ಮಹಿಳಾ ಸ್ವ-ಸಹಾಯ ಗುಂಪುಗಳ ಉತ್ಪನ್ನಗಳನ್ನು ಖರೀದಿಸಲು ಮುಖ್ಯ ಕಾರ್ಯದರ್ಶಿ ಡಾ.  ಶಾಲಿನಿ ರಜನೀಶ್ ಕರೆ

RELATED POSTS

ಬೆಂಗಳೂರು(thenewzmirror.com): ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ ಬೆಂಗಳೂರಿನ ಐಎಎಸ್ ಅಸೋಸಿಯೇಷನ್‌ನಲ್ಲಿ ಮಾರ್ಚ್ 21ರವರೆಗೆ ಮೂರು ದಿನಗಳು ಆಯೋಜಿಸಿರುವ ಮಹಿಳಾ ಸ್ವ-ಸಹಾಯ ಗುಂಪುಗಳ ಉತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನ ಮೇಳವನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. 

ಈ ವಿಶೇಷ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ‌ ರಜನೀಶ್ ಅವರು ಮಹಿಳಾ ಸ್ವ-ಸಹಾಯ ಗುಂಪುಗಳ ಉತ್ಪನ್ನ ಮಾರಾಟ ಹಾಗೂ ಪ್ರದರ್ಶನ ಮೇಳ ಉದ್ಘಾಟಿಸಿರುವುದು ಹೆಮ್ಮೆಯ ವಿಷಯವಾಗಿದೆ. ಈ ಮೇಳದಲ್ಲಿ ಮಹಿಳೆಯರು ತಯಾರಿಸಿರುವ ಅನೇಕ ಕರಕುಶಲ ಹಾಗೂ ಕಸೂತಿ ಉತ್ಪನ್ನಗಳನ್ನು ನೋಡೋದಷ್ಟೇ ಅಲ್ಲದೇ ಅವುಗಳನ್ನು ಖರೀದಿಸಿ ಸ್ವ-ಸಹಾಯ ಗುಂಪುಗಳ ಮಹಿಳೆಯರನ್ನು ಬೆಂಬಲಿಸಬೇಕು ಎಂದು ಹೇಳಿದರು.

ಈ ಮಾರಾಟ ಹಾಗೂ ಪ್ರದರ್ಶನ ಮೇಳದಲ್ಲಿ ರಾಜ್ಯದ ವಿವಿಧ ಮಹಿಳಾ ಸ್ವ-ಸಹಾಯ ಗುಂಪುಗಳ ಕೌಶಲ್ಯದಿಂದ ತಯಾರಿಸಲ್ಪಟ್ಟ ಉತ್ಪನ್ನಗಳ 60 ಮಳಿಗೆಗಳಿದ್ದು, ಪ್ರಮುಖವಾಗಿ ವಿವಿಧ ಬಗೆಯ ಹ್ಯಾಂಡ್‌ಲೂಮ್ ಸೀರೆಗಳು, ಆಹಾರ ಉತ್ಪನ್ನಗಳು, ಕಿನ್ನಾಳ ಆಟಿಕೆ, ಚನ್ನಪಟ್ಟಣ ಬೊಂಬೆಗಳು, ಇಳಕಲ್ ಸೀರೆ, ಬಿದರಿ ಕಲೆ, ಮನೆ ಅಲಂಕಾರಿಕ ಗಿಡಗಳು, ವಸ್ತುಗಳು ಮೇಳದ ಪ್ರಮುಖ ಆಕರ್ಷಣೆಯಾಗಿವೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯದಲ್ಲಿ 1964 ರಿಂದ 2024ರ ವರೆಗೆ ಸೇವೆ ಸಲ್ಲಿಸಿರುವ ಹಾಗೂ ಸೇವೆಯಲ್ಲಿರುವ ಭಾರತೀಯ ಆಡಳಿತ ಸೇವೆಯ ಮಹಿಳಾ ಅಧಿಕಾರಿಗಳ ವಿವರಗಳನ್ನೊಳಗೊಂಡ ಡೈರೆಕ್ಟರಿಯನ್ನೂ ಬಿಡುಗಡೆಗೊಳಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ. ಏಕರೂಪ್ ಕೌರ್  ಮತ್ತು ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist