ಬೆಂಗಳೂರು,(www.thenewzmirror.com);
ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಪ್ರಧಾನಿ ಮೋದಿ ಮೊದಲ ಬಾರಿಗೆ ದೇಶವನ್ನ ಉದ್ದೇಶಿಸಿ ಮಾತನಾಡಿದ್ದಾರೆ. ಆಪರೇಷನ್ ಸಿಂಧೂರವನ್ನ ದೇಶದ ಹೆಣ್ಣುಮಕ್ಕಳಿಗೆ ಅರ್ಪಿಸಲಾಗಿದೆ ಎಂದು ಹೇಳಿದ ಮೋದಿ, ಪಾಪಿ ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಟ್ಟ ಭಾರತೀಯ ಸೈನ್ಯಕ್ಕೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತೀಯ ಸೇನೆ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ, ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಆಪರೇಷನ್ ಸಿಂಧೂರ ಹೆಸರಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಉಗ್ರರ ನೆಲೆಗಳನ್ನ ಧ್ವಂಸ ಮಾಡುವಲ್ಲಿ ಯಶಸ್ವಿನೂ ಆಗಿತ್ತು. ಪಾಕಿಸ್ತಾನ ಕದನ ವಿರಾಮ ಮಾಡಿಕೊಳ್ಳುವಂತೆ ಒತ್ತಡ ಹಾಕುವಲ್ಲಿ ಯಶಸ್ವಿಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ದೇಶವನ್ನ ಉದ್ದೇಶಿಸಿ ಮಾತನಾಡಿದ್ರು. ಈ ವೇಳೆ ಸೇನೆಯ ಪರಾಕ್ರಮವನ್ನು ಹಾಡಿ ಹೊಗಳಿದ್ದಲ್ಲದೇ ಮೂರು ಪಡೆಗಳಿಗೆ ಸೆಲ್ಯೂಟ್ ತಿಳಿಸಿದ್ದಾರೆ.
ಪಾಕಿಸ್ತಾನದ ಜತೆ ಮಾತುಕತೆ ನಡೆಸಬೇಕು ಎಂದ್ರೆ ಕೆಲ ಕಂಡೀಷನ್ ಹಾಕಿದ ಪ್ರಧಾನಿ ಮೋದಿ, ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ನಡೆಯಲ್ಲ. ರಕ್ತ ಮತ್ತು ನೀರು ಒಟ್ಟಿಗೆ ಹರಿಸಲು ಸಾಧ್ಯವಿಲ್ಲ ಅಂತ ಮತ್ತೆ ಗುಡುಗಿದ್ದಾರೆ. ಹೆಣ್ಮಕ್ಕಳ ಸಿಂಧೂರ ಅಳಿಸಿ ಹಾಕಿದ ಉಗ್ರರಿಗೆ ತಕ್ಕ ಪಾಠ ಈಗಾಗಲೇ ಕಲಿಸಲಾಗಿದೆ ಎಂದು ಮೋದಿ ತಿಳಿಸಿದ್ರು. ಪಾಕಿಸ್ತಾನದ ಜೊತೆ ಮಾತುಕತೆ ನಡೆಸುವುದೇ ಆದಲ್ಲಿ ಅದು ಭಯೋತ್ಪಾದನೆ ವಿಚಾರವಾಗಿ ಹಾಗೂ ಪಿಒಕೆ ವಿಚಾರವಾಗಿ ಮಾತ್ರ ಇರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ನೀರು ಮತ್ತು ರಕ್ತ ಒಟ್ಟಿಗೆ ಹರಿಯೋದಿಲ್ಲ ಎಂದು ಹೇಳುವ ಮೂಲಕ ಅವರು ಸಿಂಧೂ ನದಿ ನೀರನ್ನು ಪಾಕಿಸ್ತಾನಕ್ಕೆ ಬಿಡುವ ನಿರ್ಧಾರ ಸದ್ಯಕಂತೂ ಇಲ್ಲ ಅನ್ನೋ ಸಂದೇಶ ನೀಡಿದ ಮೋದಿ, ದೇಶದ ಹೆಣ್ಣುಮಕ್ಕಳ ಸಿಂಧೂರ ಅಳಿಸಿದರೆ ಏನಾಗುತ್ತದೆ ಅನ್ನೋದನ್ನ ಉಗ್ರರಿಗೆ ಗೊತ್ತಾಗುವ ಹಾಗೆ ಭಾರತ ಮಾಡಿದೆ ಎಂದು ತಿಳಿಸಿದ್ದಾರೆ ಮೋದಿ. ಹಾಗೆನೇ ಇನ್ಮುಂದೆ ಪಾಕಿಸ್ತಾನದ ಯಾವುದೇ ನ್ಯೂಕ್ಲಿಯರ್ ಬಾಂಬ್‌ನ ಬ್ಲ್ಯಾಕ್ ಮೇಲೆ ನಡೆಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಅಲ್ಲದೇ ಇಡೀ ವಿಶ್ವವೇ ಉಗ್ರರ ವಿಚಾರದಲ್ಲಿ ಪಾಕಿಸ್ತಾನ ಯಾವ ರೀತಿ ನಡೆದುಕೊಂಡಿದೆ ಎನ್ನುವುದನ್ನು ನೋಡಿದೆ. ಉಗ್ರರ ಅಂತ್ಯ ಸಂಸ್ಕಾರದಲ್ಲಿ ಪಾಕ್ ಸೇನೆ ಹಾಗೂ ಪಾಕಿಸ್ತಾನದ ಸರ್ಕಾರ ಭಾಗಿಯಾಗಿದೆ.
ಆಪರೇಷನ್ ಸಿಂಧೂರ ಹೆಸರಿನಲ್ಲಿ ಭಾರತೀಯ ಸೇನೆ ಮೇ 6ರ ರಾತ್ರಿ, ಮೇ 7ರಂದು ಆಪರೇಷನ್ ನಡೆಸಿತ್ತು. ನೇರವಾಗಿ ಭಯೋತ್ಪಾದಕ ತಾಣಗಳ ಮೇಲೆ ದಾಳಿ ನಡೆಸಿ ಉಗ್ರರ ನೆಲೆಗಳನ್ನ ಧ್ವಂಸ ಮಾಡಲಾಗಿದೆ ಎಂದು ತಿಳಿಸಿದ ಮೋದಿ, ಭಾರತ ಇಂಥ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಪರಿಕ್ಪಲನೆಯನ್ನ ಪಾಕಿಸ್ತಾನ ಕನಸಿನಲ್ಲೂ ಊಹೆ ಮಾಡಿರಲಿಲ್ಲ ಅಂತ ಹೇಳಿದ್ರು. ಭಯೋತ್ಪಾದಕ ಪ್ರಧಾನ ಕಚೇರಿಯನ್ನೇ ಭಾರತ ನೆಲಸಮಗೊಳಿಸಿದ್ದಲ್ಲದೇ, ಭಾರತ ಪ್ರತೀಕಾರದಿಂದ ಪಾಕಿಸ್ತಾನ ಅಕ್ಷರಸಹ ಕಂಗಾಲಾಗಿದೆ ಎಂದ್ರು. ಪಾಕಿಸ್ತಾನದ ವಾಯುನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ಪಾಕ್ ಸೊಕ್ಕನ್ನು ಅಡಗಿಸಲಾಗಿದೆ. ಭಾರತ ಪ್ರತೀಕಾರಕ್ಕೆ ಬೆಚ್ಚಿದ ಪಾಕಿಸ್ತಾನ ಹಲವು ರಾಷ್ಟ್ರಗಳ ಮುಂದೆ ಹೋಗಿತ್ತು. ಭಾರತದ ಡಿಸಿಎಂಒಗೆ ಕರೆ ಮಾಡುವ ಮುನ್ನವೇ ಪಾಕಿಸ್ತಾನದ ಮೇಲೆ ದಾಳಿ ನಡೆಸಲಾಗಿತ್ತು ಎಂದು ಪ್ರಧಾನಿ ಹೇಳಿದ್ರು.