ಬೆಂಗಳೂರು(www.thenewzmirror.com): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೂರು ದಿನಗಳಿಂದ ನಡೆಯುತ್ತಿದ್ದ ಲಾರಿ ಮುಷ್ಕರವನ್ನು ರಾಜ್ಯ ಲಾರಿ ಮಾಲೀಕರ ಹಾಗೂ ಏಜೆಂಟರ ಸಂಘ ಗುರುವಾರ ವಾಪಸ್ ಪಡೆದಿದೆ.ಇದರ ಹಿಂದೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ತಂತ್ರಗಾರಿಕೆ ಕೆಲಸ ಮಾಡಿದೆ ಎನ್ನುವಿದರಲ್ಲಿ ಎರಡು ಮಾತಿಲ್ಲ,ರಾಮಲಿಂಗಾರೆಡ್ಡಿ ರವರು ಮುಷ್ಕರವನ್ನು ಹತ್ತಿಕ್ಕಲು ಕರಗತ ಮಾಡಿಕೊಂಡಿರುವ ಕುಶಲತೆಯ ಫಲವೇ ಇದು.
ಹೌದು, ಮೊದಲನೇ ದಿನ ಸುಮಾರು ಸ್ವಲ್ಪಮಟ್ಟಿಗೆ ಯಶಸ್ಸು ಕಂಡಿದ್ದ ಲಾರಿ ಮುಷ್ಕರ, ಚೆನ್ನಾರೆಡ್ಡಿ ಲಾರಿ ಮಾಲೀಕರ ಮತ್ತೊಂದು ಬಣ ಬಹಿರಂಗವಾಗಿ ಸದರಿ ಮುಷ್ಕರಕ್ಕೆ ಬೆಂಬಲ ನೀಡದೇ ಇದ್ದ ಕಾರಣದಿಂದಾಗಿ ಎರಡನೇ ದಿನಕ್ಕೆ ಮುಷ್ಕರವು ತನ್ನ ವೇಗವನ್ನು ಕಳೆದುಕೊಂಡು ಸಹಜ ಸ್ಥಿತಿಗೆ ಬರಲು ಪ್ರಾರಂಭವಾದ ಕಾರಣ.ಜಿ.ಆರ್ ಷಣ್ಮುಖಪ್ಪರವರು ಸಾರಿಗೆ ಸಚಿವರನ್ನು ತಮ್ಮ ಬೇಡಿಕೆಗಳ ಬಗ್ಗೆ ಚರ್ಚಿಸಲು ಭೇಟಿ ಮಾಡಿದರು. ಹೇಗಿದ್ದರೂ ಮಾರನೆ ದಿನ ಮತ್ತಷ್ಟು ಸಹಜ ಸ್ಥಿತಿಗೆ ಬರುತ್ತಿದ್ದ ಮುಷ್ಕರವು ತಮ್ಮ ಕೈತಪ್ಪಲಿದೆ ಎಂಬುದನ್ನು ಅರಿತ ಸಂಘಟಕರು ಮಾತುಕತೆಗೆ ಮುಂದಾದರು ಎಂಬುದು ಇದರ ಹಿಂದಿನ ರಹಸ್ಯವಾಗಿದೆಯೆಂದು ಬಲ್ಲ ಮೂಲಗಳು ತಿಳಿಸಿವೆ.
ಸಂಘದ ಪದಾಧಿಕಾರಿಗಳೊಂದಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿರವರು, ಎರಡು ಬಾರಿ ಈ ಮೊದಲೇ ಸಂಧಾನ ಸಭೆ ನಡೆಸಿದ್ದರು, ಮುಖ್ಯಮಂತ್ರಿಗಳು ಸಹ ಒಂದು ಬಾರಿ ಸಂಧಾನ ಸಭೆ ನಡೆಸಿದ್ದರು. ಮೊದಲೆರಡು ಸಂಧಾನದಲ್ಲಿಯೇ ಅವರ ಪ್ರಮುಖ ಬೇಡಿಕೆಗಳಾದ ಡೀಸೆಲ್ ಬೆಲೆ ಇಳಿಸುವ, ಟೋಲ್ ರದ್ದು ಮಾಡುವ ಬೇಡಿಕೆಗಳನ್ನು ಹೊರತುಪಡಿಸಿ, ಉಳಿದ ಬೇಡಿಕೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಈಡೇರಿಸುವುದಾಗಿ ಸಾರಿಗೆ ಸಚಿವರು ಭರವಸೆ ನೀಡಿದ್ದರು. ವಾಹನಗಳ ಸಾಮರ್ಥ್ಯ ಅರ್ಹತಾ ಪತ್ರ (ಫಿಟ್ನೆಸ್ ಸರ್ಟಿಫಿಕೆಟ್) ನವೀಕರಣ ಶುಲ್ಕ ಹೆಚ್ಚಿಸಿರುವ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ನಿರಾಕರಿಸುವುದು ಮತ್ತು ನವೀಕರಣಕ್ಕೆ ₹13 ಸಾವಿರ ಶುಲ್ಕ ವಿಧಿಸುವ ಕೇಂದ್ರ ಸರ್ಕಾರದ ಪ್ರಸ್ತಾವವನ್ನು ಒಪ್ಪಿಕೊಳ್ಳದೇ ಕಡಿಮೆ ಮಾಡಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಹಾಗೂ ಡೀಸೆಲ್ ದರವನ್ನು ಹಿಂದಿನ ಬಿ.ಜೆ.ಪಿ ಸರ್ಕಾರ 2023ಕ್ಕಿಂತ ಮೊದಲು ಯದ್ವಾತದ್ವಾ ಏರಿಕೆ ಮಾಡಿರುವ ಲಾರಿ ಮಾಲೀಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮಾನ್ಯ ಸಾರಿಗೆ ಸಚಿವರು ಮಾತನಾಡಿ ಈ ಬಗ್ಗೆ ತಾವುಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಿರಿ ,ನಾವು ಕೂಡ ಪತ್ರ ಬರೆಯುತ್ತೇವೆ ಎಂದು ತಿಳಿಸಿದರು.
ಮುಂದುವರೆದು, ಆನ್ಲೈನ್ನಲ್ಲಿ ದಂಡ ಪಾವತಿ ವ್ಯವಸ್ಥೆ ಜಾರಿ, ಹಲವು ವರ್ಷಗಳಿಂದ ದಂಡ ಪಾವತಿಸದೇ ಬಾಕಿ ಉಳಿಸಿಕೊಂಡವರಿಗೆ ಒಂದು ಬಾರಿಯ ತೀರುವಳಿಗೆ (ಒನ್ ಟೈಮ್ ಸೆಟ್ಸ್ಮೆಂಟ್) ಅವಕಾಶ ಈ ಬಗ್ಗೆ ಸಕಾರಾತ್ಮಕವಾಗಿ ಸಾರಿಗೆ ಸಚಿವರು ಸ್ಪಂದಿಸಿರುತ್ತಾರೆ.ನಗರಗಳಿಗೆ ಸರಕು ವಾಹನಗಳ ಪ್ರವೇಶಕ್ಕೆ ಕೇವಲ 5 ಗಂಟೆ ಅವಕಾಶ ನೀಡಿರುವ ಬಗ್ಗೆ,ನಗರಗಳಿಗೆ ಸರಕು ಸಾಗಾಣಿಕೆ ವಾಹನಗಳ ಪ್ರವೇಶ ನಿರ್ಬಂಧ ಸಡಿಲಿಕೆ, ಗಡಿ ತನಿಖಾ ಠಾಣೆ ಸಮಸ್ಯೆಯನ್ನು ಬಗೆಹರಿಸುವ ಸಂಬಂಧ ಹಾಗೂ ಪೊಲೀಸರ ಕಿರುಕುಳ ತಪ್ಪಿಸಲು ಗೃಹ ಸಚಿವರೊಡನೆ ಮಾತುಕತೆ ನಡೆಸುವುದಾಗಿ ಸಾರಿಗೆ ಸಚಿವರು ಭರವಸೆ ನೀಡಿದ್ದಾರೆ.
ಈ ಮೇಲಿನ ಎಲ್ಲಾ ಹಿನ್ನೆಲೆಯಲ್ಲಿ ರಾಜ್ಯ ಲಾರಿ ಮಾಲೀಕರ ಹಾಗೂ ಏಜೆಂಟರ ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಖಪ್ಪರವರು ಮುಷ್ಕರ ವಾಪಸ್ಸು ತೆಗೆದುಕೊಂಡಿದ್ದಾರೆ.ಇದು ರಾಮಲಿಂಗಾರೆಡ್ಡಿ ಅವರ ತಂತ್ರಗಾರಿಕೆ ಮತ್ತು ಇಲಾಖೆಯಲ್ಲಿನ ತಮ್ಮ ನೈಪುಣ್ಯಕ್ಕೆ ಹಿಡಿದ ಕನ್ನಡಿಯಾಗಿದೆ.