ಕೆಎಸ್ಆರ್ಟಿಸಿ ಮುಡಿಗೇರಿದ 04 ರಾಷ್ಟ್ರೀಯ ಬಿಸಿನೆಸ್ ಅವಾರ್ಡ್ ಫಾರ್ ಲೀಡರ್ಶಿಪ್ & ಎಕ್ಸಲೆನ್ಸಿ ಪ್ರಶಸ್ತಿಗಳು

RELATED POSTS

ಬೆಂಗಳೂರು(www.thenewzmirror.com): ಅತ್ಯುತ್ತಮ ಸಾರಿಗೆ ಸೇವೆ ಮೂಲಕ ದೇಶದ ಗಮನ ಸೆಳೆದಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಮತ್ತೆ ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ, 04 ರಾಷ್ಟ್ರೀಯ ಬಿಸಿನೆಸ್ ಅವಾರ್ಡ್ ಫಾರ್ ಲೀಡರ್ಶಿಪ್ & ಎಕ್ಸಲೆನ್ಸಿ ಪ್ರಶಸ್ತಿ-2025 ಅನ್ನು ಕೆಎಸ್ಆರ್ಟಿಸಿ ತನ್ನದಾಗಿಸಿಕೊಂಡಿದೆ.

ಕೆ.ಎಸ್.ಆರ್.ಟಿ.ಸಿ ಯು ಕೈಗೊಂಡಿರುವ ಅತ್ಯುತ್ತಮ ಪ್ರಯಾಣಿಕರ ಸ್ನೇಹಿ ಹಾಗೂ ಮಾಹಿತಿ ತಂತ್ರಜ್ಞಾನದ ಉಪಕ್ರಮಗಳಿಗಾಗಿ 04 ರಾಷ್ಟ್ರೀಯ ಬಿಸಿನೆಸ್ ಅವಾರ್ಡ್ ಫಾರ್ ಲೀಡರ್ಶಿಪ್ & ಎಕ್ಸಲೆನ್ಸಿ ಪ್ರಶಸ್ತಿಯು ಸಿಕ್ಕಿದೆ.   

1. Most Best use of Technology

2. Most Innovative Company of the year 

3. Most Customer Friendly Company of the year

4. Best Brand Development ಗೆ ಪ್ರಶಸ್ತಿಗಳು  ಲಭಿಸಿವೆ.

ಇಂದು ಮುಂಬಯಿನ ಹೋಟಲ್ ಪಾರ್ಲೆ ಇಂಟರ್ನ್ಯಾಷನಲ್ ನಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮೋನಾಲಿ ಬಾಗುಲ್, ಸಂಸ್ಥಾಪಕರು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ,  VE BIZTALK ಮೀಡಿಯಾ, ರವರು ನಿಗಮಕ್ಕೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ರಾಧ ಎಲ್. ಗುಂಡಳ್ಳಿ, ಉಪ ಉಗ್ರಾಣ ಮತ್ತು ಖರೀದಿ ನಿಯಂತ್ರಕರು ಹಾಗೂ ಅಶೋಕ್ ಕುಮಾರ್, ವಿಭಾಗೀಯ ನಿಯಂತ್ರಣಾಧಿಕಾರಿ, ಚಾಮರಾಜನಗರ ವಿಭಾಗ ರವರು ನಿಗಮದ ಪರವಾಗಿ ಪ್ರಶಸ್ತಿಗಳನ್ನು ಸ್ವೀಕರಿಸಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist