ಜನವರಿಯಲ್ಲಿ 4,894 ಟನ್ ಸೋಪ್ ಉತ್ಪಾದನೆ:ಕೆಎಸ್ ಡಿಎಲ್ ದಾಖಲೆ

RELATED POSTS

ಬೆಂಗಳೂರು(www.thenewzmirror.com):ದುಬಾರಿ ಹಣ ನೀಡಿ ತಮನ್ನಾ ಭಾಟಿಯಾರನ್ನು ಪ್ರಚಾರ ರಾಯಭಾರಿಯನ್ನಾಗಿ ಮಾಡಿಕೊಂಡು ಟೀಕೆಗೆ ಗುರಿಯಾಗಿದ್ದ ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು (ಕೆಎಸ್ಡಿಎಲ್) ಈ ವರ್ಷದ ಜನವರಿಯಲ್ಲಿ ಒಟ್ಟು 4,894 ಮೆಟ್ರಿಕ್ ಟನ್ ಸೋಪ್ ಉತ್ಪನ್ನ ಉತ್ಪಾದನೆ ಮಾಡುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ.

ಈ ಕುರಿತು ಮಾಹಿತಿ ನೀಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ, ಜನವರಿ ತಿಂಗಳಲ್ಲಿ ಸಾಬೂನು ವಿಭಾಗದಲ್ಲಿ 3,798 ಟನ್, ಮಾರ್ಜಕಗಳ ವಿಭಾಗದಲ್ಲಿ 941 ಟನ್ ಮತ್ತು ಕಾಸ್ಮೆಟಿಕ್ಸ್ ವಿಭಾಗದಲ್ಲಿ 155 ಟನ್ ಉತ್ಪಾದನೆ ನಡೆದಿದೆ.ಕೆಎಸ್ಡಿಎಲ್ ಈ ಹಿಂದೆ 2020ರ ಸೆಪ್ಟೆಂಬರ್ ನಲ್ಲಿ 3,113 ಟನ್, 2021ರ ನವೆಂಬರ್ ನಲ್ಲಿ 2,744  ಟನ್, 2022ರ ಸೆಪ್ಟೆಂಬರ್ ನಲ್ಲಿ 3,650 ಟನ್, 2023ರ ನವೆಂಬರ್ ನಲ್ಲಿ 4,144 ಟನ್, 2025ರ ಮಾರ್ಚ್ ನಲ್ಲಿ 4,486 ಟನ್, 2025ರ ಡಿಸೆಂಬರ್ ನಲ್ಲಿ 4,735 ಟನ್ ಉತ್ಪಾದನೆ ಮೂಲಕ ದಾಖಲೆ ನಿರ್ಮಿಸಿತ್ತು ಎಂದು ತಿಳಿಸಿದ್ದಾರೆ.

ಉತ್ತರ ಭಾರತ ಮತ್ತು ವಿದೇಶಗಳಲ್ಲಿ ಮಾರುಕಟ್ಟೆ ವಿಸ್ತರಣೆ ಮತ್ತು ಬ್ರ್ಯಾಂಡಿಂಗ್ ಬಲವರ್ಧನೆಗೆ ವ್ಯಾಪಕ ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಮೂರು ಪಾಳಿಗಳಲ್ಲಿ  ನಿರಂತರ ಮತ್ತು ಗುಣಮಟ್ಟದ ಉತ್ಪಾದನಾ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ.ಸಂಸ್ಥೆಯ ವತಿಯಿಂದ ಈಗ 45ಕ್ಕೂ ಹೆಚ್ಚು ಉತ್ಪನ್ನಗಳಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ಪನ್ನಗಳನ್ನು ಪರಿಚಯಿಸಲಾಗುವುದು. ಸಂಸ್ಥೆಯ ವಹಿವಾಟನ್ನು 2030ರ ವೇಳೆಗೆ 5,000 ಕೋಟಿ ರೂಪಾಯಿ ಮಟ್ಟಕ್ಕೆ ಕೊಂಡೊಯ್ಯಲಾಗುವುದು ಎಂದು ಕೆಎಸ್ ಡಿ ಎಲ್ ಅಧ್ಯಕ್ಷರೂ ಆದ ಶಾಸಕ ಸಿ.ಎಸ್.ನಾಡಗೌಡ ಅವರು ತಿಳಿಸಿದ್ದಾರೆ.

ಹೆಚ್ಚುವರಿ ಸಿಬ್ಬಂದಿಯ ನೇಮಕವಾಗಲಿ ಅಥವಾ ಹೊಸ ಯಂತ್ರೋಪಕರಣಗಳ ಖರೀದಿಯಾಗಲಿ ಮಾಡದೆ, ಹಾಲಿ ಇರುವ ವ್ಯವಸ್ಥಯಿಂದಲೇ ಇಷ್ಟು ದಾಖಲೆ ಪ್ರಮಾಣದ ಉತ್ಪಾದನೆ ಮಾಡಲಾಗಿದೆ. ಇದಕ್ಮೆ ಶ್ರಮಿಸಿದ ಎಲ್ಲ ಸಿಬ್ಬಂದಿಗೆ ಅಭಿನಂದಿಸುತ್ತೇನೆ ಎಂದು ಕೆಎಸ್ ಡಿ ಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ ತಿಳಿಸಿದ್ದಾರೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist