ಆಲಮಟ್ಟಿ ಎತ್ತರ ಹೆಚ್ಚಳಕ್ಕೂ ಮಹಾರಾಷ್ಟ್ರದಲ್ಲಿ ಪ್ರವಾಹಕ್ಕೂ ಸಂಬಂಧವಿಲ್ಲ:ಬಸವರಾಜ ಬೊಮ್ಮಾಯಿ

RELATED POSTS

ಹಾವೇರಿ(www.thenewzmirror.com): ರಾಜ್ಯದ ಆಲಮಟ್ಟಿ ಆಣೆಕಟ್ಟು ಹೆಚ್ಚಳ ಮಾಡುವುದಕ್ಕೂ, ಮಹಾರಾಷ್ಟ್ರದಲ್ಲಿ ಪ್ರವಾಹ ಸೃಷ್ಟಿಯಾಗುವುದಕ್ಕೂ ಯಾವುದೇ ಸಂಬಂಧವಿಲ್ಲ,ಮಹಾರಾಷ್ಟ್ರ ಮುಖ್ಯಮಂತ್ರಿ ಕ್ಯಾತೆ ತೆಗೆಯುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಹಾವೇರಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕದಲ್ಲಿಯೂ ಪ್ರವಾಹ ಆದಾಗ ನಮ್ಮ ಸರ್ಕಾರ ನೋಡಿಕೊಳ್ಳುತ್ತದೆ. ಅದೇ ರೀತಿ ಮಹಾರಾಷ್ಟ್ರದಲ್ಲಿ ಪ್ರವಾಹ ಉಂಟಾದರೆ ಮಹಾರಾಷ್ಟ್ರ ಸರ್ಕಾರ ನೋಡಿಕೊಳ್ಳಬೇಕು. ಆಲಮಟ್ಟಿ ಡ್ಯಾಂ ಆಗುವ ಮೊದಲೇ ಸಾಂಗ್ಲಿಯಲ್ಲಿ ಪ್ರವಾಹ ಆಗಿತ್ತು. 2005 ರಲ್ಲಿ ದೊಡ್ಡ ಪ್ರಮಾಣದ ಪ್ರವಾಹ ಆಯಿತು. ಆಗ ಕೇಂದ್ರದ ಸಿಡಬ್ಲ್ಯುಸಿ ತಂಡ ಬಂದು ಆಲಮಟ್ಟಿ ಆಣೆಕಟ್ಟಿಗೂ ಪ್ರವಾಹಕ್ಕೂ ಸಂಬಂಧ ಇಲ್ಲ ಎಂದು ವರದಿ ಕೊಟ್ಟಿತು. ಹೀಗಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಕ್ಯಾತೆ ತೆಗೆಯುವುದು ಅಸಮಂಜಸ ಇದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.

ನಮ್ಮ ರಾಜ್ಯದಲ್ಲಿ ಬಹುತೇಕ ನದಿಗಳು ಪಶ್ಚಿಮ ಘಟ್ಟದಲ್ಲಿ ಹುಟ್ಟುತ್ತವೆ. ಕೃಷ್ಣಾ, ಘಟಪ್ರಭಾ, ತುಂಗಭದ್ರಾ ಸೇರಿ ಹಲವಾರು ನದಿಗಳು ಪಶ್ಚಿಮದಲ್ಲಿ ಹುಟ್ಟು ಪೂರ್ವಕ್ಕೆ ಹರಿಯುತ್ತವೆ. ಕೆಲವು ನದಿಗಳು ಪಶ್ಚಿಮದಲ್ಲಿಯೇ ಹುಟ್ಟಿ ಅರಬ್ಬಿ ಸಮುದ್ರ ಸೇರುತ್ತವೆ. ಹೀಗಾಗಿ ಪಶ್ಚಿಮ ಘಟ್ಟದಲ್ಲಿಯೇ ಹುಟ್ಟಿ ಸಮುದ್ರ ಸೇರುವ ನೀರನ್ನು ಬಳಕೆ ಮಾಡಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅದನ್ನು ಬಳಕೆ ಮಾಡಿಕೊಳ್ಳಬೇಕಿದೆ. ತುಂಗಭದ್ರಾ ಅತಿ ಹೆಚ್ಚು ಜಲಾನಯನ ಪ್ರದೇಶ ಹೊಂದಿದೆ. ಕೃಷ್ಣಾ ನದಿಯ ಜಲಾನಯನ ಪ್ರದೇಶದಲ್ಲಿ ಈವೆಲ್ಲ ಯೋಜನೆಗಳು ಬರುತ್ತವೆ. ಸಾವಿರಾರು ಹಳ್ಳಿ ಮತ್ತು ನಗರ ಪ್ರದೇಶಗಳಿಗೆ ಕುಡಿಯೋ ನೀರು ಕೊಡುವ ತುಂಗ ಭದ್ರಾಗೆ ಸಮಸ್ಯೆಯಾಗುತ್ತದೆ ಅದನ್ನು ಸರಿದೂಗಿಸಿದರೆ ಕುಡಿಯುವ ನೀರು, ರೈತರಿಗೆ ಕೃಷಿಗೆ ನೀರು ದೊರೆಯುತ್ತದೆ. ಈ ಯೋಜನೆ ಬದಲಾವಣೆ ಮಾಡಿದರೆ ಯಾವುದೇ ಮುಳುಗಡೆ ಸಮಸ್ಯೆ ಆಗುವುದಿಲ್ಲ ಎಂದು ಹೇಳಿದರು.

ಗೊಬ್ಬರ ಸಮರ್ಪಕ ಸರಬರಾಜಾಗಲಿ:

ರಾಜ್ಯದಲ್ಲಿ ಒಟ್ಟು ಒಪನಿಂಗ್ ಸ್ಟಾಕ್ 1.7 ಲಕ್ಷ ಟನ್‌ ಮತ್ತು ಈಗ 5.74 ಲಕ್ಷ ಟನ್ ಸೇರಿ ಒಟ್ಟು 7.5 ಲಕ್ಷ ಟನ್‌ಗಿಂತ ಹೆಚ್ಚು ಸರಬರಾಜಾಗಿದೆ. ಕೇಂದ್ರದಿಂದ ಸುಮಾರು 8 ಲಕ್ಷಕ್ಕಿಂತ ಹೆಚ್ಚು ಟನ್ ಸರಬರಾಜಾಗಿದೆ. ರಾಜ್ಯದಲ್ಲಿ ಯೂರಿಯಾ ಗೊಬ್ಬರ ವಿತರಣೆಯಲ್ಲಿ ಗೊಂದಲ ಉಂಟಾಗಿದೆ. ಯಾವ ಜಿಲ್ಲೆಯಲ್ಲಿ ಎಷ್ಟು ಬೇಡಿಕೆ ಇದೆ ಎಂದು ಅಂದಾಜು ಮಾಡಲಿಲ್ಲ. ಯಾವಾಗ ಗೊಬ್ಬರದ ಕೊರತೆ ಗೊಂದಲ ಶುರುವಾಯಿತು ಆಗ ಕಾಳ ಸಂತೆಯಲ್ಲಿ ಮಾರಾಟ ಹೆಚ್ಚಾಯಿತು. ಇದರಲ್ಲಿ ಕೃಷಿ ಇಲಾಖೆ 

ಅಧಿಕಾರಿಗಳು ಸೇರಿಕೊಂಡಿದ್ದಾರೆ. ಬಡ ರೈತರಿಗೆ ಗೊಬ್ಬರ ಸಿಗುತ್ತಿಲ್ಲ. ಸರತಿಯಲ್ಲಿ ಯಾವುದೇ ಶೀಮಂತ ಅವರು ಇಲ್ಲ. ಈಗಾಗಲೇ ರಾಜ್ಯದಲ್ಲಿ 15 ಲಕ್ಷ ಟನ್ ಸ್ಟಾಕ್ ಇದೆ. 1.5 ಲಕ್ಷ ಟನ್ ಗೊಬ್ಬರ ಬರುತ್ತದೆ ಅದನ್ನು ಸರಿಯಾಗಿ ವಿತರಣೆ ಮಾಡಬೇಕು ಎಂದರು.

ರಾಜ್ಯ ಸರ್ಕಾರ ಪತ್ರ ಬರೆದ ನಂತರ ಗೊಬ್ಬರ ಸರಬರಾಜಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪತ್ರ ಬರೆದ ನಂತರ ಗೊಬ್ಬರ ಸರಬರಾಜಾಗಿದೆ ಎಂದಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೂರಿಯಾ ಗೊಬ್ಬರಕ್ಕೆ ಬಹಳಷ್ಟು ತೊಂದರೆ ಇದೆ. ಮೂರು ಬಾರಿ ಕೇಂದ್ರ ಟೆಂಡ‌ರ್ ಕರೆದರೂ ಯಾರೂ ಮುಂದೆ ಬಂದಿಲ್ಲ. ಯೂರಿಯಾ ಕೊರತೆಯ ನಡುವೆಯೂ ಕೇಂದ್ರ ಸರ್ಕಾರ ಸರಬರಾಜು ಮಾಡುತ್ತಿದೆ. ರಾಜ್ಯ ಸರ್ಕಾರ ಇದನ್ನು ಅರ್ಥ ಮಾಡಿಕೊಂಡು ಸಮರ್ಪಕವಾಗಿ ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು.

ರೈತರಿಗೆ ಕಿಸಾನ್ ಸಮ್ಮಾನ್:

ಕಿಸಾನ್ ಸಮ್ಮಾನ್ ಯೋಜನೆಯ 20 ನೇ ಕಂತಿನ ಹಣವನ್ನು ಕೇಂದ್ರ ಸರ್ಕಾರ ಇಂದು ವಾರಣಾಸಿಯಲ್ಲಿ ಬಿಡುಗಡೆ ಮಾಡಿದೆ. ಸುಮಾರು 24 ಸಾವಿರ ಕೋಟಿ ರೂ. 2 ಕೋಟಿ ರೈತರಿಗೆ ದೇಶದಲ್ಲಿ ಆಗುತ್ತದೆ. ಹಾವೇರಿಯಲ್ಲಿ 156,433 ರೈತರು 32.67 ಕೋಟಿ ರೂ. ಗದಗ ಜಿಲ್ಲೆಗೆ 1 ಲಕ್ಷ 7 ಸಾವಿರ 652 ರೈತರಿಗೆ 22.74 ಕೋಟಿ ರೂ. ಬಂದಿದೆ. ಕರ್ನಾಟಕದ 13 ಲಕ್ಷ ಜನ ರೈತರಿಗೆ 880 ಕೋಟಿ ರೂ. ಬಂದಿದೆ. ರೈತರ ಖಾತೆಗೆ ಜಮೆ ಆಗಿರುತ್ತದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೊತ್ತಾಗಬೇಕು ಎಂದರು

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist