ಬೆಂಗಳೂರು, (www.thenewzmirror.com);
ಭಾರತೀಯ ಕ್ರಿಕೆಟ್‌ನ ದಿಗ್ಗಜ ಹಾಗೂ ಹೈಪ್ರೊಫೈಲ್ ಆಂತರರಾಷ್ಟ್ರೀಯ ವ್ಯಕ್ತಿತ್ವ ಎಮ್.ಎಸ್. ಧೋನಿ, ಆನ್‌ಲೈನ್ ವಿಮಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ACKO General Insurance ಸಂಸ್ಥೆಯೊಂದಿಗೆ ಹೂಡಿಕೆದಾರ ಹಾಗೂ ಬ್ರ್ಯಾಂಡ್ ರಾಯಭಾರಿ ಎಂಬ ಎರಡೂ ಪಾತ್ರಗಳಲ್ಲಿ ಕೈಜೋಡಿಸಿದ್ದಾರೆ. ಈ ಮೂಲಕ ಧೋನಿ ಈಗ ವಿಮಾ ಮಾರುಕಟ್ಟೆಯಲ್ಲಿಯೂ ತಮ್ಮ ಅಸ್ತಿತ್ವವನ್ನು ಸಾಧಿಸಿದ್ದಾರೆ.
ACKOಯೊಂದಿಗೆ ಧೋನಿಯ ಸಹಭಾಗಿತ್ವವು ದೀರ್ಘಾವಧಿಯ ಮತ್ತು ದಿಟ್ಟ ಕ್ರಮವಾಗಿದ್ದು, ಅವರ ವೈಯಕ್ತಿಕ ಹೂಡಿಕೆಯನ್ನು ಅವರ ಕುಟುಂಬ ಸಂಸ್ಥೆ ‘ಮೈದಾಸ್ ಡೀಲ್ಸ್ ಪ್ರೈವೇಟ್ ಲಿಮಿಟೆಡ್’ ಮುಖಾಂತರ ಅವರು ಮಾಡಿದ್ದಾರೆ. ACKO ಸಂಸ್ಥೆ ತಂತ್ರಜ್ಞಾನಾಧಾರಿತ ಮತ್ತು ಗ್ರಾಹಕ-ಕೇಂದ್ರಿತ ವಿಮಾ ಪರಿಹಾರಗಳನ್ನು ನೀಡುವ ಮೂಲಕ ಹೊಸ ತಲೆಮಾರಿಗೆ ಆಕರ್ಷಕವಾಗಿ ಪರಿಣಮಿಸುತ್ತಿದೆ.

“ನಾನು ಆಟೋಮೊಬೈಲ್ ಪ್ರಿಯನಾಗಿದ್ದರಿಂದ, ವಿಮೆ ಪ್ರಕ್ರಿಯೆ ಎಷ್ಟೊಂದು ಗೊಂದಲಕಾರಿಯಾಗಿರಬಹುದು ಎಂಬುದನ್ನು ವೈಯಕ್ತಿಕವಾಗಿ ಅನುಭವಿಸಿದ್ದೇನೆ. ACKO ಸಂಸ್ಥೆ ಈ ಗೊಂದಲದ ನಡುವೆ ಸ್ಪಷ್ಟತೆ ಹಾಗೂ ಸರಳತೆಯನ್ನು ತಂದುಕೊಳ್ಳುತ್ತಿದೆ. ಈ ತಂತ್ರಜ್ಞಾನ-ಕೇಂದ್ರಿತ ದೃಷ್ಠಿಕೋನವು ನವ ಭಾರತವು ತಲುಪುತ್ತಿರುವ ಹೊಸ ವಿಮಾ ದೃಷ್ಟಿಕೋನವನ್ನು ಪ್ರತಿನಿಧಿಸುತ್ತದೆ,” ಎಂದು ಎಂ.ಎಸ್. ಧೋನಿ ಅಭಿಪ್ರಾಯ ಪಟ್ಟಿದ್ದಾರೆ.
ACKO ಸಂಸ್ಥೆ ಪ್ರಸ್ತುತ ದೇಶದಾದ್ಯಂತ 70 ದಶಲಕ್ಷಕ್ಕೂ ಅಧಿಕ ಗ್ರಾಹಕರಿಗೆ ಸೇವೆ ನೀಡುತ್ತಿದೆ. ವಾರ್ಷಿಕವಾಗಿ 2 ದಶಲಕ್ಷಕ್ಕಿಂತ ಹೆಚ್ಚು ಕ್ಲೇಮುಗಳನ್ನು ಅದು ಪ್ರಕ್ರಿಯೆಗೊಳಿಸುತ್ತಿದ್ದು, ಮೋಟಾರ್, ಪ್ರಯಾಣ ಮತ್ತು ಆರೋಗ್ಯ ವಿಮಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿದೆ. ಈ ಮೂಲಕ ACKO ಭಾರತದಲ್ಲಿ ತಂತ್ರಜ್ಞಾನ-ಚಾಲಿತ, ಆದರೆ ಮಾನವೀಯ ಸ್ಪರ್ಶವಿರುವ ವಿಮಾ ಸೇವೆಗಳ ಹೊಸ ಮಾನದಂಡ ಸ್ಥಾಪಿಸಿದೆ.
ACKO ಸಂಸ್ಥೆಯ ಸ್ಥಾಪಕ ವರುಣ್ ದುವಾ ಮಾತನಾಡಿ, “ಧೋನಿಯವರೊಂದಿಗೆ ಸಹಯೋಗವು ಕೇವಲ ಬ್ರ್ಯಾಂಡ್ ಜತೆಗಾರಿಕೆಯಷ್ಟೆ ಅಲ್ಲ, ಅದು ಹಂಚಿಕೊಂಡ ಮೌಲ್ಯಗಳ ಸಹಯೋಗ, ಅವರು ಪ್ರತಿನಿಧಿಸುವ ಶಿಸ್ತು, ವಿಶ್ವಾಸ ಮತ್ತು ಶಾಂತ ಮನಸ್ಸಿನಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವು ACKO ಬೆಳೆಸುತ್ತಿರುವ ದೃಷ್ಟಿಕೋನಕ್ಕೆ ತಾಳಮೇಳ ಹೊಂದಿದೆ ಎಂದರು.
ಧೋನಿ ಅವರ ಸೇರ್ಪಡೆ ACKO ಸಂಸ್ಥೆಗೆ ಭಾರತದ ವಿಮಾ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಇನ್ನಷ್ಟು ಬಲಪಡಿಸುವ ಅವಕಾಶ ನೀಡಿದ್ದು, ಟೆಸ್ಲಾ ಬಳಕೆದಾರರಿಗೆ ವಿಮಾ ಆಯ್ಕೆ ನೀಡಿದ ಕಂಪನಿಯಿಂದ ಹಿಡಿದು, ಈಗ ದೇಶದ ಎಲ್ಲರ ನಂಬಿಕೆ ಗೆದ್ದ ವ್ಯಕ್ತಿಯೊಂದಿಗಿನ ಸಹಭಾಗಿತ್ವವರೆಗೆ ACKO ತನ್ನ ದಿಟ್ಟ ಯಾನ ಮುಂದುವರಿಸುತ್ತಿದೆ ಎಂದು ಅಭಿಪ್ರಾಯ ಪಟ್ರು.







