ಬೆಂಗಳೂರು(www.thenewzmirror.com):ಬಿ.ಟಿ.ಎಂ ವಿಧಾನಸಭಾ ಕ್ಷೇತ್ರದ ಒಟ್ಟು 43 ಸರ್ಕಾರಿ/ಅನುದಾನಿತ ಶಾಲಾ/ಕಾಲೇಜುಗಳಿಗೆ ಉಚಿತವಾಗಿ ನೋಟ್ ಬುಕ್ ಗಳು ಮತ್ತು ಬ್ಯಾಗ್ ಗಳನ್ನು ಸ್ಥಳೀಯ ಶಾಸಕರೂ ಆದ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮುಂದಾಗಿದ್ದು ಸಾಂಕೇತಿಕವಾಗಿ ವಿತರಣಾಕಾರ್ಯಕ್ಕೆ ಸಚಿವರು ಚಾಲನೆ ನೀಡಿದ್ದಾರೆ.
ಜೂನ್ 9 ರಿಂದ 15 ರೊಳಗೆ ಉಚಿತ ಪುಸ್ತಕ ಮತ್ತು ಬ್ಯಾಗ್ ವಿತರಣೆ ಮಾಡಲು ನಿರ್ಧರಿಸಲಾಗಿದೆ, ಬಿ ಟಿ ಎಂ ಕ್ಷೇತ್ರ -ಬೆಂಗಳೂರು ನಗರದ ಶಿಕ್ಷಣ ಕಾಶಿ – ಸ್ಥಳೀಯ ಶಾಸಕರು, ಸಾರಿಗೆ ಹಾಗೂ ಮುಜರಾಯಿ ಸಚಿವರ ರಾಮಲಿಂಗಾರೆಡ್ಡಿ ರವರ ಶಿಕ್ಷಣ ಸ್ನೇಹಿ ಬದ್ಧತೆಗೆ ಇದು ಜ್ವಲಂತ ಸಾಕ್ಷಿಯಾಗಿದೆ.
ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ
1. 23 ಸರ್ಕಾರಿ ಶಾಲಾ/ಕಾಲೇಜುಗಳು
2. ಸರ್ಕಾರಿ* *ಅನುದಾನಿತ* *ಶಾಲೆಗಳು*
3. ಅತ್ಯಂತ ಬಡ ಜನರು ವಾಸಿಸುವ ಪ್ರದೇಶದಲ್ಲಿನ *ಕಾನ್ವೆಂಟ್* ಶಾಲೆಗಳು
ಸದರಿ ಶಾಲಾ/ಕಾಲೇಜಿನಲ್ಲಿ ಓದುವ 13000 ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ನೋಟ್ ಬುಕ್ ಗಳು, ಬ್ಯಾಗ್ ಗಳ ವಿತರಣೆಯ ವಿಶೇಷ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿತ್ತು.
ಸಾಂಕೇತಿಕವಾಗಿ ಈ ಕಾರ್ಯಕ್ರಮಕ್ಕೆ ಇಂದು ಕೋರಮಂಗಲ ಗ್ರಾಮದಲ್ಲಿರುವ ಸರ್ಕಾರಿ ಪ್ರೈಮರಿ ಮಾಡಲ್ ಶಾಲೆ,ಚಾಲನೆ ನೀಡಲಾಯಿತು
ಬಿ.ಟಿ.ಎಂ ವಿಧಾನಸಭಾ ಕ್ಷೇತ್ರದ ಒಟ್ಟು 43 ಶಾಲಾ/ಕಾಲೇಜುಗಳಿಗೆ ನೋಟ್ ಬುಕ್ ಗಳು ಮತ್ತು ಬ್ಯಾಗ್ ಗಳನ್ನು ಜೂನ್ 9 ರಿಂದ 15 ರೊಳಗೆ ವಿತರಣೆ ಮಾಡಲಾಗುವುದು. ರಾಮಲಿಂಗಾ ರೆಡ್ಡಿ ರವರು, ಮಾಜಿ ಬಿಬಿಎಂಪಿ ಸದಸ್ಯರುಗಳು, ಬ್ಲಾಕ್ ಅಧ್ಯಕ್ಷರುಗಳು, ಕಾಂಗ್ರೆಸ್ ಮುಖಂಡರುಗಳೊಡನೆ ಈ ಶಾಲಾ ಕಾಲೇಜುಗಳಿಗೆ ಖುದ್ದು ಭೇಟಿ ನೀಡಿ, ಮಕ್ಕಳಿಗೆ ನೋಟ್ ಬುಕ್ ಹಾಗೂ ಬ್ಯಾಗ್ ಗಳನ್ನು ವಿತರಣೆ ಮಾಡಲಿದ್ದಾರೆ.