿಯನ್ನ ಘೋಷಿಸಿದೆ.
2021-22ನೇ ಹಣಕಾಸಿನ ಹಣಕಾಸಿನ ವರ್ಷದಲ್ಲಿ ಹೋಟೆಲ್, ರೆಸಾರ್ಟ್, ಮನರಂಜನಾ ಪಾರ್ಕ್, ರೆಸ್ಟೋರೆಂಟ್ ಗಳಿಗೆ ಶೇ. 50ರಷ್ಟು ಆಸ್ತಿ ತೆರಿಗೆ ಮಾತ್ರ ಪಾವತಿ ಮಾಡಬೇಕಿದ್ದು, ಉಳಿದ ಶೇ. 50ಕ್ಕೆ ರಿಯಾಯಿತಿ ನೀಡಲಾಗಿದೆ. ಅಷ್ಟೇ ಅಲ್ದೇ ಏಪ್ರಿಲ್, ಮೇ, ಜೂನ್-2021ನೇ ತಿಂಗಳಲ್ಲಿ ವಿದ್ಯುಚ್ಛಕ್ತಿ ಡಿಮ್ಯಾಂಡ್/ ಫಿಕ್ಸೆಡ್ ಶುಲ್ಕವನ್ನು ಪಾವತಿ ಮಾಡುವುದಿರಿಂದಲೂ ವಿನಾಯಿತಿ ನೀಡಲಾಗಿದೆ.
ಸದರಿ ಯೋಜನೆಯ ಸೌಲಭ್ಯ ಪಡೆಯಲು ಕಡ್ಡಾಯವಾಗಿ ಪ್ರವಾಸೋದ್ಯಮ ಇಲಾಖೆಯ ಕೆಟಿಟಿಎಫ್ ಕಾಯ್ದೆಯಡಿ ನೊಂದಣಿಯಾಗಿರಬೇಕು. ರೂ.500 ಗಳ ನೋಂದಣಿ ಶುಲ್ಕ ಪಾವತಿಸಿ 5 ವರ್ಷಗಳ ಅವಧಿಗೆ ನೋಂದಣಿ ಪ್ರಮಾಣ ಪತ್ರ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ www.karnatakatourism.org/kttf ಸಂಪರ್ಕಿಸುವಂತೆ ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು ಮನವಿ ಮಾಡಿದ್ದಾರೆ.