ಬೆಂಗಳೂರು(www.thenewzmirror.com): ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡಮಿಯಿಂದ ನೀಡಲಾಗುವ ಜೀವಮಾನ ಸಾಧನೆ ಪ್ರಶಸ್ತಿ ನಟ,ಹ್ಯಾಟ್ರಿಕ್ ಹೀರೋ ಶಿವ ರಾಜಕುಮಾರ್ ಅವರಿಗೆ ಲಭಿಸಿದ್ದು ,ದುನಿಯಾ ವಿಜಯ್ ಅತ್ಯುತ್ತಮ ನಿರ್ದೇಶಕ, ಗಣೇಶ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.2025 ರ ಅವಾರ್ಡ್ ಕಾರ್ಯಕ್ರಮದಲ್ಲಿ ಚಿತ್ರೋದ್ಯಮದ ಅನೇಕ ತಾರೆಯರು ಭಾಗಿಯಾಗಿದ್ದರು.
ಪ್ರಶಸ್ತಿ ವಿವರ:
ಜೀವಮಾನ ಸಾಧನೆ ಪ್ರಶಸ್ತಿ
ಡಾ.ಶಿವ ರಾಜಕುಮಾರ್
ಅತ್ಯುತ್ತಮ ನಿರ್ದೇಶನ
ವಿಜಯಕುಮಾರ್ (ಚಿತ್ರ: ಭೀಮ)
ಅತ್ಯುತ್ತಮ ಚಿತ್ರ
ಹದಿನೇಳೆಂಟು
ಅತ್ಯುತ್ತಮ ನಟ
ಗಣೇಶ್ (ಚಿತ್ರ: ಕೃಷ್ಣಂ ಪ್ರಣಯ ಸಖಿ)
ಅತ್ಯುತ್ತಮ ಚಿತ್ರಕಥೆ
ಪೃಥ್ವಿ ಕೊಣನೂರು (ಚಿತ್ರ: ಹದಿನೇಳೆಂಟು)
ಅತ್ಯುತ್ತಮ ನಟಿ
ರೋಶಿನಿ ಪ್ರಕಾಶ್ (ಚಿತ್ರ: ಮರ್ಫಿ)
ಅತ್ಯುತ್ತಮ ಪೋಷಕ ನಟಿ
ರೇಖಾ ಕುಡ್ಲಿಗಿ (ಚಿತ್ರ: ಹದಿನೇಳೆಂಟು)
ಅನು ಪ್ರಭಾಕರ್ (ಚಿತ್ರ: ಭೈರಾದೇವಿ)
ಅತ್ಯುತ್ತಮ ಪೋಷಕ ನಟ
ಗೋಪಾಲಕೃಷ್ಣ ದೇಶಪಾಂಡೆ (ಚಿತ್ರ: ಶಾಖಾಹಾರಿ)
ಅತ್ಯುತ್ತಮ ಬಾಲನಟಿ/ನಟ
ಋತುಸ್ಪರ್ಷ (ಚಿತ್ರ: ಟೀಕ್ವಾಂಡೋ ಗರ್ಲ್)
ಅತ್ಯುತ್ತಮ ಸಂಗೀತ ನಿರ್ದೇಶಕ
ಚರಣ್ ರಾಜ್ (ಭೀಮ)
ಅತ್ಯುತ್ತಮ ಗಾಯಕಿ
ಇಂದು ನಾಗರಾಜ್ (ಚಿತ್ರ: ಕೃಷ್ಣಂ ಪ್ರಣಯ ಸಖಿ, ಹಾಡು: ಚಿನ್ನಮ್ಮ)
ಅತ್ಯುತ್ತಮ ಗಾಯಕ
ರಾಹುಲ್ ಮತ್ತು ಎಂ.ಸಿ ಬಿಜ್ಜು (ಚಿತ್ರ: ಭೀಮ, ಹಾಡು: ಬ್ಯಾಡ್ ಬಾಯ್ಸ್)
ಅತ್ಯುತ್ತಮ ಚಿತ್ರಸಾಹಿತಿ
ಡಾ.ನಾಗೇಂದ್ರ ಪ್ರಸಾದ್ (ಚಿತ್ರ: ಕೃಷ್ಣಂ ಪ್ರಣಯ ಸಖಿ, ಹಾಡು: ದ್ವಾಪರ)
ಅತ್ಯುತ್ತಮ ಹಿನ್ನೆಲೆ ಸಂಗೀತ
ರವಿ ಬಸ್ರೂರು (ಚಿತ್ರ: ಭೈರತಿ ರಣಗಲ್)
ಅತ್ಯುತ್ತಮ ನೃತ್ಯ ನಿರ್ದೇಶನ
ಮದನ್ ಹರಿನಿ (ಗೀತೆ: ಶ್ರೀ ಕೃಷ್ಣಂ ಜಗತ್ ಕರ್ಣಂ, ಚಿತ್ರ: ಕೃಷ್ಣಂ ಪ್ರಣಯ ಸಖಿ)
ಅತ್ಯುತ್ತಮ ಚೊಚ್ಚಲ ನಟ (ಸಂಚಾರಿ ವಿಜಯ್ ಪ್ರಶಸ್ತಿ)
ಸಮರ್ಜಿತ್ ಲಂಕೇಶ್ (ಚಿತ್ರ: ಗೌರಿ)
ಅತ್ಯುತ್ತಮ ಚೊಚ್ಚಲ ನಟಿ (ತ್ರಿಪುರಾಂಭ ಪ್ರಶಸ್ತಿ)
ಶೆರ್ಲಿನ್ ಭೋಸ್ಲೆ (ಚಿತ್ರ: ಹದಿನೇಳೆಂಟು)
ಅತ್ಯುತ್ತಮ ಚೊಚ್ಚಲ ಬರಹಗಾರ (ಚಿ.ಉದಯಶಂಕರ್ ಪ್ರಶಸ್ತಿ)
ಜೈ ಶಂಕರ್ (ಚಿತ್ರ: ಶಿವಮ್ಮ)
ಅತ್ಯುತ್ತಮ ಚೊಚ್ಚಲ ನಿರ್ಮಾಪಕ (ಪುನೀತ್ ರಾಜ್ ಕುಮಾರ್ ಪ್ರಶಸ್ತಿ)
ರಾಜೇಶ್ ಕೀಳಂಬಿ ಮತ್ತು ರಂಜನಿ ಪ್ರಸನ್ನ (ಚಿತ್ರ: ಶಾಖಾಹಾರಿ)
ಅತ್ಯುತ್ತಮ ಚೊಚ್ಚಲ ನಿರ್ದೇಶನ (ಶಂಕರ್ ನಾಗ್ ಪ್ರಶಸ್ತಿ)
ಉತ್ಸವ್ ಗೊನ್ವಾರ್ (ಚಿತ್ರ: ಫೋಟೋ)
ಅತ್ಯುತ್ತಮ ವಿಎಫ್ ಎಕ್ಸ್
ನಿರ್ಮಲ ಕುಮಾರ್ (ಚಿತ್ರ: ಬಘೀರ)
ಅತ್ಯುತ್ತಮ ಸಾಹಸ ನಿರ್ದೇಶನ
ಚೇತನ್ ಡಿಸೋಜ್ (ಮ್ಯಾಕ್ಸ್)
ಅತ್ಯುತ್ತಮ ಕಲಾ ನಿರ್ದೇಶನ
ಜಿ. ಶಿವಕುಮಾರ್ (ಚಿತ್ರ: ಯುಐ)
ಅತ್ಯುತ್ತಮ ಸಂಕಲನ
ಉಜ್ವಲ್ ಚಂದ್ರ (ಚಿತ್ರ: ಶಾಲಿವಾಹನ ಶಕೆ)
ಅತ್ಯುತ್ತಮ ಸಂಭಾಷಣೆಕಾರ
ನಾಗರಾಜ್ ಸೋಮಯಾಜಿ (ಮರ್ಯಾದೆ ಪ್ರಶ್ನೆ)
ಅತ್ಯುತ್ತಮ ಛಾಯಾಗ್ರಹಣ
ಶೇಖರ್ ಚಂದ್ರ (ಮ್ಯಾಕ್ಸ್)
ಜ್ಯೂರಿ ಪ್ರಶಸ್ತಿಗಳು
1. ಮಮತಾ ರಾಹುತ್ (ಚಿತ್ರ: ತಾರಿಣಿ)
2. ಪಳನಿ ಡಿ ಸೇನಾಪತಿ (ಸೌಂಡ್ ಎಂಜಿನೀಯರಿಂಗ್)
3. ಡಾ.ಪೂಜಾ ರಾವ್ (ಮಾಸ್ಟರ್ ಕ್ಲಾಸ್ ಸೀರೀಸ್)
4. ಡ್ರಾಗನ್ ಮಂಜು (ಪ್ರತಿನಾಯಕನಾಗಿ ಅತ್ಯುತ್ತಮ ಚೊಚ್ಚಲ ಚಿತ್ರ – ಭೀಮ)






