ಚಿರತೆ ಬಾಯಿಂದ ಅತ್ತೆಯನ್ನು ರಕ್ಷಿಸಿದ ಸೊಸೆ: ಸುಜಾತ ಸಾಹಸಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮೆಚ್ಚುಗೆ

RELATED POSTS

ಮೈಸೂರು(www.thenewzmirror.com): ಪ್ರಾಣದ ಹಂಗು ತೊರೆದು ಮನೆಯೊಳಗೆ ನುಗ್ಗಿದ್ದ ಚಿರತೆಯಿಂದ ಅತ್ತೆಯನ್ನು ರಕ್ಷಿಸಿದ ಮೈಸೂರಿನ ಸಿದ್ಧಾರ್ಥನಗರದ ಸುಜಾತ ಅವರ ಧೈರ್ಯಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಭಿನಂದನೆ ಸಲ್ಲಿಸಿದ್ದಾರೆ. ಸುಜಾತ ಅವರ ಈ ಸಾಹಸ ಕಾರ್ಯವನ್ನು ಗುರುತಿಸಿ ಮುಂದಿನ ವರ್ಷದ ‘ಕಿತ್ತೂರು ರಾಣಿ ಚೆನ್ನಮ್ಮ’ ಪ್ರಶಸ್ತಿಗೆ ಶಿಫಾರಸು ಮಾಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ.

ಮೈಸೂರಿನ ಸಿದ್ಧಾರ್ಥನಗರದ ಮನೆಯೊಂದರಲ್ಲಿ ಚಿರತೆಯು ಮಂಚದ ಅಡಿಯಲ್ಲಿ ಅವಿತು ಕುಳಿತಿತ್ತು. ಈ ಆತಂಕದ ಸಮಯದಲ್ಲಿ ಸುಜಾತ ಅವರು ಎದೆಗುಂದದೆ, ತಕ್ಷಣವೇ ಕೊಠಡಿಯೊಳಗೆ ನುಗ್ಗಿ ವಯೋವೃದ್ಧ ಅತ್ತೆಯನ್ನು ಸುರಕ್ಷಿತವಾಗಿ ಹೊರಗೆ ಕರೆತಂದಿದ್ದರು. ಸಾವಿನ ದವಡೆಯಿಂದ ಅತ್ತೆಯನ್ನು ಪಾರು ಮಾಡಿದ ಸುಜಾತ ಅವರ ಸಮಯಪ್ರಜ್ಞೆ ಮತ್ತು ಧೈರ್ಯ ಈಗ ರಾಜ್ಯಾದ್ಯಂತ ಶ್ಲಾಘನೆಗೆ ಪಾತ್ರವಾಗಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, “ಸುಜಾತ ಅವರ ಸಾಹಸವು ಮಹಿಳೆಯರ ಅಪ್ರತಿಮ ಶಕ್ತಿಗೆ ಸಾಕ್ಷಿಯಾಗಿದೆ. ಅತ್ತೆ-ಸೊಸೆಯ ಬಾಂಧವ್ಯದ ಬಗ್ಗೆ ಸಮಾಜದಲ್ಲಿರುವ ನಕಾರಾತ್ಮಕ ಕಲ್ಪನೆಗಳನ್ನು ತೊಡೆದುಹಾಕುವಲ್ಲಿ ಈ ಘಟನೆ ಮಾದರಿಯಾಗಿದೆ. ಇಂತಹ ಧೈರ್ಯವಂತ ಮಹಿಳೆಯರೇ ನಾಡಿನ ಶಕ್ತಿ,” ಎಂದು ಬಣ್ಣಿಸಿದ್ದಾರೆ.

ಪ್ರಶಸ್ತಿ ಘೋಷಣೆ:

ಸುಜಾತ ಅವರ ಶೌರ್ಯವನ್ನು ಗೌರವಿಸುವ ದೃಷ್ಟಿಯಿಂದ, ಅವರಿಗೆ ಮುಂದಿನ ಸಾಲಿನ ‘ಕಿತ್ತೂರು ರಾಣಿ ಚೆನ್ನಮ್ಮ ಸಾಹಸ ಪ್ರಶಸ್ತಿ’ ನೀಡಲು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಸಚಿವರು ತಿಳಿಸಿದ್ದಾರೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist