ಕ್ಯಾಬಿನೆಟ್ ಮೀಟಂಗ್ ಹೈಲೈಟ್ಸ್..!

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.ಅದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

RELATED POSTS

ಇಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳ ಕುರಿತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ  ಎಚ್.ಕೆ.ಪಾಟೀಲ್ ಅವರು  ಇಂದು ನಡೆದ  ಪತ್ರಿಕಾ ಗೋಷ್ಠಿಯಲ್ಲಿ ವಿವರಿಸಿದರು. 

ಕೆ.ಕೆ.ಆರ್.ಡಿ.ಬಿ ರಸ್ತೆ – ಆಡಳಿತಾತ್ಮಕ ಅನುಮೋದನೆ:

“ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ 2024-25ನೇ ಸಾಲಿನ ಅಧ್ಯಕ್ಷರ ವಿವೇಚನಾ ನಿಧಿಯಡಿ ಕೈಗೊಳ್ಳಲಾಗುತ್ತಿರುವ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಎಸ್.ಎಚ್-156 ನರಿಬೋಳದಿಂದ ಗಂವ್ಹಾರ ವಯಾ ಬಿರಾಳ ಬಿ ಕಿ.ಮೀ 15.00 ರಿಂದ 36.00 ವರೆಗೆ ರಸ್ತೆ ನಿರ್ಮಾಣ ಕಾಮಗಾರಿಯ ರೂ.23.60 ಕೋಟಿಗಳ ಅಂದಾಜಿಗೆ ಮತ್ತು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಎಸ್.ಎಚ್ 171 ಕೆಲ್ಲೂರು ಬಿ ದಿಂದ ಜವಳಗಾ ಕ್ರಾಸ್ ವರೆಗೆ (ವಯಾ ನೆಲೋಗಿ, ಸೊನ್ನ, ಮುತ್ತುಖೋಡ, ಕರಭೋಸಗಾ) ಕಿ.ಮೀ 165 ರಿಂದ 193.55 ವರೆಗೆ ರಸ್ತೆ ನಿರ್ಮಾಣ ಕಾಮಗಾರಿಯ ರೂ.24.10 ಕೋಟಿಗಳ ಅಂದಾಜಿನ ಎರಡು ಕಾಮಗಾರಿಗಳ ಒಟ್ಟಾರೆ ರೂ.47.70 ಕೋಟಿಗಳ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ.

ಕುಶಾಲನಗರ ಮಸಗೋಡು-ಯಲಕನೂರು-ಕಣಿವೆ ರಸ್ತೆ ಅಭಿವೃದ್ಧಿ:

ಕೊಡಗು ಜಿಲ್ಲೆ, ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಶಾಲನಗರ ತಾಲ್ಲೂಕು ಮಸಗೋಡು – ಯಲಕನೂರು-ಕಣಿವೆ ರಸ್ತೆ ಸರಪಳಿ 2.00 ರಿಂದ 10.00 ಕಿ.ಮೀ ಹಾಗೂ 11.00 ರಿಂದ 12.10 ಕಿ.ಮೀ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ರೂ.15.00 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ.

ಪ್ರಜಾಸೌಧ ಕಟ್ಟಡಗಳಿಗೆ ಅನುಮೋದನೆ:

ವಿಜಯಪುರ ಜಿಲ್ಲೆಯ ಸಿಂಧಗಿ ತಾಲ್ಲೂಕಿನ “ಪ್ರಜಾಸೌಧ” ಕಟ್ಡಡ ಕಾಮಗಾರಿಗೆ ಈಗಾಗಲೇ ರೂ.9.75 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿರುವುದನ್ನು ಒಳಗೊಂಡAತೆ, ಸದರಿ ಕಟ್ಟಡಕ್ಕೆ ಅವಶ್ಯವಿರುವ 2ನೇ ಹಂತದ ಕಾಮಗಾರಿಯ ರೂ.5.00 ಕೋಟಿಗಳ ಅಂದಾಜು ಮೊತ್ತ ಸೇರಿದಂತೆ ಒಟ್ಟಾರೆ ರೂ.14.75 ಕೋಟಿಗಳ ಪರಿಷ್ಕೃತ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲು; ಹಾಗೂ ಸಂಬಂಧಪಟ್ಟ ಕಾರ್ಯನಿರ್ವಾಹಕ ಅಭಿಯಂತರರು ಲೋಕೋಪಯೋಗಿ ಇಲಾಖೆ ಇವರ ವಿರುದ್ಧ ಶಿಸ್ತು ವ್ಯವಹರಣೆ ಹೂಡಲು ಹಾಗೂ ಜಿಲ್ಲಾ ಆಡಳಿತಕ್ಕೆ ಎಚ್ಚರಿಕೆ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ.

ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ 3 ಎಕರೆ ಜಮೀನಿನಲ್ಲಿ ಹೊಸ ತಾಲ್ಲೂಕು “ಪ್ರಜಾಸೌಧ” ನಿರ್ಮಿಸಲು ಪ್ರಸ್ತಾಪಿಸಲಾಗಿದೆ

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನಲ್ಲಿ “ಪ್ರಜಾಸೌಧ” ಆನೇಕಲ್ ತಾಲ್ಲೂಕು ಆಡಳಿತ ಕೇಂದ್ರ ಕಟ್ಟಡಕ್ಕೆ ಅವಶ್ಯವಿರುವ ಎಲ್ಲಾ ಕಾಮಗಾರಿಗಳು (Fully Furnished ) ಒಳಗೊಂಡಂತೆ ಟೈಪ್-ಸಿ ಮಾದರಿಯಲ್ಲಿ ರೂ.16.00 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕು ಆಡಳಿತ ಕೇಂದ್ರ “ಪ್ರಜಾಸೌಧ ಕಟ್ಟಡವನ್ನು ರೂ.16.00 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನಲ್ಲಿ ತಾಲ್ಲೂಕು “ಪ್ರಜಾಸೌಧ” ಕಟ್ಟಡಕ್ಕೆ ಅವಶ್ಯವಿರುವ ಎಲ್ಲಾ ಕಾಮಗಾರಿಗಳು ನಿರ್ಮಾಣ ಕಾಮಗಾರಿಯನ್ನು ರೂ.16.00 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು  ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ.

ಚಿಕ್ಕಮಗಳೂರು ಜಿಲ್ಲೆಯ “ಪ್ರಜಾಸೌಧ” ಚಿಕ್ಕಮಗಳುರು ಜಿಲ್ಲಾ ಆಡಳಿತ ಕೇಂದ್ರ ಕಟ್ಟಡದ ಮೊದಲನೇ ಹಂತಕ್ಕೆ ರೂ.30.00 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿರುವುದನ್ನು ಒಳಗೊಂಡಂತೆ ಸದರಿ ಕಟ್ಟಡದ ಇ.ಐ.ಆರ್.ಎಲ್/ವರ್ಕಸ್ಲಿಪ್ ಕಾಮಗಾರಿ ಹಾಗೂ 2ನೇ ಹಂತದ ಕಾಮಗಾರಿಯ ಅಂದಾಜು ಮೊತ್ತ ರೂ.26.48 ಕೋಟಿಗಳು ಸೇರಿದಂತೆ ಕಾಮಗಾರಿಯ ಪರಿಷ್ಕೃತ ಅಂದಾಜು ಮೊತ್ತ ರೂ.56.48 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ.

ನೋಂದಣಿ ಕಚೇರಿಗಳಿಗೆ ಹೊಸ ಕಟ್ಟಡ:

ಬೆಂಗಳೂರಿನಲ್ಲಿ ಇರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ 2 ಜಿಲ್ಲಾ ನೊಂದಣಿ ಕಚೇರಿ ಹಾಗೂ 34 ಉಪನೋಂದಣಿ ಕಚೇರಿಗಳನ್ನು ಸ್ವಂತ ಕಟ್ಟಡಗಳಿಗೆ ಸ್ಥಳಾಂತರಿಸಲು ಬಿಬಿಎಂಪಿ/ಬೆAಗಳೂರು ನಗರ ಜಿಲ್ಲಾಧಿಕಾರಿ/ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಗಳಿಂದ ಹಂಚಿಕೆಯಾಗುವ ನಿವೇಶನದಲ್ಲಿ ತಲಾ ಒಂದು ಕಟ್ಟಡವನ್ನು ಗರಿಷ್ಠ ರೂ.2.50 ಕೋಟಿಗಳ ವೆಚ್ಚದಲ್ಲಿ ಹೊಸದಾಗಿ ನಿರ್ಮಾಣ ಮಾಡಲು ಅಥವಾ ನಿವೇಶನ ಲಭ್ಯವಾಗದಿದ್ದಲ್ಲಿ ಬಿಬಿಎಂಪಿ/ಬೆಂಗಳೂರು ನಗರ ಜಿಲ್ಲಾಧಿಕಾರಿ / ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಗಳು ಹೊಂದಿರುವ ಕಟ್ಟಡಗಳಲ್ಲಿ ಸ್ಥಳಾವಕಾಶ ಲಭ್ಯವಾದಲ್ಲಿ ಕಚೇರಿಗಳನ್ನು ಸ್ಥಳಾಂತರಿಸಲು ತಲಾ ಒಂದು ಕಛೇರಿಗಳನ್ನು ಗರಿಷ್ಠ ರೂ.50.00 ಲಕ್ಷಗಳ ವೆಚ್ಚದಲ್ಲಿ ನವೀಕರಿಸಲು ಅಥವಾ ಈಗಾಗಲೇ ನಿರ್ಮಾಣಗೊಂಡಿರುವ ಕಟ್ಟಡದ ಮೇಲೆ ಮತ್ತೊಂದು ಮಹಡಿಯನ್ನು ನಿರ್ಮಿಸಲು ತಗಲುವ ವಾಸ್ತವಿಕ ವೆಚ್ಚವನ್ನು ಭರಿಸಲು, ಗರಿಷ್ಠ ರೂ.1.50 ಕೋಟಿಗಳಿಗೆ ಸೀಮಿತಗೊಳಿಸಲು;

ನಿರ್ಮಾಣ/ನವೀಕರಣ ಕಾರ್ಯವನ್ನು ನಿರ್ವಹಿಸುವ ಕರ್ನಾಟಕ ಗೃಹ ಮಂಡಳಿಗೆ Central Government’s Special Assistance Scheme ರಡಿ ಬಿಡುಗಡೆ ಮಾಡಿರುವ ರೂ.71.00 ಕೋಟಿಗಳು ಹಾಗೂ 2024-25ನೇ ಸಾಲಿನಲ್ಲಿ ಲೆಕ್ಕಶೀರ್ಷಿಕೆ 4059-80-051-0-30-132 (ಬಂಡವಾಳ ವೆಚ್ಚ) ಅಡಿಯಲ್ಲಿ ಲಭ್ಯವಿರುವ ರೂ.5.00 ಕೋಟಿಗಳು, ಒಟ್ಟು ರೂ.76.00 ಕೋಟಿಗಳ ಅನುದಾನವನ್ನು ಸ್ಥಳ ಲಭ್ಯತೆಯನುಸಾರ ಪ್ರತಿಯೊಂದು ಕಛೇರಿಯ ವಿಸ್ತೃತ ಯೋಜನೆಯನ್ನು ಸಲ್ಲಿಸುವ ಷರತ್ತಿಗೊಳಪಟ್ಟು ಬಿಡುಗಡೆ ಮಾಡಲು;

ಬಿಬಿಎಂಪಿ/ಬೆಂಗಳೂರು ನಗರ ಜಿಲ್ಲಾಧಿಕಾರಿ/ಬೆಂಗಳೂರು ನಗರ ಜಿಲ್ಲಾ ಪಂಚಾಯತಿಗಳಿಂದ ಲಭ್ಯವಾಗುವ ನಿವೇಶನ/ ಕಟ್ಟಡಗಳನ್ನಾಧರಿಸಿ ಬೆಂಗಳೂರಿನಲ್ಲಿ ಇರುವ ಜಿಲ್ಲಾ ನೋಂದಣಿ ಕಛೇರಿ / ಉಪ ನೋಂದಣಿ ಕಚೇರಿಗಳನ್ನು ಸ್ಥಳಾಂತರಿಸಲು, ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಲು / ಈಗಾಗಲೇ ನಿರ್ಮಾಣಗೊಂಡಿರುವ ಕಟ್ಟಡಗಳಲ್ಲಿ ಸ್ಥಳಾವಕಾಶ ಲಭ್ಯವಾದಲ್ಲಿ ಕಚೇರಿಗಳನ್ನು ನವೀಕರಿಸಲು, ಇಲಾಖಾ ಸಚಿವರ ಅನುಮೋದನೆಯೊಂದಿಗೆ ಇಲಾಖೆಯೇ ಉಪ ನೋಂದಣಿ ಕಚೇರಿಗಳನ್ನು ಗುರುತಿಸಿ, ಘಟಕವಾರು ಅನುದಾನ ಬಿಡುಗಡೆ ಮಾಡಲು; ಸಚಿವ ಸಂಪುಟ ಒಪ್ಪಿದೆ.  

ನೋಂದಣಿ ಕಚೇರಿಗಳಲ್ಲಿ ಆಧುನಿಕ ತಂತ್ರಜ್ಞಾನ:

ನೊಂದಣಿ ಮತ್ತು ಮುದ್ರಾಂಕ ಇಲಾಖೆಯ ಕಚೇರಿಗಳಿಗೆ Procurement, Installation, Operations and Maintenance of IT Infrastructure along with Deployment of Operational Manpower ಆಧಾರದ ಮೇಲೆ BOO Model ಆಧಾರದ ಮೇಲೆ Go-Live  ದಿನಾಂಕದಿಂದ  5 ವರ್ಷಗಳ ಅವಧಿಗೆ ಹಾಗೂ ಗೋ-ಲೈವ್ ಪೂರ್ವದ ಅವಧಿಯು ಸೇರಿದಂತೆ ಪೂರೈಸಲು, ಆರ್‌ಎಫ್‌ಪಿ ಹಾಗೂ ನೆಗೋಷಿಯೇಶನ್ ಮೂಲಕ ಸ್ಕಾö್ಯನ್ ಮಾಡಿದ ದಾಖಲೆಗಳ ಪ್ರತಿ ಪುಟಕ್ಕೆ ರೂ.47.20 ದರದಲ್ಲಿ (ಶೇ.18% ರಷ್ಟು ಜಿಎಸ್‌ಟಿ ಸೇರಿದಂತೆ) ರೂ.637.45 ಕೋಟಿಗಳ ಪರಿಷ್ಕೃತ ಅಂದಾಜಿಗೆ ಹಾಗೂ ಹಿಂದಿನ ಸಚಿವ ಸಂಪುಟ ಸಭೆಯಲ್ಲಿ ಗೋ-ಲೈವ್‌ಗಾಗಿ ನೀಡಿದ್ದ 90 ದಿನಗಳ ಅವಧಿಯನ್ನು 464 ದಿನಗಳಿಗೆ ವಿಸ್ತರಿಸಲು/ ಸ್ಥೀರಿಕರಿಸಲು, “ಕರ್ನಾಟಕ ಸರ್ಕಾರ (ವ್ಯವಹಾರ ನಿರ್ವಹಣೆ)  ನಿಯಮಗಳು, 1977ರ ಮೊದಲ ಅನುಸೂಚಿ ಸಂಖ್ಯೆ: 15ರ ಪ್ರಕಾರ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ.

ಕರ್ನಾಟಕ ರಾಜ್ಯ ಬಾಲನ್ಯಾಯ ನಿಯಮ 2025ಕ್ಕೆ ಅನುಮೋದನೆ:

“ಕರ್ನಾಟಕ ರಾಜ್ಯ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ನಿಯಮಗಳು, 2025”ಕ್ಕೆ ಅನುಮೋದನೆ ನೀಡಲು; ಸಚಿವ ಸಂಪುಟ ಒಪ್ಪಿದೆ.“ಕರ್ನಾಟಕ ರಾಜ್ಯ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ನಿಯಮಗಳು, 2025”ಕ್ಕೆ ಅನುಮೋದನೆಗೆ  ಪ್ರಸ್ತಾಪಿಸಲಾಗಿತ್ತು. ಕೇಂದ್ರದ ಅಧಿನಿಯಮದ ನಿರ್ದೇಶನದನ್ವಯ ಈ ನಿಯಮಗಳನ್ನು ಪ್ರಸ್ತಾಪಿಸಲಾಗಿದೆ. ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ದಾಖಲಾಗಿರುವ ರಿಟ್ ಅರ್ಜಿಯಲ್ಲಿ 4 ತಿಂಗಳ ಅವಧಿಯಲ್ಲಿ ತ್ವರಿತಗತಿಯಲ್ಲಿ ನಿಯಮಗಳನ್ನು ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ.

ಮಾರ್ಪಾಡುಗಳೊಂದಿಗೆ ಆರೋಗ್ಯ ಸಂಜೀವಿನಿ ಜಾರಿಗೆ ನಿರ್ಣಯ:

ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಸೌಲಭ್ಯ ಒದಗಿಸುವ “ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS) ಯನ್ನು ಕೆಲವು ಮಾರ್ಪಾಡುಗಳೊಂದಿಗೆ ಜಾರಿಗೊಳಿಸಲು; ಸಚಿವ ಸಂಪುಟ ನಿರ್ಣಯಿಸಿದೆ.

ಸ್ಪೂರ್ತಿಸೌಧ:

ಅಂಬೇಡ್ಕರ್ ಜಯಂತಿ ಸಂದರ್ಭದಲ್ಲಿ ಆಚರಣೆ ಮಾಡಲು ದಲಿತ ಸಂಘಟನೆಗಳು ಬೇಡಿಕೆ ಸಲ್ಲಿಸಿದ್ದ ಮೇರೆಗೆ ಲೋಕೋಪಯೋಗಿ  ಇಲಾಖೆ ವತಿಯಿಂದ ವಿಕಾಸಸೌಧದ ಮುಂದಿನ ಖಾಲಿ 29.85 ಗುಂಟೆ ಜಾಗದಲ್ಲಿ 87 ಕೋಟಿ ವೆಚ್ಚದಲ್ಲಿ ಸ್ಪೂರ್ತಿಸೌಧ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.

*ಸಮಿತಿ ರಚನೆ*

ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ನೀಗಿಸಲು ರಾಜ್ಯದ ಪ್ರಮುಖ ಜಲಾಶಯಗಳನ್ನು ನಿರ್ವಹಣೆ ಹಾಗೂ ಕುಡಿಯುವ ನೀರಿಗೆ ವಿಶೇಷ ಒತ್ತು ಕೊಟ್ಟು ನಿರ್ವಹಣೆ ಮಾಡಲು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ತಾಂತ್ರಿಕ ವ್ಯಕ್ತಿಗಳನ್ನೊಳಗೊಂಡ ಸಮಿತಿಯನ್ನು ರಚಿಸಲು ಸಚಿವ ಸಂಪುಟ ಅನುಮೋದಿಸಿದೆ. ಕುಡಿಯುವ ನೀರಿಗೆ ಆಗುವ ಸಮಸ್ಯೆಗಳ ಕುರಿತಂತೆ  ಹಾಗೂ ಜಲಾಶಯಗಳಿಂದ ನೀರು ಬಿಡುಗಡೆ ನಿರ್ವಹಣೆ ಮಾಡಲು ಸಮಿತಿಯು ವಿವರಗಳನ್ನು ಪರಿಶೀಲಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳಲಿದೆ ಎಂದು ಸಚಿವರು ತಿಳಿಸಿದರು.

ರಾಜ್ಯ ವಿಪತ್ತು ಉಪಶಮನ ನಿಧಿಯಡಿ 194.80 ಕೋಟಿ ಮೊತ್ತದ 330 ಉಪಶಮನ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು  ನಿರ್ವಹಿಸಲು ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಾಗಿದೆ.ವಿಜಯಪುರ ಜಿಲ್ಲೆಯಲ್ಲಿ  ವಿಯಜಪುರ ನಗರಕ್ಕೆ ಆಲಮಟ್ಟಿಯಿಂದ ಪಿಎಸ್‌ಸಿ  ಕೊಳವೆ ಮಾರ್ಗವನ್ನು ಬದಲಾಯಿಸಿ ಎಂಎಸ್ ಪೈಪ್ ಅಳವಡಿಸುವ 50.13 ಕೋಟಿ ರೂ.ಗಳ   ಕಾಮಗಾರಿಗೆ ಅನುಮೋದನೆ ನೀಡಲಾಗಿದೆ.  

ಅಂಬೇಡ್ಕರ್ ಭವನ ಬಾಕಿ ಕಾಮಗಾರಿಗಳ ರೂ.23.83 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ:

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮೈಸೂರಿನ ಡಾ. ಬಿ.ಆರ್ ಅಂಬೇಡ್ಕರ್ ಭವನದ ಬಾಕಿ ಇರುವ ಕಾಮಗಾರಿಗಳ ರೂ.23.83 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆಗೆ ಸಚಿವ ಸಂಪುಟ ನಿರ್ಧರಿಸಿದೆ.  

1994 ರಲ್ಲಿ ಮಂಜೂರಾಗಿದ್ದ ಅಂಬೇಡ್ಕರ್ ಭವನ ಮುಕ್ತಾಯಗೊಳಿಸಲು ಈ ನಿರ್ಣಯ ಕೈಗೊಳ್ಳಲಾಗಿದೆ. ಒಟ್ಟಾರೆ 40 ಕೋಟಿ ರೂ.ಗಳವರೆಗೆ ವೆಚ್ಚವಾಗಿದೆ. ಸರ್ಕಾರಗಳ ಬದಲಾವಣೆಯಾದಂತೆ ಯೋಜನೆಗೆ ಹೆಚ್ಚುವರಿ ಭಾಗಗಳನ್ನು ಸೇರಿಸುತ್ತಾ ಬಂದವೇ ಹೋರತು ಹಣ ಬಿಡುಗಡೆ ಮಾಡಲಿಲ್ಲ. ಹೀಗಾಗಿ ಈಗ ಕಟ್ಟಡವನ್ನು ಪೂರ್ಣಗೊಳಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಡಾ: ಹೆಚ್.ಸಿ ಮಹದೇವಪ್ಪ ತಿಳಿಸಿದರು.

ಗದಗ ಮೆಡಿಕಲ್ ಕಾಲೇಜಿಗೆ ಕೆ.ಎಚ್ ಪಾಟೀಲ ಹೆಸರು:

ಗದಗಿನ  ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಹೆಸರನ್ನು ಸಹಕಾರಿ ರಂಗದ ಭೀಷ್ಮ ಕೆ.ಎಚ್. ಪಾಟೀಲ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಎಂದು ಹೆಸರಿಸಲು ಸಂಪುಟ ನಿರ್ಧರಿಸಿದೆ. 

ಈ ವಿಷಯವನ್ನು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ರವರು ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

ಸಹಕಾರಿ ರಂಗದಲ್ಲಿ ಅನುಪಮ ಸೇವೆ ಸಲ್ಲಿಸಿದ ಶ್ರೀ ಕೆ.ಎಚ್. ಪಾಟೀಲರು ರಾಜ್ಯದಲ್ಲಿ ಸಚಿವರಾಗಿ, ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇಂತಹ ಮಹಾನ ನಾಯಕನ ಹೆಸರನ್ನು ಸಾರ್ವಜನಿಕ ಸೇವೆ ಮಾಡುತ್ತಿರುವ ಗದಗ ಮೆಡಿಕಲ್ ಕಾಲೇಜಿಗೆ ನಾಮಕರಣ ಮಾಡುವ ಮೂಲಕ ಅವರ ಸೇವೆಯನ್ನು ಗೌರವಿಸುವ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದು ಸಚಿವರು ವಿವರಿಸಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist