ಇಂದಿರಾಗಾಂಧಿ ದಾಖಲೆ ಮುರಿದ ಮೋದಿ;ಬಿಜೆಪಿ ಸಂಭ್ರಮಾಚರಣೆ

RELATED POSTS

ಬೆಂಗಳೂರು(www.thenewzmirror.com): ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ದಾಖಲೆಯನ್ನು ಹಿಂದಿಕ್ಕಿ ಜವಾಹರ್ ಲಾಲ್ ನೆಹರೂ ನಂತರ ಅತಿ ಹೆಚ್ಚು ದಿನಗಳ ಕಾಲ ಸತತವಾಗಿ ಆಡಳಿತವನ್ನು ನಡೆಸಿದ ಕೀರ್ತಿಗೆ ಪಾತ್ರರಾದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯದ ಜನತೆಯ ಪರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅಭಿನಂದನೆ ಸಲ್ಲಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ನಡೆದ ಸಂಭ್ರಮಾಚರಣೆ ನಂತರ ಮಾತನಾಡಿದ ಅವರು,ಇಂದಿರಾಗಾಂಧಿ 4,077 ದಿನ ಸತತವಾಗಿ ಪ್ರಧಾನ ಮಂತ್ರಿಯಾಗಿ ಆಡಳಿತ ನಡೆಸಿ ಜನವಾಹರ್ ಲಾಲ್ ನೆಹರೂ ನಂತರದ ಸ್ಥಾನ ಪಡೆದುಕೊಂಡಿದ್ದರು ಆದರೆ ಈಗ ನಮ್ಮ ಪ್ರಧಾನಿ ನರೇಂದ್ರ ಮೋದಿ 4,078 ದಿನಗಳ ಆಡಳಿತ ನಡೆಸುವ ಮೂಲಕ ಜವಾಹರಲಾಲ್ ನೆಹರೂ ನಂತರದಲ್ಲಿ ಅತಿ ಹೆಚ್ಚು ದಿನಗಳ ಕಾಲ ಸತತವಾಗಿ ದೇಶವನ್ನು ಮುನ್ನಡೆಸುತ್ತಿರುವ ಎರಡನೇ ಪ್ರಧಾನಿ ಆಗಿ ಹೊರಹೊಮ್ಮಿ ಹೊಸ ದಾಖಲೆ ಸೃಷ್ಟಿಸಿದ್ದಾರೆ, ತುರ್ತು ಪರಿಸ್ಥಿತಿ ಹೇರಿದವರಲ್ಲ. ಯಾವುದೇ ಒಂದು ಅನುಕಂಪದ ಆಧಾರದಲ್ಲಿ ಸತತವಾಗಿ ಈ ದೇಶದ ಆಡಳಿತ ನಡೆಸುತ್ತಿಲ್ಲ ಎಂದು ತಿಳಿಸಿದರು.

ವಾಜಪೇಯಿ ನಂತರ ಬಿಜೆಪಿಯಿಂದ ಪ್ರಧಾನಿಯಾಗಿ ಮೊದಲ ಬಾರಿ ಪ್ರಮಾಣವಚನ ಸ್ವೀಕಾರ ಮಾಡಿದ ಮೋದಿ ಸತತ 3ನೇ ಬಾರಿಗೆ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ದೇಶ ಸೇವಕ,ಪ್ರದಾನ ಸೇವಕ ಎಂಬ ವಿಚಾರ ಇಟ್ಟುಕೊಂಡು ದೇಶವನ್ನು ಮುನ್ನಡೆಸುತ್ತಿದ್ದಾರೆ. ಪ್ರಾಮಾಣಿಕರಾಗಿ, ಪರಿಶ್ರಮದಿಂದ ದೇಶವನ್ನು ಅಭಿವೃದ್ಧಿ ಮಾಡುವ ಮೂಲಕ 3ನೇ ಬಾರಿಗೆ ಪ್ರಧಾನಮಂತ್ರಿಗಳಾಗಿ ಸುದೀರ್ಘವಾಗಿ ದೇಶ ಮುನ್ನಡೆಸುತ್ತಿದ್ದಾರೆ ಎಂದರು. 

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist