ಬೆಂಗಳೂರು(www.thenewzmirror.com): ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ. ಮುಂಗಾರು ಹಂಗಾಮಿಗೆ ಬೇಕಾದ ದಾಸ್ತಾನು ಲಭ್ಯವಿದೆ ಹಾಗಾಗಿ ರೈತರು ಯಾವುದೇ ಆತಂಕ ಪಡುವ ಅಗತ್ಯವಿರುವುದಿಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಮುಂಗಾರು ಉತ್ತಮಗೊಂಡಿದ್ದು, ಎಲ್ಲೆಡೆ ಮಳೆಯಾಗುತ್ತಿದೆ, ಕೃಷಿ ಚಟುವಟಿಕೆ ಬಿರುಸಿನಿಂದ ನಡೆಯುತ್ತಿದೆ ಆದರೆ ರಸಗೊಬ್ಬರ ಕೊರತೆಯ ಆತಂಕ ರೈತ ಸಮುದಾಯದಲ್ಲಿ ಕಂಡುಬಂದಿದ್ದು ಈ ಬಗ್ಗೆ ಯಾವುದೇ ಆತಂಕ ಬೇಡ, ಇಡೀ ರಾಜ್ಯದ ರೈತರಿಗೆ ಮುಂಗಾರು ಕೃಷಿ ಚಟುವಟಿಕೆಗೆ ಬೇಕಾದ ರಸಗೊಬ್ಬರದ ದಾಸ್ತಾನು ಇದೆ,ಅಗತ್ಯ ಬಿದ್ದರೆ ಮತ್ತಷ್ಟುದಾಸ್ತಾನು ಸಂಗ್ರಹ ಮಾಡಿಕೊಳ್ಳಲಾಗುತ್ತದೆ ಹಾಗಾಗಿ ರೈತರು ಆತಂಕಗೊಳ್ಳಬೇಕಿಲ್ಲ ಎಂದು ಕರೆ ನೀಡಿದ್ದಾರೆ, ರಸಗೊಬ್ಬರ ದಾಸ್ತಾನು ವಿವರವನ್ನು ಪ್ರಕಟಿಸಿದ್ದಾರೆ.
ಜಿಲ್ಲಾವರು ಲಭ್ಯವಿರುವ ರಸಗೊಬ್ಬರಗಳ ಅಂಕಿ ಅಂಶಗಳ ವಿವರ:








