ಹುಬ್ಬಳ್ಳಿ(www.thenewzmirror.com): ಹಿಂದೂಗಳು ಅಭಿವೃದ್ದಿಯಾದರೆ ಭಾರತದ ಅಭಿವೃದ್ದಿಯಾಗುತ್ತದೆ. ಹಿಂದೂ ಆರ್ಥಿಕತೆ ಬೆಳೆಯಬೇಕೆಂದರೆ ದ್ವಿತೀಯ ಹಾಗೂ ತೃತಿಯ ಹಂತದ ನಗರಗಳ ಕಡೆಗೆ ಹೆಚ್ಚು ಗಮನ ಹರಿಸಬೇಕು. ಆಗ ಭಾರತ ವಿಶ್ವದ ನಂಬರ್ ಒನ್ ದೇಶ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.
ಇಂದು ಹುಬ್ಬಳ್ಳಿಯ ಡೆನಿಸನ್ಸ್ ಹೊಟೇಲ್ ನಲ್ಲಿ ಹಿಂದೂ ಏಕನಾಮಿಕ್ಸ್ ಫೋರಮ್ ಇವರ ವತಿಯಿಂದ ಏರ್ಪಡಿಸಿದ ನ್ಯಾಷನಲ್ ಚಾಪ್ಟರ್ಸ್ ಮೀಟ್ 2026 ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮನುಷ್ಯ ಜನ್ಮ ಅತ್ಯಂತ ಶ್ರೇಷ್ಠ ವಾಗಿರುವ ಜನ್ಮ ಈ ಮನುಷ್ಯನಿಗೆ ಭಗವಂತ ಬುದ್ದಿ ಕೊಟ್ಡಿದ್ದಾನೆ, ಭಾವನೆಗಳನ್ನು ಕೊಟ್ಡಿದ್ದಾನೆ. ಮಾತನಾಡಲು ಕೊಟ್ಟಿದ್ದಾನೆ ಮಿಕ್ಕಿದ್ದೆಲ್ಲವನ್ನು ಮಾಡಲು ಅವನಿಗೆ ಬಿಟ್ಟಿದ್ದಾನೆ. ನಿನ್ನ ಸ್ವಂತ ಜೀವನ ಹೇಗೆ ನಿರ್ಮಾಣ ಮಾಡಿಕೊಳ್ಳಬೇಕು ಅಂತ ಬಿಟ್ಡಿದ್ದಾನೆ. ನಾವು ಭೂಮಿಯ ಮೇಲೆ ಶೇ 1/3 ರಷ್ಟು ಇದ್ದೇವೆ. ನಾವು ವಿಶ್ವ ಮಟ್ಟದಲ್ಲಿ ನಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕು. ನಾವು ಗಡಿಗಳಿಂದ ವಿಂಗಡಣೆಯಾಗಿದ್ದೆವೆ. ವಿಶ್ವ ಧರ್ಮಾಧಾರದಲ್ಲಿ ವಿಂಗಡಣೆಯಾಗಿದೆ. ಪಾಶ್ಚಿಮಾತ್ಯ ಜಗತ್ತು ಕ್ರಿಶ್ಚಿಯನ್ ಧರ್ಮದಿಂದ ಗುರುತಿಸಿಕೊಂಡಿವೆ. ದೇವರು ಸೃಷ್ಟಿ ಮಾಡಿ ಬಿಟ್ಟಿದ್ದಾನೆ. ಬುದ್ದಿವಂತ ಜನರು ಮಾತ್ರ ಈ ವಿಶ್ವದಲ್ಲಿ ಯಶಸ್ವಿಯಾಗುತ್ತಾರೆ ಎಂದರು.
ನಾವು ಸಿಂಧೂ ನದಿಯ ಪ್ರದೇಶದಲ್ಲಿ ಇರುವುದರೀಂದ ನಾವು ಹಿಂದು ಎಂದು ಕರೆಯಲ್ಪಡುತ್ತೇವೆ. ಸುದೈವದಿಂದ ನಾವು ವಿಶ್ವವನ್ನು ಗೆಲ್ಲಬಹುದು. ನಮ್ಮ ಮೂಲ ಸನಾತನ ಧರ್ಮದಲ್ಲಿ ನಮಗೆ ಧರ್ಮ ಇದೆ. ನಮ್ಮ ಜಿವನದಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷ ನಾಲ್ಕು ಪುರುಷಾರ್ಥಗಳಿವೆ. ನಮ್ಮ ಇಡಿ ಜೀವನ ಏನು ಮಾಡಬೇಕು, ಏನು ಮಾಡಬಾರದು, ನಾವು ಹೇಗೆ ಬೆಳೆಯಬೇಕು ಎನ್ನುವುದು ಪುರುಷಾರ್ಥ ಎನ್ನುತ್ತೇವೆ. ಮನಷ್ಯ ಆಸ್ತಿ, ಸಂಸ್ಕೃತಿ, ಸಂಸ್ಕಾರ ಸೃಷ್ಟಿಸಬೇಕು. ಅದು ಪುರುಷಾರ್ಥ, ನಮ್ಮ ವೇದಗಳಲ್ಲಿ ಅರ್ಥಶಾಸ್ತ್ರ ಎನ್ನುತ್ತೇವೆ. ಬಸವಣ್ಣ ಕಾಯಕವೇ ಕೈಲಾಸ ಅಂತ ಹೇಳಿದರು. ಕನ್ನಡದಲ್ಲಿ ಇನ್ನೊಂದು ಮಾತಿದೆ ದುಡ್ಡೆ ದೊಡ್ಡಪ್ಪ ಅಂತ ಅಂದರೆ ಹಣವೇ ದೊಡ್ಡದು. ಆದರೆ, ಈಗ ಕಾಲ ಬದಲಾಗಿದೆ. ಈಗ ಬಡವ ಶ್ರೀಮಂತ ಅಂತ ಇಲ್ಲ. ಈಗ ಬಡವನೂ ದೊಡ್ಡ ಶ್ರೀಮಂತ ಆಗಬಹುದು, ಈಗ ದುಡಿಮೆಯೇ ದೊಡ್ಡಪ್ಪ ಆಗಿದೆ. ಲಕ್ಷ್ಮೀ ಚಂಚಲೆ, ಅವಳು ಹಾಗೇ ಇರಬೇಕು. ಕೇವಲ ಒಬ್ಬರ ಬಳಿ ಇದ್ದರೆ ಸಮಸ್ಯೆಯಾಗುತ್ತದೆ ಎಂದರು.
ಹಸಿವಿರಬೇಕು:
ನಾನು ಹೇಳಲು ಹೊರಟಿರುವುದು ಹಿಂದೂ ನಂಬಿಕೆ, ತತ್ವಜ್ಞಾನ ಹಿಂದೂ ಆಚರಣೆಗಳ ಬಗ್ಗೆ ಹೇಳಲು ಬಯಸುತ್ತಿದ್ದೆ. ಮನುಷ್ಯ ಧರ್ಮದಿಂದ ಬದುಕಬೇಕು. ಸತ್ ಕಾರ್ಯ, ಸನ್ಮಾರ್ಗ, ಸತ್ಯ ಮಾರ್ಗದಲ್ಲಿ ನಡೆಯಬೇಕು. ಈ ಮಾರ್ಗದಲ್ಲಿ ನಡೆದರೆ ನಿಜವಾದ ಅರ್ಥ ಆಗುತ್ತದೆ. ಕೆಲಸ ನಡೆಯಲೇಬೇಕು, ಆಸಕ್ತಿ ಇದ್ದಾಗ ಮಾತ್ರ ಏನಾದರೂ ಮಾಡಲು ಸಾಧ್ಯವಿದೆ. ಜೀವನದಲ್ಲಿ ಹಸಿವು ಇಲ್ಲದಿದ್ದರೆ ಬೆಳೆಯಲು ಸಾಧ್ಯವಿಲ್ಲ. ಕೊನೆಯ ಉಸಿರುರುವ ತನಕ ಹಸಿವು ಇರಬೇಕು. ಅದು ಹಿಂದೂ ತತ್ವಜ್ಞಾನ. ನೀವು ಜಗತ್ತು ಗೆಲ್ಲಬೇಕೆಂದರೆ ಹಸಿವು ಇರಬೇಕು ಎಂದರು.
ಅಲೆಕ್ಷಾಂಡರ್ ಜಗತ್ತು ಗೆಲ್ಲಬೇಕೆಂದು ಮಹತ್ವಾಕಾಂಕ್ಷೆ ಹೊಂದಿದ್ದ ಅದಕ್ಕೆ ಜಗತ್ತು ಆಳಿದ. ಮೊದಲು ಯಾರ ಬಳಿ ಭೂಮಿ ಇತ್ತೊ ಅವರು ಜಗತ್ತನ್ನು ಆಳಿದರು. ನಂತರ ಯಾರ ಬಳಿ ಹಣ ಇತ್ತೊ ಅವರು ಜಗತ್ತು ಆಳಿದರು. ಇಂಗ್ಲೆಂಡ್ ನಮ್ಮ ಕರ್ನಾಟಕದಷ್ಟಿದೆ ಅವರು ಜಗತ್ತು ಆಳಿದರು. ಈಗ ಭೂಮಿ ಇದ್ದವರು, ಹಣ ಇದ್ದವರದಲ್ಲಾ, ಈಗ ಜ್ಞಾನ ಇದ್ದವರ ಕಾಲ. ಇದು ಜ್ಞಾನದ ಯುಗ. ಈ ಫೋರಂ 21 ನೇ ಶತಮಾನಕ್ಕೆ ಸಜ್ಜಾಗಿರಬೇಕು. ಎಐಯನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಯನ ಆಗಬೇಕು:
ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವ ದೇಶ ನಮ್ಮದು. ಇಲ್ಲಿ ಹಿಂದೂಗಳು ದೊಡ್ಡ ಮಟ್ಟದ ಗ್ರಾಹಕರು, ದೊಡ್ಡ ಮಾರುಕಟ್ಟೆ ಹೊಂದಿದ್ದೇವೆ. ಅದರಲ್ಲಿ ಉತ್ಪಾದನೆಯಲ್ಲಿ ನಮ್ಮ ಷೇರು ಎಷ್ಟಿದೆ ಎಂದು ತಿಳಿಯಬೇಕು, ಈ ಬಗ್ಗೆ ಅಧ್ಯಯನವಾಗಬೇಕು. ನಮ್ಮದನ್ನು ಉತ್ಪಾದನಾ ಓರಿಯಂಟೆಡ್ ಸಮಾಜವನ್ನಾಗಿ ಮಾಡಬೇಕು. ಗುಣಮಟ್ಟದ ಉತ್ಪಾದನೆ ಮಾಡಬೇಕು. ಮೊದಲು ನಮ್ಮ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಿ ನಂತರ ವಿಶ್ವ ಮಾರುಕಟ್ಟೆಗೆ ಹೋಗಬೇಕು. ಮಾರಾಟ ಮಾಡುವುದಷ್ಟೆ ಅಲ್ಲ ಮಾರಾಟದ ನಂತರ ಸೇವೆ ಬಹಳ ಮುಖ್ಯ ಅಲ್ಲದೇ ಗ್ರಾಹಕರೊಂದಿಗಿನ ಸಂಬಂಧ ಬಹಳ ಮುಖ್ಯ. ಜೈ ಶ್ರೀರಾಮ ಘೋಷಣೆ ಯಾವಾಗಲೂ ಇರುತ್ತದೆ. ಹುಬ್ಬಳ್ಳಿ ಒಂದು ವಿಚಿತ್ರ ನಗರ, ಬುಧವಾರ ಎಲ್ಲ ಬಂದ್ ಮಾಡಿ ಜಿಮ್ಖಾನ ಕ್ಲಬ್‌ಗೆ ಹೋಗುತ್ತಾರೆ. ಹುಬ್ಬಳ್ಳಿ ಲಕ್ಷ್ಮೀ ನಗರ, ಧಾರವಾಡ ಸರಸ್ಕೃತಿ ನಗರ, ಧಾರವಾಡದಲ್ಲಿ ರಿಯಲ್ ಎಸ್ಟೇಟ್ ಬೂಮ್ ಆಗುತ್ತಿದೆ. ನಾವು ಬೇರೆ ಬೇರೆ ಮೂಲದಿಂದ ವ್ಯಾಪಾರದ ಮಾರ್ಗವನ್ನು ತಿಳಿಯಬೇಕು ಎಂದರು.
ಕರ್ನಾಟಕ ಅತ್ಯಂತ ಜ್ಞಾನವಂತರ ರಾಜ್ಯ ಅಮೇರಿಕಾದ ಯಾವುದೇ ಭಾಗಕ್ಕೆ ಹೋದರು ಕನ್ನಡಿಗರು ಸಿಗುತ್ತಾರೆ. ಕಷ್ಟ ಪಡಬೇಕು. ಕಷ್ಟ ಪಡೆದಿದ್ದರೆ ಆಗುವುದಿಲ್ಲ. ನಾನು ಟಾಟಾ ಮೋಟರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದೆ ಅಲ್ಲಿನ ಡೈರೆಕ್ಟರ್ ನನಗೆ ಲಕ್ ಬಗ್ಗೆ ವ್ಯಾಖ್ಯಾನ ಮಾಡುವಂತೆ ಹೇಳಿದರು. ಕೆಲವರು ಹಣೆ ಬರಹ ಹುಡುಕುತ್ತಾರೆ. ಕೆಲವರು ಹಣೆಬರಹ ರೂಪಿಸುತ್ತಾರೆ. ಕೆಲವರು ಹಣೆಬರಹ ಬರೆಯುತ್ತಾರೆ. ನಮ್ಮ ಪಧಾನಮಂತ್ರಿ ಹಣೆಬರಹ ಬರೆಯುತ್ತಾರೆ. ಈ ದೇಶದ ಹಣೆ ಬರಹ ಬರೆಯುತ್ತಿರುವವರು ನಮ್ಮ ಪಧಾನಿ ಎಂದು ಹೆಮ್ಮೆಯಿಂದ ಹೇಳುತ್ತೇನೆ. ಅವರ ಮನಸಲ್ಲಿ ಕೇವಲ ದೇಶವನ್ನು ಅಭಿವೃದ್ಧಿ ಮಾಡುವುದೇ ಇದೆ. ಇಂತಹ ವ್ಯಕ್ತಿ ಶತಮಾನಕ್ಕೊಬ್ಬರು ಹುಟ್ಟುತ್ತಾರೆ. ಈಗ ಆರಂಭವಾಗಿರುವುದು 2047 ಕ್ಕೆ ಭಾರತ ಸೂಪರ್ ಪಾವರ್ ಆಗುವವರೆಗೂ ಬೆಳವಣಿಗೆ ಇರುತ್ತದೆ. ಭಾರತದ ಅಭಿವೃದ್ಧಿ ಪಥ ಹಾಗೂ ಹಿಂದೂಗಳ ಅಭಿವೃದ್ಧಿ ಎರಡೂ ಜೊತೆಯಾಗಿವೆ. ಹಿಂದೂಗಳ ಅಭಿವೃದ್ದಿಯಾದರೆ ಭಾರತದ ಅಭಿವೃದ್ದಿಯಾಗುತ್ತದೆ. ಹಿಂದುಗಳು ಉತ್ಪಾದಕರಾಗಿ ದೇಶವನ್ನು ಅಭಿವೃದ್ಧಿ ಪಡಿಸುವುದರಿಂದ ಭಾರತ ವಿಶ್ವದ ನಂಬರ್ ಒನ್ ದೇಶ ಈಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ನಮ್ಮಲ್ಲೇ ಸಾಧಕರಿದ್ದಾರೆ:
ನಾನು ತತ್ವಜ್ಞಾನ ಮತ್ತು ಅರ್ಥಶಾಸ್ತ್ರದ ವಿದ್ಯಾಥಿ ಅರ್ಥ ಶಾಸ್ತ್ರದಲ್ಲಿ ಲಾಭ ಮತ್ತು ನಷ್ಟದ ಲೆಕ್ಕಾಚಾರ ಇದೆ. ತತ್ವಜ್ಞಾನದಲ್ಲಿ ಪಾಪ ಪುಣ್ಯ ಇದೆ. ನಾನು ಇದನ್ನು ತದ್ದಿರುದ್ಧವಾಗಿ ತೆಗೆದುಕೊಂಡಿದ್ದೇನೆ. ನಾನು ತತ್ವಜ್ಞಾನದಲ್ಲಿ ಲಾಭ ನಷ್ಟವನ್ನು ನೋಡುತ್ತೇನೆ ನಮಗೆ ಚಂದ್ರ, ಸೂರ್ಯ ಬಹಳ ಸುಂದರವಾಗಿ ಕಾಣುತ್ತಾರೆ. ನಮ್ಮ ಅಕ್ಕಪಕ್ಕದಲ್ಲಿ ಏನಿದೆ ಅನ್ನುವುದನ್ನು ತಿಳಿವುದಿಲ್ಲ. ನಮ್ಮ ಸುತ್ತ ಮುತ್ತ ದೊಡ್ಡ ದೊಡ್ಡ ಉದ್ಯಮಿಗಳಿದ್ದಾರೆ. ವಿಜಯ ಸಂಕೇಶ್ವರ ಪ್ರಿಂಟಿಂಗ್ ಪ್ರೆಸ್ ಇಟ್ಟುಕೊಂಡಿದ್ದರು. ಅವರು ಲಾರಿ ಉದ್ಯಮವನ್ನು ಸ್ಥಾಪಿಸಿ ರಸ್ತೆಯಲ್ಲಿ ತಮ್ಮ ಕಂಪನಿಯ ಸಮಾರು 5 ಸಾವಿರ ವಾಹನ ಸಂಚಾರ ಮಾಡುವುದನ್ನು ನಿರ್ವಹಣೆ ಮಾಡುವುದು ಹೇಗೆ ಎನ್ನುವುದನ್ನು ಇಡಿ ಜಗತ್ತು ನೋಡುವಂತೆ ಮಾಡಿದ್ದಾರೆ. ಏರೋಸ್ಪೇಸ್‌ನಲ್ಲಿ ಅರವಿಂದ ಮೆಳ್ಳಿಗೇರಿ ಅವರು ಅದ್ಭುತವಾದ ಕೆಲಸ ಮಾಡಿದ್ದಾರೆ. ಬೆಳಗಾವಿಯಲ್ಲಿ ಉತ್ತಮವಾದ ಕೆಲಸ ಮಾಡಿದ್ದಾರೆ. ಹಿಂದುಳಿದ ಪ್ರದೇಶದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಮುರುಗೇಶ ನಿರಾಣಿ 11 ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಿದ್ದಾರೆ. ಈಗ ಬಯೋಪಿಯ್ಯುಲ್ ನ್ನು ತಲಂಗಾಣದಲ್ಲಿ ಮಾಡುತ್ತಿದ್ದಾರೆ. ಈ ರೀತಿ ಸಾಕಷ್ಟು ಜನರ ಹೆಸರು ಹೇಳಬಲ್ಲೆ. ಸಣ್ಣ ಸಣ್ಣವರು ಹೊಸ ಹೊಸ ತಂತ್ರಜ್ಞಾನ ಬಳಕೆ ಮಾಡಿ ಸಾಧನೆ ಮಾಡುತ್ತಿದ್ದಾರೆ. ನನ್ನ ಸ್ನೇಹಿತನ ಮಗ 5 ಡೈಮೆನೆನಲ್ ಮಿಷಿನ್ ಉತ್ಪಾದನೆ ಮಾಡಿದ್ದಾನೆ. ಅಮೇರಿಕಾ ಕಂಪನಿಗಳು ಷೇರು ಪಡೆಯಲು ಬಯಸುತ್ತಿವೆ. ನಿಮ್ಮ ಬಳಿ ತಂತ್ರಜ್ಞಾನ ಇದ್ದರೆ ದುಡ್ಡು ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ಇದು ಜ್ಞಾನದ ಯುಗ. ಅವನು ಗುಲಬರ್ಗದವನು ಪ್ರಧಾನಿ, ರಾಷ್ಟ್ರಪತಿ ಅವನನ್ನು ಅಭಿನಂದಿಸಿದ್ದಾರೆ ಎಂದು ಹೇಳಿದರು.







