Jio Games | ಜಿಯೋಗೇಮ್ಸ್‌ನಲ್ಲಿ ಗೂಗಲ್‌ನ ಗೇಮ್‌ಸ್ನ್ಯಾಕ್ಸ್‌ ಗೇಮ್ಸ್‌ ಲಭ್ಯ.!

ಬೆಂಗಳೂರು, (www.thenewzmirror.com) ;

ದೇಶದ ಮುಂಚೂಣಿ ಗೇಮಿಂಗ್‌ ಫ್ಲಾಟ್‌ಫಾರಂ ಆಗಿರುವ ʼಜಿಯೋಗೇಮ್ಸ್ʼ,  ಜಿಯೋಗೇಮ್ಸ್‌ ಆಪ್‌ ಮತ್ತು ಜಿಯೋ ಸೆಟ್‌ಆಫ್‌ ಬಾಕ್ಸ್‌ನಲ್ಲಿ ಗೂಗಲ್‌ ಗೇಮ್‌ಸ್ನ್ಯಾಕ್ಸ್‌ ಅನ್ನು ಸಂಯೋಜಿಸುವ ಮೂಲಕ ತನ್ನ ಗೇಮಿಂಗ್‌ ಪೋರ್ಟ್‌ಫೋಲಿಯೊವನ್ನು ವಿಸ್ತರಿಸಿಕೊಂಡಿದೆ.

RELATED POSTS

ಇದರಿಂದಾಗಿ ಜಿಯೋಗೇಮ್ಸ್ ಬಳಕೆದಾರರು‌ Daily Sudoku, Om Nom Run, and Traffic Tom ಸೇರಿದಂತೆ ಜನಪ್ರಿಯವಾದ 8 ಗೇಮ್‌ಗಳನ್ನು ಆಡಬಹುದಾಗಿದೆ.

ʼಗೇಮ್‌ಸ್ನ್ಯಾಕ್ಸ್‌ʼನ ಎಲ್ಲ ಗೇಮ್‌ ಗಳೂ ಜಿಯೋಗೇಮ್ಸ್‌ ಬಳಕೆದಾರರಿಗೆ ಉಚಿತವಾಗಿರಲಿವೆ. ಆಂಡ್ರಾಯ್ಡ್‌ ಫೋನ್‌ ಬಳಕೆದಾರರು ಜಿಯೋಗೇಮ್ಸ್‌ ಆಪ್‌ನ ಹೋಮ್‌ಪೇಜ್‌ನಲ್ಲಿ ಈ ಗೇಮ್‌ಗಳನ್ನು ಸುಲಭವಾಗಿ ಪಡೆಯಬಹುದು. ಜಿಯೋಗೇಮ್ಸ್‌ನ ಮಿನಿ ಆಪ್‌ಗಳಾದ ಮೈಜಿಯೋ ಮತ್ತು ಜಿಯೋಟಿವಿಯಲ್ಲಿಯೂ ಗೂಗಲ್‌ನ ಗೇಮ್‌ಸ್ನ್ಯಾಕ್ಸ್‌ ಗೇಮ್‌ಗಳು ಲಭ್ಯವಿವೆ.

ಗೂಗಲ್‌ನ ʼಗೇಮ್‌ಸ್ನ್ಯಾಕ್ಸ್‌ ಗೇಮ್‌ʼಗಳು ಕಡಿಮೆ ಗಾತ್ರದ್ದಾಗಿರುವ ಜೊತೆಗೆ ಬೇಗನೆ ತೆರೆದುಕೊಳ್ಳುತ್ತವೆ. ಕಡಿಮೆ ಮೆಮೊರಿ ಇರುವ ಸಾಧನಗಳಲ್ಲಿ, ವಿವಿಧ ನೆಟ್‌ವರ್ಕ್‌ ಸ್ಥಿತಿಯಲ್ಲಿಯೂ HTML5 ನ ಈ ಗೇಮ್‌ಗಳನ್ನು ಆಡಬಹುದಾಗಿದೆ.

ಭಾರತದಲ್ಲಿ ಲಕ್ಷಗಟ್ಟಲೆ ಬಳಕೆದಾರರ ಗೇಮಿಂಗ್‌ ಅನುಭವವನ್ನು ಸುಧಾರಿಸುವುದು ಈ ಸಹಭಾಗಿತ್ವದ ಉದ್ದೇಶವಾಗಿದೆ ಎಂದು ಕಂಪನಿಯು ಹೇಳಿದೆ. ಇದರಿಂದಾಗಿ ಸಾಮಾನ್ಯವಾದ ಗೇಮ್‌ಗಳನ್ನು ಗ್ರಾಹಕರು ಸುಲಭವಾಗಿ ಆಡಬಹುದು ಎಂದು ತಿಳಿಸಿದೆ.
ಜಗತ್ತಿನಾದ್ಯಂತ ಇರುವ ಆಟಗಾರರಿಗಾಗಿ ಗೇಮ್‌ಸ್ನ್ಯಾಕ್ಸ್‌ನಲ್ಲಿ 100ಕ್ಕೂ ಅಧಿಕ ಗೇಮ್‌ಗಳಿವೆ.

ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರಮುಖ ಗೇಮಿಂಗ್‌ ಹಬ್‌ ಆಗಿ ಭಾರತವನ್ನು ರೂಪಿಸಲು ಜಿಯೋಗೇಮ್ಸ್‌ ಬಯಸುತ್ತದೆ. ಈ ನಿಟ್ಟಿನಲ್ಲಿ ಗೂಗಲ್‌ ಜೊತೆಗಿನ ಈ ಒಪ್ಪಂದವು ಕಂಪನಿಯ ಬದ್ಧತೆಯನ್ನು ಸೂಚಿಸುತ್ತದೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist