ಬೆಂಗಳೂರು(www.thenewzmirror.com):ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 2,13,192 ಅಪಘಾತಗಳು ಸಂಭವಿಸಿದ್ದು ಅವುಗಳಲ್ಲಿ ಅರವತ್ತು ಸಾವಿರದ ನೂರಾ ಹದಿನೈದು ಜನ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿಯನ್ನು ಕರ್ನಾಟಕ ರಾಜ್ಯ ಕಾನೂನು ಸೇವಾ ಆಯೋಗ ನೀಡಿದ್ದು ಜನಜಾಗೃತಿಗೆ ಕರೆ ನೀಡಿದೆ.
ಇಂದು ಕರ್ನಾಟಕ ರಾಜ್ಯ ಕಾನೂನು ಸೇವಾ ಆಯೋಗದ ವತಿಯಿಂದ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ರಸ್ತೆ ಸುರಕ್ಷತಾ ಸ್ತಾಹದ ಕುರಿತು ಹೈಕೋರ್ಟ್ ನಲ್ಲಿ ಸಭೆ ನಡೆಯಿತು.
ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 2,13,192 ಅಪಘಾತಗಳು ಸಂಭವಿಸಿದ್ದು ಅವುಗಳಲ್ಲಿ ಅರವತ್ತು ಸಾವಿರದ ನೂರಾ ಹದಿನೈದು ಜನ ಸಾವನ್ನಪ್ಪಿದ್ದಾರೆ. ಇನ್ನು 2025 ರಲ್ಲಿ ಕೇವಲ ಮೊದಲ ಆರು ತಿಂಗಳಿನಲ್ಲಿ 21,937 ಅಪಘಾತಗಳು ಸಂಭವಿಸಿದ್ದು 5, 975 ಸಾವು ಸಂಭವಿಸಿವೆ. ಈ ಸಂಖ್ಯೆಯು ಆಘಾತಕಾರಿಯಾಗಿದ್ದು ಇದರ ಕುರಿತು ಜನರಿಗೆ ಅರಿವು ಮೂಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ಜನವರಿ 1 ರಿಂದ ಇಡೀ ತಿಂಗಳು ರಸ್ತೆ ಸುರಕ್ಷತಾ ಮಾಸಾಚರಣೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಐಪಿಎಸ್ ಅಧಿಕಾರಿಗಳಾದ ಟ್ರಾಫಿಕ್ ಡಿಸಿಪಿ ಅನೂಪ್ ಶೆಟ್ಟಿಯಲರವರು, ಜಿಲ್ಲಾ ಕಾನೂನು ಸೇವಾ ಆಯೋಗದ ಮುಖ್ಯಸ್ಥರಾದ ಶಶಿಧರಶೆಟ್ಟಿಯವರು, ಸಾರಿಗೆ ಇಲಾಖೆಯ ಕಮೀಷನರ್ ಯೋಗೇಶ್ ಅವರು, ಜಂಟಿ ಆಯುಕ್ತರಾದ ಮಲ್ಲಿಕಾರ್ಜುನ್ ಅವರು, ಬೆಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಪ್ರವೀಣ್ ಗೌಡ ಅವರು ಭಾಗವಹಿಸಿದ್ದರು. ಸಭೆಯಲ್ಲಿ ರಸ್ತೆ ಅವಘಡಗಳಲ್ಲಿ ತಡೆಯುವ ಕುರಿತು ಚರ್ಚಿಸಲಾಯಿತು.







