ಕಾನೂನು ಸುವ್ಯವಸ್ಥೆ ವೈಫಲ್ಯಕ್ಕೆ ಗೃಹ ಸಚಿವರೇ ಹೊಣೆ:ಬಸವರಾಜ ಬೊಮ್ಮಾಯಿ

RELATED POSTS

ಹಾವೇರಿ(www.thenewzmirror.com): ಕರ್ನಾಟಕದಲ್ಲಿಯೇ ಡ್ರಗ್ಸ್ ತಯಾರಿಸಿ ಇಡಿ ದೇಶಕ್ಕೆ ಸರಬರಾಜು ಮಾಡುವ ಫ್ಯಾಕ್ಟರಿಗಳೇ ರಾಜ್ಯದಲ್ಲಿ ಆರಂಭವಾಗಿವೆ ಎಂದರೆ ರಾಜ್ಯ ಸರ್ಕಾರವೇ ಶಾಮೀಲಾಗಿದೆ. ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ವೈಫಲ್ಯಕ್ಕೆ ಗೃಹ ಸಚಿವರೇ ಹೊಣೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,‌ಕರ್ನಾಟಕದಲ್ಲಿಯೇ ಡ್ರಗ್ಸ್ ತಯಾರಿಸಿ ಇಡಿ ದೇಶಕ್ಕೆ ಸರಬರಾಜು ಮಾಡುವ ಫ್ಯಾಕ್ಟರಿಗಳೇ ರಾಜ್ಯದಲ್ಲಿ ಆರಂಭವಾಗಿವೆ ಎಂದರೆ ರಾಜ್ಯ ಸರ್ಕಾರವೇ ಶಾಮೀಲಾಗಿದೆ. ಮಹಾರಾಷ್ಟ್ರದವರು ಒಂದು ದಾಳಿ ಮಾಡಿದ್ದಾರೆ ಎಂದರೆ ಇವರು ಏನು ಕತ್ತೆ ಕಾಯುತ್ತಿದ್ದರಾ, ಯಾವ ಡಿಸಿಪಿ ವ್ಯಾಪ್ತಿಯಲ್ಲಿ ಬರುತ್ತದೆ. ಆ ಡಿಸಿಪಿಗಳನ್ನು ಸಸ್ಪೆಂಡ್ ಮಾಡಬೇಕು. ಇದಕ್ಕೆ ನೇರವಾಗಿ ಗೃಹ ಸಚಿವರು ಮತ್ತು ಗೃಹ ಇಲಾಖೆ ಹೊಣೆ ಎಂದು ಆರೋಪಿಸಿದರು.

ಸರ್ಕಾರ ಶಾಮೀಲು:

ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕೆಟ್ಟು ಬಹಳ ದಿನ ಆಗಿದೆ. ಪ್ರತಿ ದಿನ ಲೂಟಿ, ದರೋಡೆ, ಕೊಲೆ ಸುಲಿಗೆ ನಡೆಯುತ್ತಿದೆ. ಮೈಸೂರಿನಲ್ಲಿ ಹಗಲಿನಲ್ಲಿಯೇ ದರೋಡೆಯಾಗಿದೆ. ದಷ್ಟ ಚರ್ಮದ ಸರ್ಕಾರ, 

ಅನ್ನಭಾಗ್ಯದಲ್ಲೂ ಲೂಟಿ:

ಅನ್ನಭಾಗ್ಯ ಅಕ್ಕಿ ಕಳ್ಳಸಾಗಾಣಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಾವೇರಿಯಲ್ಲಿ ಅನ್ನಭಾಗ್ಯದ ಅಕ್ಕಿ ಅಕ್ರಮವಾಗಿ ಮಾರಾಟವಾಗುತ್ತಿರುವ ಬಗ್ಗೆ ಜನರೇ ಹಿಡಿದುಕೊಟ್ಟರೂ ಅಧಿಕಾರಿಗಳು ಬಂದಿಲ್ಲ. ಬಡವರಿಗೆ ಅಕ್ಕಿ ಕೊಡುವಲ್ಲಿಯೂ ರೇಷನ್ ಕಾರ್ಡ್‌ಗೆ ಪರ್ಸಂಟೇಜ್ ಫಿಕ್ಸ್ ಮಾಡಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಹೊರ ರಾಜ್ಯ ಮತ್ತು ಹೊಟೇಲ್‌ಗಳಿಗೆ ಹೋಗುತ್ತಿದೆ. ಅನ್ನಭಾಗ್ಯ ಅಕ್ಕಿಯ ಲೂಟಿಯಲ್ಲಿ ಅಧಿಕಾರಿಗಳ ಪಾಲಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ 54 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಬೆಳೆದಿದೆ. ಇವರು 10 ಲಕ್ಷ ಮೆಟ್ರಿಕ್ ಟನ್ ಖರೀದಿಸುವುದಾಗಿ ಹೇಳಿದ್ದರು. ಇದುವರೆಗೂ ಐವತ್ತು, ಆರವತ್ತು ಮೆಟ್ರಿಕ್ ಟನ್ ಖರೀದಿ ಮಾಡಿರಬೇಕು. ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಏಜೆನ್ಸಿ ನಿಗದಿ ಮಾಡಿಲ್ಲ. ಸುಮ್ಮನೆ ಮೊಲ್ಯಾಸಿಸ್ ನವರಿಗೆ ಖರೀದಿಸುವಂತೆ ಹೇಳಿದರೆ ಆಗುವುದಿಲ್ಲ. ರಾಜ್ಯ ಸರ್ಕಾರ ಖರೀದಿ ಕೇಂದ್ರ ಆರಂಭಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ಇಲ್ಲದಿದದ್ದರೆ ರೈತರಿಗೆ ಅನ್ಯಾಯವಾಗಲಿದೆ. ಸಿಎಂ ಹೇಳಿ ಒಂದು ತಿಂಗಳಾಯಿತು. ಇದುವರೆಗೂ ಖರೀದಿ ಕೇಂದ್ರ ತೆರೆದಿಲ್ಲ. ಸುಮಾರು 20 ಜಿಲ್ಲೆಗಳಲ್ಲಿ ಮೆಕ್ಕೆಜೋಳ ಬೆಳೆಯುವ ರೈತರನ್ನು ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿದರು.

ನೋಂದಣಿಯಾದ ರೈತರು ಟ್ಯಾಕ್ಟರ್‌ನಲ್ಲಿ ತಂದು ನಿಲ್ಲಿಸಿದ್ದಾರೆ. ತೂಕ ಕಡಿಮೆಯಾಗುತ್ತಿದೆ. ರೈತರ ಹೊಲಗಳಲ್ಲಿ ಹಾಳಾಗುತ್ತಿದೆ. ಇಲ್ಲಿಂದ ಶಿಕಾರಿಪುರಕ್ಕೆ ತೆಗೆದುಕೊಂಡು ಹೋಗುವಂತೆ ಹೇಳುತ್ತಾರೆ. ಅಲ್ಲಿ ರಾತ್ರಿಯೆಲ್ಲಾ ರೈತರು ಕಾಯಬೇಕು. ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯಲ್ಲಿ ಇದು ಒಂದು ಎಂದು ಹೇಳಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist