ಬಿಎಂಟಿಸಿಗೆ ಮತ್ತೆ 148 ಇವಿ ಬಸ್: ಮೊದಲ ಹಂತದ 10 ಬಸ್ ಗೆ ರಾಮಲಿಂಗಾರೆಡ್ಡಿ ಹಸಿರು ನಿಶಾನೆ

RELATED POSTS

ಬೆಂಗಳೂರು(www.thenewzmirror.com):ಪರಿಸರ ಮಾಲಿನ್ಯವಲ್ಲದ ಸಾರಿಗೆ ಸೇವೆ ಒದಗಿಸಿವ ಗುರಿ ಇರಿಸಿಕೊಂಡಿರುವ ಬಿಎಂಟಿಸಿ ಇಂದು ಹೊಸದಾಗಿ ಮತ್ತೆ 148 ವಿದ್ಯುತ್ ಚಾಲಿತ ಬಸ್ಸುಗಳನ್ನು ರಸ್ತೆಗಿಳಿಸಿದೆ. ಆ ಮೂಲಕ ಬಿಎಂಟಿಸಿ ಇವಿ ಬಸ್ ಗಳ ಸಂಖ್ಯೆ 1436 ತಲುಪಿದೆ.

ವಿಧಾನಸೌಧದ ಮುಂಭಾಗದಲ್ಲಿ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, M/s TML Smart City Mobility Solutions Ltd., ರವರ  ಮೊದಲ ಹಂತದ 10 ಸಾಮಾನ್ಯ (ಹವಾನಿಯಂತ್ರಿತವಲ್ಲದ) ಎಲೆಕ್ಟ್ರಿಕ್  ಬಸ್ಸುಗಳನ್ನು ಉದ್ಘಾಟಿಸಿದರು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಹೆಚ್ಚುವರಿಯಾಗಿ, M/s TML Smart City Mobility Solutions Ltd., ಕಂಪನಿಯ 148 ಸಾಮಾನ್ಯ (ಹವಾನಿಯಂತ್ರಿತವಲ್ಲದ) ಎಲೆಕ್ಟ್ರಿಕ್  ಬಸ್ಸುಗಳು ಸೇರ್ಪಡೆಗೊಳ್ಳುತ್ತಿದ್ದು ಅದರ ಮೊದಲ ಕಂತು ಇಂದು ಸೇರ್ಪಡೆಯಾಯಿತು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು, ಸದರಿ ಎಲೆಕ್ಟ್ರಿಕ್ ಬಸ್ಸುಗಳನ್ನು ಜಿ.ಸಿ.ಸಿ ಮಾದರಿಯಲ್ಲಿ (Gross Cost Contract), ಪ್ರತಿ ಕಿ.ಮೀ ರೂ 41.01 ರಂತೆ ವಿದ್ಯುತ್ ದರವು ಒಳಗೊಂಡಂತೆ 12 ವರ್ಷಗಳ ಅವಧಿಗೆ ಆಚರಣೆ ಮಾಡಲು ಒಪ್ಪಂದ ಮಾಡಿಕೊಂಡಿದೆ. Directorate of Urban & Land Transport (DULT) ಹಾಗೂ National Clean Air Programme (NCAP) ರವರಿಂದ ಪ್ರತಿ ಬಸ್ಸಿಗೆ ರೂ. 39.08 ಲಕ್ಷಗಳಂತೆ ಹಣಕಾಸಿನ ನೆರವು ಒದಗಿಸಲಾಗಿದೆ.

ಸಾರ್ವಜನಿಕ ಸಾರಿಗೆ ಸೇವೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಹಾಗೂ ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ವಾಹನ ಮಾಲಿನ್ಯ ತಡೆಗಟ್ಟಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಅವುಗಳ ಪೈಕಿ ಎಲೆಕ್ಟ್ರಿಕ್ ಬಸ್ಸುಗಳನ್ನು ಪರಿಚಯಿಸುತ್ತಿರುವುದು ಒಂದಾಗಿರುತ್ತದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸತತವಾಗಿ 04 ವರ್ಷಗಳಿಂದ ಎಲೆಕ್ಟ್ರಿಕ್ ಬಸ್ಸುಗಳನ್ನು ಪರಿಚಯಿಸುತ್ತಿದ್ದು, ಇಲ್ಲಿಯವರೆಗೆ 1436 ಎಲೆಕ್ಟ್ರಿಕ್ ಬಸ್ಸುಗಳು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.

ಒಟ್ಟಾರೆಯಾಗಿ, ಬೆಂ.ಮ.ಸಾ.ಸಂಸ್ಥೆಯು ಪ್ರತಿ ದಿನ 1436 ಎಲೆಕ್ಟ್ರಿಕ್ ಬಸ್ಸುಗಳನ್ನು ಆಚರಣೆ ಮಾಡುವ ಮೂಲಕ, ಸುಮಾರು 2.07 ಲಕ್ಷ ಕೆ.ಜಿ CO2  (ಇಂಗಾಲದ ಡೈ ಆಕ್ಸೈಡ್) ವಾತಾವರಣಕ್ಕೆ ಬಿಡುಗಡೆಯಾಗುವುದನ್ನು ತಡೆಗಟ್ಟುತಿದ್ದು, ಹಾಗೂ ಸುಮಾರು 77 ಸಾವಿರ ಲೀಟರ್ ಇಂಧನವನ್ನು ಉಳಿತಾಯ ಮಾಡುತ್ತಿದೆ ಇದು ಪರಿಸರ ಪೂರಕ ಸಾರಿಗೆಯೆಡೆ ದೊಡ್ಡ ಹೆಜ್ಜೆಯಾಗಿದೆ.

ಸಾಮಾನ್ಯ (ಹವಾನಿಯಂತ್ರಿತವಲ್ಲದ)  ಮಾದರಿಯ ಟಾಟಾ ತಯಾರಿಕೆಯ ಎಲೆಕ್ಟ್ರಿಕ್ ಬಸ್ಸುಗಳ ವೈಶಿಷ್ಟ್ಯತೆಗಳು:

• ಬಹುತೇಕ ಶೂನ್ಯ ಹೊರ ಸೂಸುವಿಕೆ ಹಾಗೂ ಪರಿಸರ ಸ್ನೇಹಿ ಬಸ್ಸುಗಳು.

• 12m length, low floor (400mm) height ಹವಾನಿಯಂತ್ರಿತವಲ್ಲದ ವಿದ್ಯುತ್ ಚಾಲಿತ ಬಸ್ಸುಗಳಾಗಿರುತ್ತವೆ. 

• ಒಂದು ಭಾರಿ ಛಾರ್ಜ್ಗೆ 200 ಕಿ.ಮೀ ಚಲಿಸುವ ಭರವಸೆವಿರುತ್ತದೆ. 

• ಎಲ್ಲಾ 148 ಬಸ್ಸುಗಳು ಘಟಕ-04 (ಜಯನಗರ) ರಿಂದ ಆಚರಣೆಯಾಗಲಿದೆ.

• “Opportunity Charging” ವ್ಯವಸ್ಥೆಯನ್ನು “ಕೆಂಪೇಗೌಡ ಬಸ್ ನಿಲ್ದಾಣ”, “ಕೆ ಆರ್ ಮಾರ್ಕೆಟ್”, “ಶಿವಾಜಿನಗರ ಬಸ್ ನಿಲ್ದಾಣ”, “ಬನ್ನೇರುಘಟ್ಟ ಟಿ ಟಿ ಎಂ ಸಿ” , “ಬಿ ಟಿ ಎಂ ಬಸ್ ನಿಲ್ದಾಣ”, ಹೆಬ್ಬಾಳ ಹಾಗೂ “ಮಲ್ಲಸಂದ್ರ ಬಸ್ ನಿಲ್ದಾಣ” ಗಳಲ್ಲಿ ಕಲ್ಪಿಸಲಾಗಿದೆ. 

• 35 ಪ್ರಯಾಣಿಕ ಆಸನಗಳ ಸಾಮರ್ಥ್ಯ ಹೊಂದಿದ್ದು, 1 ಗಾಲಿ ಕುರ್ಚಿ (wheel chair)  ಗೆ ಅವಕಾಶವಿರುತ್ತದೆ. 

• ಪ್ರಯಾಣಿಕರ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಲು ಬಸ್ಸಿನ ಒಳಭಾಗದಲ್ಲಿ 3 ಕ್ಯಾಮೆರಾಗಳನ್ನು ಹಾಗೂ ಚಾಲಕರಿಗೆ ಹಿಮ್ಮುಖವಾಗಿ ಚಲಿಸಲು ಅನುಕೂಲವಾಗುವಂತೆ 1 ಕ್ಯಾಮೆರಾ ಬಸ್ಸಿನ ಹಿಂಬದಿ ಅಳವಡಿಸಲಾಗಿರುತ್ತದೆ. 

• 298 kwh ಬ್ಯಾಟರಿ ಸಾಮರ್ಥ್ಯ ಹೊಂದಿರುತ್ತದೆ. 

• 4 ಎಲ್.ಇ.ಡಿ ಬೋರ್ಡ್ ಮತ್ತು ವಾಯ್ಸ್ ಅನೌನ್ಸ್ ಮೆಂಟ್ ವ್ಯವಸ್ಥೆ ಕಲ್ಪಿಸಲಾಗಿದೆ. 

• ಮಹಿಳೆಯರ ಸುರಕ್ಷತೆಗೆ 10 ತುರ್ತು ಪ್ಯಾನಿಕ್ ಅಲಾರ್ಮ್ ಬಟನ್ಗಳನ್ನು ಅಳವಡಿಸಲಾಗಿರುತ್ತದೆ. 

• ಅಗ್ನಿ ಅವಘಡಗಳನ್ನು ತಪ್ಪಿಸುವ ಸಲುವಾಗಿ “ಅಗ್ನಿ ಪತ್ತೆ ಹಾಗೂ ಎಚ್ಚರಿಕೆ ವ್ಯವಸ್ಥೆ” (FDAS-Fire Detection and Alarm System) ಒದಗಿಸಲಾಗಿರುತ್ತದೆ. 

• ವಾಹನಗಳ ಮೇಲೆ ನಿರಂತರವಾಗಿ ನಿಗಾಯಿಡಲು ವಾಹನದ ಸ್ಥಳ ಸೂಚಿಸುವ ವ್ಯವಸ್ಥೆ ಒದಗಿಸಲಾಗಿರುತ್ತದೆ. 

• ಹಿರಿಯ ನಾಗರೀಕರು, physically challenged persons ಹಾಗೂ ಗಾಲಿ ಕುರ್ಚಿ (Wheel chair) ಪ್ರಯಾಣಿಕರು ಸುಲಭವಾಗಿ ಮತ್ತು ಸುರಕ್ಷಿತವಾಗಿ ಬಸ್ಸಿನ ಒಳ ಬರಲು ಮತ್ತು ಹೊರ ಹೋಗಲು ಅನುಕೂಲವಾಗುವಂತೆ, ಬಸ್ಸಿನ ಎಡಭಾಗವು ಬಾಗುವ (kneeling option mechanism) ವ್ಯವಸ್ಥೆಯನ್ನು ಹೊಂದಿರುತ್ತದೆ. 

• ಅನಿವಾರ್ಯ ಸಂದರ್ಭಗಳಲ್ಲಿ ಪ್ರಯಾಣಿಕರು ನಿಲುಗಡೆ ಕೋರಲು ಸ್ಟಾಪ್ ಬಟನ್ ಗಳನ್ನು ಒದಗಿಸಲಾಗಿರುತ್ತದೆ. 

• ಮುಂದೆ ಮತ್ತು ಮಧ್ಯದಲ್ಲಿ ಸ್ವಯಂಚಾಲಿತ ಬಾಗಿಲುಗಳನ್ನು ಒದಗಿಸಲಾಗಿರುತ್ತದೆ. 

• ಆರಾಮದಾಯಕ ಪ್ರಯಾಣಕ್ಕಾಗಿ ಹಿಂಬದಿಯಲ್ಲಿ ಏರ್ ಸಸ್ಪೆನ್ಷನ್ ವ್ಯವಸ್ಥೆ ಒದಗಿಸಲಾಗಿರುತ್ತದೆ. 

• ವಾಹನದ ಬ್ರೇಕಿಂಗ್ ಶಕ್ತಿ ಪುನರುತ್ಪಾದಕ ವ್ಯವಸ್ಥೆಯನ್ನು ಹೊಂದಿರುತ್ತದೆ. 

ಬೆಂ.ಮ.ಸಾಸಂಸ್ಥೆಯ ವಾಹನ ಬಲವನ್ನು ವಿದ್ಯುಧೀಕರಣಗೊಳಿಸಲು, ಪ್ರಸ್ತುತ ಪ್ರಗತಿಯಲ್ಲಿರುವ ಯೋಜನೆಗಳು ಕೆಳಕಂಡಂತಿದೆ.

• ಮೆ|| Ohm Global Mobility ರವರಿಂದ 12 ಮೀ. ಉದ್ದವಿರುವ ಹವಾನಿಯಂತ್ರಿತ ಮಾದರಿಯ, 195 ಎಲೆಕ್ಟ್ರಿಕ್ ಬಸ್ಸುಗಳು (320 ಬಸ್ಸುಗಳ ಉಳಿಕೆ) ಹಂತ ಹಂತವಾಗಿ ಸೇರ್ಪಡೆಯಾಗಲಿದೆ. ಒಟ್ಟಾರೆ ವರ್ಷಾಂತ್ಯದೊಳಗೆ 1779 ಎಲೆಕ್ಟ್ರಿಕ್ ಬಸ್ಸುಗಳು ಕಾರ್ಯಾಚರಣೆಯಲ್ಲಿರುತ್ತದೆ.• PM E-Drive ಯೋಜನೆಯಡಿಯಲ್ಲಿ 400 ಹವಾನಿಯಂತ್ರಿತ ಹಾಗೂ 4100 ಸಾಮಾನ್ಯ (ಹವಾನಿಯಂತ್ರತಿತವಲ್ಲದ) ಎಲೆಕ್ಟ್ರಿಕ್ ಬಸ್ಸುಗಳನ್ನು ನಿಯೋಜಿಸಲಾಗುತ್ತದೆ ಎಂದು ಬಿಎಂಟಿಸಿ ತಿಳಿಸಿದೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist