ಕಾಶ್ಮೀರ(www.thenewzmirror.com):ಪಹಲ್ಗಾಮ್ ದಾಳಿಯಲ್ಲಿ ಹುತಾತ್ಮರಾಗಿರುವ, ಸಂಕಷ್ಟಕ್ಕೆ ಈಡಾಗಿರುವ ಕುಟುಂಬಗಳ ಸದಸ್ಯರೊಂದಿಗೆ ತೇಜಸ್ವೀ ಸೂರ್ಯ ( ಸಂಸದರು, ಬೆಂಗಳೂರು ದಕ್ಷಿಣ) ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದು, ರಾಜ್ಯ ಸರ್ಕಾರದ ಸಚಿವರಾದ ಸಂತೋಷ್ ಲಾಡ್ & ಇತರ ಅಧಿಕಾರಿಗಳು ಕೂಡ ಕುಟುಂಬ ಸದಸ್ಯರೊಂದಿಗೆ ಪ್ರಯಾಣಿಸಲಿದ್ದಾರೆ.
ತಂಡವು ಶ್ರೀನಗರದಿಂದ ದೆಹಲಿ ತಲುಪಿ, ಅಲ್ಲಿಂದ ಬೆಂಗಳೂರಿಗೆ ನಾಳೆ ಬೆಳಿಗ್ಗೆ 3.45 ಕ್ಕೇ ತಲುಪಲಿದೆ. ಮೃತರ ಪಾರ್ಥೀವ ಶರೀರಗಳನ್ನು ಕೂಡ ಇದೇ ಫ್ಲೈಟ್ ಗಳಲ್ಲಿ ತರಲಾಗುತ್ತಿದೆ.
ಒಟ್ಟು 13 ಜನ ಕುಟುಂಬ ಸದಸ್ಯರು ಜೊತೆಯಿದ್ದು, ದುರ್ಘಟನೆ ಸಂಭವಿಸಿದ ತಕ್ಶಣವೇ ಪಹಲ್ಗಾಮ್ ನಲ್ಲಿದ್ದ ತಂಡದ ಜೊತೆ ಮಾತನಾಡಿ, ಧೈರ್ಯ ತುಂಬಿರುವ ಸಂಸದ ಸೂರ್ಯ ರವರು, ಸರ್ಕಾರದ ವತಿಯಿಂದ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡಿ ಸುರಕ್ಷಿತ ವಾಪಸಾತಿಗೆ ಕ್ರಮ ಕೈಗೊಂಡಿರುತ್ತಾರೆ. ಸಚಿವರಾದ ಸಂತೋಷ್ ಲಾಡ್ ರೊಂದಿಗೆ, ಸ್ಥಳೀಯ ಆಡಳಿತದೊಂದಿಗೆ ಸಮನ್ವಯ ಸಾಧಿಸಿ, ಎಲ್ಲರನ್ನೂ ಬೆಂಗಳೂರಿಗೆ ಕರೆತರುವಲ್ಲಿ ಶ್ರಮಿಸಿದ್ದು ಗಮನಾರ್ಹ.