ಮೆಟ್ರೋದಲ್ಲಿ ನಿಯಮ ಪಾಲಿಸಿ: ಬಿಎಂಆರ್‌ಸಿಎಲ್ ಮನವಿ

Metro fare hike; BMRCL gave a shock to the people of Bengaluru at the threshold of the budget.

RELATED POSTS

ಬೆಂಗಳೂರು(www.thenewzmirror.com):ಪ್ರಯಾಣಿಕರಲ್ಲಿ ನಿಯಮಗಳನ್ನು ಪಾಲಿಸಲು ಬಿಎಂಆರ್‌ಸಿಎಲ್ ನಿಂದ ವಿಶೇಷ ಜಾಗೃತಿ ಅಭಿಯಾನ ನಡೆಸಿದ್ದು,ಕಳೆದ ಒಂದು ವರ್ಷದಲ್ಲಿ  57,538 ಪ್ರಯಾಣಿಕರು, ಜೋರಾಗಿ ಸಂಗೀತ ಕೇಳುವುದನ್ನು ಪತ್ತೆ ಮಾಡಿ ತಿಳಿಹೇಳುವ ಕೆಲಸವನ್ನು ನಮ್ಮ ಮೆಟ್ರೋ ಸಿಬ್ಬಂದಿ ಮಾಡಿದ್ದು, ಇದೀಗ ನಿಯಮ ಪಾಲಿಸದಿದ್ದಲ್ಲಿ ದಂಡದ ಎಚ್ಚರಿಕೆಯನ್ನು ನಮ್ಮ ಮೆಟ್ರೋ ನೀಡಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಮೆಟ್ರೋ ರೈಲುಗಳಲ್ಲಿ ಪ್ರಯಾಣಿಕರ ಜವಾಬ್ದಾರಿಯುತ ವರ್ತನೆ ಹಾಗೂ ಪ್ರಯಾಣದಲ್ಲಿ ಪಾಲಿಸಬೇಕಾದ ನಿಯಮಗಳನ್ನು ಬಲಪಡಿಸುವ ಉದ್ದೇಶದಿಂದ ವಿಶೇಷ ಜಾಗೃತಿ ಅಭಿಯಾನವನ್ನು ಕೈಗೊಂಡಿದೆ. ಮೆಟ್ರೋ ರೈಲುಗಳು ಸಾರ್ವಜನಿಕರ ಸಂಚಾರಕ್ಕಿದ್ದು, ಸುರಕ್ಷಿತ, ಆರಾಮದಾಯಕ ಮತ್ತು ಸುಖಕರ ಪ್ರಯಾಣಕ್ಕಾಗಿ ಎಲ್ಲಾ ಪ್ರಯಾಣಿಕರ ಸಹಭಾಗಿತ್ವ ಅಗತ್ಯವಿದೆ ಎಂದು ತಿಳಿಸಿದೆ.

ಮೆಟ್ರೋ ರೈಲುಗಳಲ್ಲಿ ಹೆಡ್ ಫೋನ್ ಇಲ್ಲದೆ ಸಂಗೀತ ಕೇಳುವುದು, ಆಹಾರ ಸೇವಿಸುವುದು ಅಥವಾ ತಂಬಾಕು ಸೇವನೆ ಮಾಡುವುದು ಸಹ ಪ್ರಯಾಣಿಕರಿಗೆ ತೊಂದರೆಯನ್ನು ಉಂಟುಮಾಡುತ್ತದೆ. ಅದೇ ರೀತಿ, ಹಿರಿಯ ನಾಗರಿಕರಿಗೆ, ಗರ್ಭಿಣಿ ಮಹಿಳೆಯರಿಗೆ, ಅಂಗವಿಕಲರಿಗೆ ಮತ್ತು ಅಗತ್ಯವಿರುವವರಿಗೆ ಮೀಸಲು ಆಸನಗಳನ್ನು ಬಿಟ್ಟುಕೊಡುವುದು ಎಲ್ಲರ ಕರ್ತವ್ಯವಾಗಿದೆ. ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ಬಿಎಂಆರ್‌ಸಿಎಲ್ ವಿಶೇಷ ಜಾಗೃತಿ ಅಭಿಯಾನವನ್ನು, ಇಬ್ಬರು ಗೃಹ ರಕ್ಷಕರನ್ನೊಳಗೊಂಡ (ಹೋಮ್ ಗಾರ್ಡ್‌ಗಳು) ವಿಶೇಷ ತಂಡಗಳನ್ನು ಮೆಟ್ರೋ ರೈಲುಗಳಲ್ಲಿ ನಿಯೋಜಿಸಿ, ಪ್ರಯಾಣಿಕರಿಗೆ ತಿಳುವಳಿಕೆ ನೀಡುವ ಹಾಗೂ ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗಿದೆ ಎಂದು ಮೆಟ್ರೋ ನಿಗಮ ತಿಳಿಸಿದೆ.

ಒಂದು ವರ್ಷದ ಈ ಅಭಿಯಾನದ ವಿಶ್ಲೇಷಣೆಯಲ್ಲಿ ಕೆಳಕಂಡ ಅಂಶಗಳು ಕಂಡುಬಂದಿವೆ:

57,538 ಪ್ರಯಾಣಿಕರು, ಜೋರಾಗಿ ಸಂಗೀತ ಕೇಳುವುದು,

37,038 ಪ್ರಯಾಣಿಕರು, ಅಗತ್ಯವಿರುವವರಿಗೆ ಮೀಸಲು ಆಸನಗಳನ್ನು ಬಿಡದೆ ಬಳಸಿರುವುದು,

1,907 ಪ್ರಯಾಣಿಕರು, ರೈಲುಗಳೊಳಗೆ ಆಹಾರ ಸೇವಿಸುತ್ತಿರುವುದು,

1,677 ಪ್ರಯಾಣಿಕರು ತಂಬಾಕು ಉತ್ಪನ್ನಗಳ ಸೇವನೆ ಮಾಡುತ್ತಿರುವುದು ಕಂಡುಹಿಡಿಯಲಾಗಿದೆ.

ಮೆಟ್ರೋ ರೈಲ್ವೇಸ್ (ಆಪರೇಷನ್ ಅಂಡ್ ಮೆಂಟೆನನ್ಸ್) ಕಾಯ್ದೆ, 2002ರ ಅಡಿಯಲ್ಲಿ, ಸಹ ಪ್ರಯಾಣಿಕರಿಗೆ ತೊಂದರೆ ಉಂಟುಮಾಡಿದ್ದಲಿ, ಕೆಲವು ಅಪರಾಧಗಳು ದಂಡಕ್ಕೆ ಒಳಪಡುತ್ತವೆ ಎಂಬುದನ್ನು ಬಿಎಂಆರ್‌ಸಿಎಲ್ ಪ್ರಯಾಣಿಕರಿಗೆ ತಿಳಿಸಲು ಬಯಸುತ್ತದೆ.ಮೆಟ್ರೋ ರೈಲುಗಳಲ್ಲಿ ಪ್ರಯಾಣಿಸುವಾಗ ನಿಯಮಗಳನ್ನು ಪಾಲಿಸುವಲ್ಲಿ, ಎಲ್ಲಾ ನಮ್ಮ ಮೆಟ್ರೋ ಪ್ರಯಾಣಿಕರ ನಿರಂತರ ಸಹಕಾರವನ್ನು ಬಿಎಂಆರ್‌ಸಿಎಲ್ ಕೋರುತ್ತದೆ. ರೈಲುಗಳೊಳಗೆ, ಸಂಗೀತ ಕೇಳುವಾಗ ಇಯರ್‌ಫೋನ್‌ ಗಳನ್ನು ಬಳಸುವುದು, ಅಗತ್ಯವಿರುವವರಿಗೆ ಮೀಸಲು ಆಸನಗಳನ್ನು ನೀಡುವುದು, ಆಹಾರ ಸೇವನೆ ಮಾಡದಿರುವುದು ಮತ್ತು ತಂಬಾಕು ಸೇವನೆ ಮಾಡದಿರುವುದು, ಇತ್ಯಾದಿ ಸರಳ ಕ್ರಮಗಳು, ಹೆಚ್ಚು ಸುಖಕರ ಹಾಗೂ ಸುಗಮ ಪ್ರಯಾಣದ ವಾತಾವರಣ ನಿರ್ಮಿಸಲು ಮಹತ್ವದ ಪಾತ್ರ ವಹಿಸುತ್ತವೆ‌ಎಂದು ತಿಳಿಸಿದೆ.

ನಮ್ಮ ಮೆಟ್ರೋದಲ್ಲಿ ಪ್ರತಿಯೊಂದು ಪ್ರಯಾಣವೂ ಎಲ್ಲರಿಗೂ ಸುರಕ್ಷಿತ, ಆರಾಮದಾಯಕ ಮತ್ತು ಆನಂದಕರವಾಗಿರಲು ಸಹ ಪ್ರಯಾಣಿಕರ ಸೌಜನ್ಯ, ಸಹನೆ ಮತ್ತು ಪರಸ್ಪರ ಗೌರವವನ್ನು ತೋರಿಸುವಂತೆ ಎಲ್ಲಾ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಮನವಿ ಮಾಡಿದೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist