ಜಾತಿಗಣತಿ ಹೆಸರಲ್ಲಿ ಸಿದ್ದರಾಮಯ್ಯರಿಂದ ಸಬ್ ಕಾ ವಿಭಜನ್ ಸಬ್ ಕಾ ಶೋಷಣ್ ತಂತ್ರ: ಸುನೀಲ್ ಕುಮಾರ್

RELATED POSTS

ಬೆಂಗಳೂರು(www.thenewzmirror.com) : ಜಾತಿ ಗಣತಿ ಹೆಸರಿನಲ್ಲಿ ಸಿಎಂ‌ ಸಿದ್ದರಾಮಯ್ಯ ಸಬ್ ಕಾ ವಿಭಜನ್ ಸಬ್ ಕಾ ಶೋಷಣ್ ತಂತ್ರ ನಡೆಸುತ್ತಿದ್ದು,350 ಕ್ಕೂ ಹೆಚ್ಚು ದುರ್ಬಲ ಹಿಂದುಳಿದ ಜಾತಿಗಳ ಜತೆಗೆ ತಾವು ಪ್ರತಿನಿಧಿಸುವ ಕುರುಬ ಸಮುದಾಯವನ್ನು ಪ್ರವರ್ಗ ೧ ಬಿಯಲ್ಲಿ ಸೇರಿಸಿಕೊಂಡಿದ್ದಾರೆ. ಇದು ರಾಜಕೀಯ ವಾಸನೆಗೆ ಕಾರಣವಾಗಿದೆ ಎಂದು ಮಾಜಿ ಸಚಿವ ವಿ.ಸುನೀಲ್ ಕುಮಾರ್ ಟೀಕಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 400 ಕ್ಕೂ ಹೆಚ್ಚು ಹಿಂದುಳಿದ ಜಾತಿಗಳ ಜನರು ಇಲ್ಲೀವರೆಗೆ ಗ್ರಾಮ ಪಂಚಾಯತಿ ಸದಸ್ಯರಾಗಲೂ ಸಾಧ್ಯವಾಗಿಲ್ಲ. ಅದರೆ ಸಿದ್ದರಾಮಯ್ಯನವರು ತಾವು ಪ್ರತಿನಿಧಿಸುವ ಸಮುದಾಯವನ್ನು ಪ್ರವರ್ಗ 1ರ ಅತೀ ಹಿಂದುಳಿದ ವರ್ಗಗಳಿಗೆ ಸೇರಿಸಿದ್ದಾರೆ. ಇದು ಅತಿ ಹಿಂದುಳಿದ ಜಾತಿಗಳಿಗೆ ಮಾಡಿದ ಅನ್ಯಾಯ. ಇದರಿಂದ ಸಣ್ಣ ಸಣ್ಣ ಸಮುದಾಯಗಳು ಅವಕಾಶವಂಚಿತವಾಗುತ್ತವೆ. ೪೩ ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಕುರುಬ ಸಮುದಾಯದ ಜತೆಗೆ ಇವರು ಸ್ಪರ್ಧೆ ಮಾಡಲು ಸಾಧ್ಯವೇ ? ಎಂದು ಪ್ರಶ್ನಿಸಿದರು.

ಅತಿ ಹಿಂದುಳಿದ ಸಮಾಜಗಳನ್ನು ಈ ವರದಿ ಪ್ರಪಾತಕ್ಕೆ ತುಳಿದಿದೆ.1ಬಿ ಪ್ರವರ್ಗ ಸೃಷ್ಟಿಸಿ ಸಣ್ಣ ಜಾತಿಗಳಿಗೆ ಏನು ನ್ಯಾಯ ಕೊಡ್ತೀರಿ? ಪ್ರವರ್ಗ 2ಎ ನಲ್ಲಿರುವ ಉಳಿದ ಜಾತಿಗಳನ್ನು ಬಿಟ್ಟು  ಒಂದೇ ಸಮುದಾಯವನ್ನು 1ಬಿ ಗೆ ಹಾಕಿದ್ದೀರಿ. ಇದು ಅವೈಜ್ಞಾನಿಕವಾಗಿದೆ. ರಾಜಕೀಯ ದುರುಪಯೋಗದ ವಾಸನೆ ಕಂಡುಬರುತ್ತಿದೆ.ಜನಸಂಖ್ಯೆ ಕಡಿಮೆ ಆಗಿದೆ ಅನ್ನೋದಕ್ಕಿಂತ ಹಿಂದುಳಿದ ವರ್ಗಗಳಿಗೆ ಈ ವರದಿ ದೊಡ್ಡ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.

ಬಿಜೆಪಿ ಕೇಂದ್ರದಲ್ಲಿ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಅಡಿ ತನ್ನ ಕಾರ್ಯಕ್ರಮ ಕೊಡುತ್ತಿದೆ. ಆದ್ರೆ ಸಿದ್ದರಾಮಯ್ಯ ಈ ಜಾತಿ ಜನಗಣತಿ ಮೂಲಕ ಸಬ್ ಕಾ ವಿಭಜನ್ ಸಬ್ ಕಾ ಶೋಷಣ್ ಎಂಬಂ ಘೋಷಣೆಯನ್ನಿಟ್ಕೊಂಡಿದ್ದಾರೆ.ಸ್ವತಃ ಸಿದ್ದರಾಮಯ್ಯ ಅವರೇ ಈ ಜಾತಿ ಜನಗಣತಿ ಬರೆಸಿರುವ ಅನುಮಾನ ದಟ್ಟವಾಗಿದೆ.ಸರಕಾರ ಯೋಜನೆಗೆ ಜಾತಿ ಜನಗಣತಿ ಮಾಡ ಬೇಕೇ ಹೊರತು ವಿಭಜನೆಗೆ ಮಾಡಬಾರದು ಎಂದು ಟೀಕಿಸಿದರು.

ಈ ವರದಿ ಮೂಲಕ ಸಾಕಷ್ಟು ಗೊಂದಲ ಮೂಡಿಸಲಾಗ್ತಿದೆ. ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ರಾಜಕೀಯ ಲಾಭ ಮಾಡಿಕೊಳ್ತಿರೋದೂ ಕಂಡು ಬರುತ್ತಿದೆ. ಸಾಕಷ್ಟು ಹಿಂದುಳಿದ ಸಮಾಜಗಳಿಗೆ ಈ ವರದಿ ಸಾಕಷ್ಟು ಅನ್ಯಾಯ ಮಾಡಲಾಗುತ್ತಿದೆ ಎಂದರು.

ಕಾಂತರಾಜು ಅವರ ಮೂಲ ವರದಿಯೇ ಇಲ್ಲ. ಅಂದ್ಮೇಲೆ ಜಯಪ್ರಕಾಶ್ ಹೆಗ್ಡೆ ಹೇಗೆ ತಯಾರು ಮಾಡಿದರು.ಆ ವರದಿ ಸಿಗದೇ ಈ ವರದಿ ಹೇಗೆ ತಯಾರು ಮಾಡಿದ್ರು?ನಿಮ್ಮ ರಾಜಕೀಯ ಲಾಭ ಆಗಲಿಲ್ಲ ಎಂದು ಆ ವರದಿ ಎಲ್ಲಿಟ್ಟಿದ್ದೀರಿ?ಒಟ್ಟಾರೆ ಮೀಸಲಾತಿ ಈಗ 85% ಕ್ಕೆ ತಗೊಂಡು ಹೋಗೋದಾಗಿ  ವರದಿಯಲ್ಲಿ ಹೇಳಿದ್ದಾರೆ.ಬಿಹಾರದಲ್ಲಿ 65% ಕ್ಕೆ ಮೀಸಲಾತಿ ಹೆಚ್ಚಿಸಲು ಕೋರ್ಟ್ ಒಪ್ಪಿಲ್ಲಇನ್ನು ಇಲ್ಲಿ ಹೇಗೆ 85% ಕ್ಕೆ ರಾಜ್ಯದ ಮೀಸಲಾತಿ ಕೊಡೋಕ್ಕೆ ಸಾಧ್ಯ? ಎಂದು ಪ್ರಶ್ನಿಸಿದರು.

ವರದಿ ವೈಜ್ಞಾನಿಕವಾಗಿಲ್ಲ. ಸಂವಿಧಾನಕ್ಕೆ ನಿಷ್ಠೆ ತೋರುವಲ್ಲಿ ಈ ವರದಿ ವಿಫಲ ಆಗಿದೆ. ಯಾವುದೇ ಜಾತಿಯ ನಿಖರ ಮಾಹಿತಿಯನ್ನು ನೀಡುವಲ್ಲಿ ವಿಫಲವಾಗಿದೆ. ಹೀಗಾಗಿ ವಿಶೇಷ ಅಧಿವೇಶ ಕರೆದು ಈ ವರದಿ ಬಗ್ಗೆ ಸರ್ಕಾರ ಚರ್ಚಿಸಲಿ ಎಂದು ಆಗ್ರಹಿಸಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist