ಬೆಂಗಳೂರು, (www.thenewzmirror.com);
ಚಾಕೊಲೇಟ್ ಪ್ರಿಯರ ಮನ ಗೆದ್ದಿರುವ ಪ್ರಸಿದ್ಧ ಕ್ಯಾಂಡಿ ಬ್ರಾಂಡ್ ಅಲ್ಪೆನ್ಲಿಬೆ, ಇದೀಗ ಮತ್ತೊಂದು ವಿಶಿಷ್ಟ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಿದೆ – ಅಲ್ಪೆನ್ಲಿಬೆ ಎಕ್ಲೇರ್ಸ್ ಪಾಪ್, ಇದು ಭಾರತದ ಮೊದಲ ಚಾಕೊಲೇಟ್-ಥರದ ಲಾಲಿಪಾಪ್ ಆಗಿದೆ. ಕೇವಲ ₹5ರಲ್ಲಿ ಲಭ್ಯವಿರುವ ಈ ಪ್ರೀಮಿಯಂ ಟ್ರೀಟ್, ಮಕ್ಕಳಿಂದ ಹಿಡಿದು ಯುವಕರವರೆಗೂ ಎಲ್ಲರಿಗೂ ಆಕರ್ಷಕವಾಗಲಿದೆ. ಈ ಲಾಲಿಪಾಪ್‌ನಲ್ಲಿಯೂ ಅದೇ ಚಾಕೊಲೇಟ್ ಥರದ ವಿಶಿಷ್ಟ ರುಚಿಯಿದೆ. ಇದು ಭಾರತದ ಮೊದಲ ಚಾಕೊಲೇಟ್ ಥರದ ಲಾಲಿಪಾಪ್ ಎಂಬ ಹೆಗ್ಗಳಿಕೆಯನ್ನು ಸಹ ಹೊಂದಿದೆ.

ಈ ಲಾಲಿಪಾಪ್‌ನ ಹೊರಭಾಗದಲ್ಲಿ ಜಗಿಯಬಹುದಾದ ಮೃದುವಾದ ಕ್ಯಾರಾಮೆಲ್ ಲೇಪವಿದ್ದು, ಮಧ್ಯಭಾಗದಲ್ಲಿ ದಟ್ಟ ಚಾಕೊಲೇಟ್ ಫಿಲ್ಲಿಂಗ್ ತುಂಬಲಾಗಿದೆ. ಇದು “ಆನ್-ದಿ-ಗೋ” ಸ್ವರೂಪದಲ್ಲಿ ಸುಲಭವಾಗಿ ಸವಿಯಬಹುದಾದ ಫಾರ್ಮ್ಯಾಟ್ ಆಗಿದ್ದು, ಹದಿಹರೆಯದವರು ಮತ್ತು ಯುವಕರ ರುಚಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ನಿಧಾನವಾಗಿ ಸವಿಯಲು ಸಾಧ್ಯವಿದೆ, ಅಥವಾ ಒಂದೇ ಬಾರಿಗೆ ಜಗಿದು ಕೂಡಾ ಸವಿಯಬಹುದು. ಒಂದು ಸಾಮಾನ್ಯ ತಿಂಡಿಗೆ ಚಾಕೊಲೆಟ್ ಥರದ ಖುಷಿಯನ್ನು ಸವರುವ ಮ್ಯಾಜಿಕ್ ಅನ್ನು ಎಕ್ಲೇರ್ಸ್ ಪಾಪ್ ಮಾಡುತ್ತದೆ.
ಎಕ್ಲೇರ್ಸ್ ಪಾಪ್ ನಮ್ಮ ಗ್ರಾಹಕರಿಗೆ ಹೊಸ ಅನುಭವ ನೀಡುವ ಉದ್ದೇಶದಿಂದ ಪರಿಚಯಿಸಲಾಗಿದೆ. ಗ್ರಾಹಕರು ಎಕ್ಲೇರ್ಸ್‌ನ ಚಾಕೊಲೇಟಿ ಸೆಂಟರ್ ಅನ್ನು ಬಹುಮಾನವಾಗಿ ಮೆಚ್ಚಿದ್ದಾರೆ ಎಂಬ ಅರಿವಿದೆ. ಹದಿಹರೆಯದವರು ಮತ್ತು ಯುವಕರು ಹೆಚ್ಚು ಇಮ್ಮರ್ಸಿವ್ ಹಾಗೂ ರಿಚ್ ಟ್ರೀಟ್‌ಗಳನ್ನು ಬಯಸುತ್ತಿರುವ ಈ ಸಂದರ್ಭದಲ್ಲಿ, ಈ ಲಾಲಿಪಾಪ್ ಒಂದು ಸ್ಮಾರ್ಟ್ ಮತ್ತು ನೈಸರ್ಗಿಕ ಕ್ರಾಂತಿ ತರಲಿದೆ ಎಂದು ಪರ್ಫೆಟಿ ವ್ಯಾನ್ ಮೆಲ್ಲೆ ಇಂಡಿಯಾದ ಮಾರ್ಕೆಟಿಂಗ್ ನಿರ್ದೇಶಕ ಗುಂಜನ್ ಖೇತನ್ ತಿಳಿಸಿದ್ದಾರೆ.