ಅಜ್ಜಯ್ಯನ ಹೆಸರಿನಲ್ಲಿ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕಾರ!

RELATED POSTS

ಬೆಂಗಳೂರು(www.thenewzmirror.com): ಕರ್ನಾಟಕದ ಆಡಳಿತ ಚುಕ್ಕಾಣಿ ಇಂದಿನಿಂದ ಹೊಸ ಸಾರಥಿಯ ಹೆಗಲೇರಿದ್ದು, ಸಂಘಟನಾ ಚತುರ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಇಂದು ಅಧಿಕೃತವಾಗಿ ರಾಜದಂಡ ಹಿಡಿದಿದ್ದಾರೆ. ಬೆಂಗಳೂರಿನ ಲೋಕಭವನದ ಗ್ಲಾಸ್ ಹೌಸ್‌ನಲ್ಲಿ ನಡೆದ ಅತ್ಯಂತ ಭವ್ಯ ಹಾಗೂ ವೈಭವೋಪೇತ ಸಮಾರಂಭದಲ್ಲಿ ರಾಜ್ಯಪಾಲರು ನೂತನ ಮುಖ್ಯಮಂತ್ರಿಗಳಿಗೆ ಅಧಿಕಾರ ಹಾಗೂ ಗೌಪ್ಯತೆಯ ಪ್ರತಿಜ್ಞಾವಿಧಿ ಬೋಧಿಸಿದರು.

ಸಂಜೆ 4 ಗಂಟೆ 05 ನಿಮಿಷದ ಶುಭ ಮುಹೂರ್ತದಲ್ಲಿ ನಡೆದ ಈ ಐತಿಹಾಸಿಕ ಕ್ಷಣದಲ್ಲಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಆರಾಧ್ಯ ದೈವ ವೀರ ಗಂಗಾಧರ ಅಜ್ಜ ಹಾಗೂ ಹಳದಿ ಮೈಲಾರಲಿಂಗನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ದೇಶದ ಸಂವಿಧಾನದ ಪ್ರತಿಯನ್ನು ಕೈಯಲ್ಲಿ ಹಿಡಿದು ಜನಸೇವೆಯ ಪವಿತ್ರ ಸಂಕಲ್ಪ ತೊಟ್ಟ ನೂತನ ಮುಖ್ಯಮಂತ್ರಿಗಳ ಶೈಲಿ ಇಡೀ ವೇದಿಕೆಯಲ್ಲಿ ಹೊಸ ಕಳೆ ಮೂಡಿಸಿತ್ತು. ಪ್ರಮಾಣ ವಚನಕ್ಕೂ ಮುನ್ನ ವೇದಿಕೆ ಮುಟ್ಟಿ ನಮಸ್ಕರಿಸಿದ ಅವರು, ತಳಮಟ್ಟದಿಂದ ಬಂದ ತಮ್ಮ ರಾಜಕೀಯ ಹೋರಾಟದ ಹಾದಿಗೆ ಗೌರವ ಸಲ್ಲಿಸಿದರು.

ಮುಖ್ಯಮಂತ್ರಿಗಳ ಪದಗ್ರಹಣದ ಬೆನ್ನಲ್ಲೇ ಹಿರಿಯ ನಾಯಕ ಡಾ. ಜಿ. ಪರಮೇಶ್ವರ್ ಅವರು ರಾಜ್ಯದ ಉಪಮುಖ್ಯಮಂತ್ರಿಯಾಗಿ (DCM) ಅಧಿಕಾರ ಸ್ವೀಕರಿಸಿದರು. ಇವರೊಂದಿಗೆ ಒಟ್ಟು 12 ಶಾಸಕರು ನೂತನ ಸಚಿವರಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸುವ ಮೂಲಕ ಮೊದಲ ಹಂತದ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಿತು. ಈ ಅಪೂರ್ವ ಸಮಾರಂಭಕ್ಕೆ ವಿವಿಧ ರಾಜ್ಯಗಳ ಪ್ರಮುಖ ರಾಜಕೀಯ ಮುಖಂಡರು, ವಿವಿಧ ಧರ್ಮಗಳ ಪೀಠಾಧೀಶರು ಹಾಗೂ ಹಿರಿಯ ಮುತ್ಸದ್ದಿಗಳು ಸಾಕ್ಷಿಯಾದರು. ಇಡೀ ರಾಜ್ಯಾದ್ಯಂತ ಕಲ್ಪಿಸಲಾಗಿದ್ದ 230 ಬಸ್ ನಿಲ್ದಾಣಗಳ ನೇರ ಪ್ರಸಾರ ವ್ಯವಸ್ಥೆಯ ಮೂಲಕ ಲಕ್ಷಾಂತರ ಜನಸಾಮಾನ್ಯರು ಈ ಐತಿಹಾಸಿಕ ಕ್ಷಣವನ್ನು ಲೈವ್ ಆಗಿ ಕಣ್ತುಂಬಿಕೊಂಡರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist