ಬೆಂಗಳೂರು,(www.thenewzmirror.com):
ನೌಕರರಿಗೆ ವೇತನ ಕೊಡೊದಿಕ್ಕೆ ಸಾಧ್ಯವಾಗದೇ ಪರದಾಡುತ್ತಿರುವ ಬಿಎಂಟಿಸಿ ಇದೀಗ ಹೊಸ ಬಸ್ ಗಳ ಖರೀದಿಗೆ ಮುಂದಾಗಿದೆ. ಇದು ಸಾಕಷ್ಟು ವಿರೋಧಕ್ಕೆ ಕಾರಣವಾಗಿದ್ದು, ಹೊಟ್ಟೆಗೆ ಹಿಟ್ಟಿಲ್ಲದಿದ್ರೂ ಜುಟ್ಟಿಗೆ ಮಲ್ಲಿಗೆ ಹೂ ಬೇಕಿತ್ತಾ ಅನ್ನೋ ಪ್ರಶ್ನೆ ಮಾಡುತ್ತಿದ್ದಾರೆ.
ಮೊದಲೇ ನೂರಾರು ಕೋಟಿ ಸಾಲದಲ್ಲಿರುವ ಬಿಎಂಟಿಸಿ ಇದೀಗ ಐದು ನೂರಕ್ಕೂ ಹೆಚ್ಚು ಹೊಸ ಬಸ್ ಗಳ ಖರೀದಿಗೆ ಮುಂದಾಗಿದೆ. ನಿಗಮ ಭಾರತದಲ್ಲಿಯೇ ಮೊಟ್ಟಮೊದಲ ಬಾರಿಗೆ BS VI ವಾಹನವನ್ನು ಖರೀದಿಸಲು ಮುಂದಾಗಿದ್ದು ಈ ವಾಹನಗಳು ಅತೀ ಶೀಘ್ರದಲ್ಲಿಯೇ ಬೆಂ.ಮ.ಸಾ.ಸಂಸ್ಥೆಗೆ ಸೇರ್ಪಡೆಗೊಳ್ಳಲಿವೆ ಎಂದು ತನ್ನ ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ಅಶೋಕ್ ಲೈಲ್ಯಾಂಡ್ ಕಂಪನಿ ಸಿದ್ಧಪಡಿಸಿರುವ BS VI ಮಾದರಿಯ ಒಟ್ಟು 565 ಬಸ್ಸುಗಳನ್ನ ಖರೀದಿಸಲು ಬಿಎಂಟಿಸಿ ಈಗಾಗಲೇ ಕಾರ್ಯಾದೇಶ ನೀಡಿದೆ. ಅದರಂತೆ ಮುಂದಿನ ವರ್ಷದ ಫೆಬ್ರವರಿ ಅಂತ್ಯದೊಳಗೆ ಎಲ್ಲಾ ಬಸ್ ಗಳು ನಿಗ ಸೇರಲಿವೆಯಂತೆ.
ಹೊಸ ಬಸ್ ಗಳ ಖರೀದಿಗೆ 2017-18 ರಲ್ಲಿಯೇ ಹಣ ಮೀಸಲಿಡಲಾಗಿತ್ತು ಎಂದು ಹೇಳಲಾಗುತ್ತಿದೆಯಾದರೂ ಅಷ್ಟು ಹಣವನ್ನ ನೌಕರರ ವೇತನ, ಪಿಎಫ್ ನೀಡಲು ಕೊಡಬಹುದಿತ್ತು ಅನ್ನೋ ಅಭಿಪ್ರಾಯವನ್ನ ಕರ್ನಾಟಕ ರಾಜ್ಯ ಸಾರಿಗೆ ಮಜ್ದೂರು ಸಂಘ ಒಕ್ಕೂಟದ ಮಾಧ್ಯಮ ಸಂಚಾಲಕ ಯೊಗೀಶ್ ಗೌಡ ಹೊರ ಹಾಕುತ್ತಿದ್ದಾರೆ.

ಇನ್ನು ಇನ್ನೋಬ್ಬ ಸಾರಿಗೆ ಮುಖಂಡ ಆನಂದ್ ಮಾತನಾಡಿ, ನೌಕಕರು ಸರಿಯಾದ ಸಮಯಕ್ಕೆ ವೇತನ ಇಲ್ಲದೇ ಪರದಾಡುತ್ತಿದ್ದಾರೆ. ಪ್ರತಿ ತಿಂಗಳೂ ನಿಗಮದ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ ಹೀಗಿರುವ ಸಮಯದಲ್ಲಿ ಹೊಸ ಬಸ್ ಗಳ ಖರೀದಿ ಅಗತ್ಯವಿತ್ತಾ ಅಂತ ಪ್ರಶ್ನೆ ಮಾಡುತ್ತಿದ್ದಾರೆ.
ತನ್ನ ಇಲಾಖೆಯಲ್ಲಿ ಇಷ್ಟೇಲ್ಲಾ ಸಮಸ್ಯೆಗಳಿದ್ದರೂ ಸಾರಿಗೆ ಸಚಿವ ಶ್ರೀರಾಮುಲು ತಲೆಕೆಡಿಸಿಕೊಳ್ಳುತ್ತಿಲ್ಲ.., ನಷ್ಟದಲ್ಲಿರುವ ನಿಗಮವನ್ನ ಇನ್ನಷ್ಟು ನಷ್ಟಕ್ಕೆ ದೂಡುವ ಕೆಲ್ಸ ಮಾಡುತ್ತಿದ್ದಾರಾ ಅನ್ನುವ ಅನುಮಾನವೂ ಕಾಡುತ್ತಿದೆ.

ಸಾಲ ಸೋಲ ಮಾಡಿ ಖರೀದಿ ಮಾಡುತ್ತಿರುವ ಹೊಸ ಬಸ್ ಗಳ ವಿಶೇಷತೆಗಳೇನು ಅನ್ನೋದನ್ನ ನೋಡುವುದಾದರೆ..,
- ಇದು ಪರಿಸರ ಸ್ನೇಹಿಯಾಗಿದ್ದು ಗಾಳಿಯ ಗುಣಮಟ್ಟವನ್ನು ಸುಧಾರಿಸಿ, ವಾತಾವರಣದ ಮಾಲಿನ್ಯವನ್ನು ಕಡಿಮೆಗೊಳಿಸುತ್ತದೆ
- ಈ ವಾಹನವು BS IV ವಾಹನಗಳಿಗಿಂತ ಹೆಚ್ಚಿನ Engine ಸಾಮರ್ಥ್ಯವನ್ನು ಹೊಂದಿರುತ್ತದೆ (197HP)
- ಈ ವಾಹನಗಳಲ್ಲಿ ಅಗ್ನಿ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕೊಡುವ ವ್ಯವಸ್ಥೆ ಇರುತ್ತದೆ