ರಾಜ್ಯ ಬಿಜೆಪಿ ನಾಯಕರ ಅಸಂಸ್ಕೃತಿ, ಅನಾಚಾರದ ಹೇಳಿಕೆಗಳಿಗೆ ಮತ್ತೊಂದು ಸೇರ್ಪಡೆ: ರಾಮಲಿಂಗಾರೆಡ್ಡಿ

RELATED POSTS

ಬೆಂಗಳೂರು(www.thenewzmirror.com):ನಮ್ಮೊಡನೆ ಇರುವ ಹೆಣ್ಣುಮಕ್ಕಳನ್ನು ಗೌರವಿಸುವುದೇ ಭಾರತ ಮಾತೆಗೆ ನಾವು ಸಲ್ಲಿಸುವ ನಿಜವಾದ ಗೌರವ. ಆದರೆ  ಇದನ್ನು ಬಿ.ಜೆ.ಪಿ ಅವರಿಂದ ನಿರೀಕ್ಷಿಸಬೇಡಿ, ನಾವು ಭಾಷಣಕ್ಕೆ ಮಾತ್ರ ಸೀಮಿತ ಎಂಬುದನ್ನು ಜಗತ್ತಿಗೆ ಸಾರಲು  ಹೊರಟಿರುವ ಇಂತಹ ಮನಸ್ಥಿತಿಯ ನಾಯಕರುಗಳಿಗೆ ನನ್ನ ಧಿಕ್ಕಾರ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ವಿರುದ್ಧ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಹೇಳಿಕೆಗೆ ತೀವ್ರ ಅಸಮಧಾನ ವ್ಯಕ್ತಪಡಿಸಿರುವ ರಾಮಲಿಂಗಾರೆಡ್ಡಿ,ರಾಜ್ಯ ಬಿಜೆಪಿ ನಾಯಕರ ಅಸಂಸ್ಕೃತಿ ಮತ್ತು ಅನಾಚಾರದ ಹೇಳಿಕೆಗಳಿಗೆ ಮತ್ತೊಂದು ಸೇರ್ಪಡೆ,ನಾಚಿಕೆಗೇಡಿನ ವರ್ತನೆ, ಕೊಳಕು ಭಾಷಾ ಬಳಕೆಯ ಪು‌ನರಾವರ್ತನೆ ಎಂದು ಕಿಡಿಕಾರಿದ್ದಾರೆ.

ವಿಧಾನ‌ಪರಿಷತ್ ಸದಸ್ಯ ರವಿಕುಮಾರ್ ಕಲಬುರಗಿ ಜಿಲ್ಲಾಧಿಕಾರಿಗಳ ಕುರಿತು ಕೆಲವು ತಿಂಗಳುಗಳ ಹಿಂದೆಯಷ್ಟೇ ಅವಹೇಳನಕಾರಿಯಾಗಿ ಮಾತನಾಡಿ, ನ್ಯಾಯಾಲಯವು ಛೀಮಾರಿ‌ ಹಾಕಿದ ನಂತರ ಬೇಷರತ್ ಕ್ಷಮೆ‌ ಕೇಳಿದ್ದರು. ಮತ್ತೊಂದು ಪ್ರಕರಣದಲ್ಲಿ ಸಿ.ಟಿ.ರವಿ ಅವರು ಸದನದಲ್ಲಿ  ಮಹಿಳಾ‌ ಮಂತ್ರಿಯವರನ್ನು ಕುರಿತು ಆಡಿದ ಮಾತು ಅಸಹನೀಯ, ಸಂವೇದನಾರಹಿತ,  ಸಮಾಜಕ್ಕೆ ಆಘಾತಕಾರಿಯಾದ ನಡವಳಿಕೆಯಾಗಿತ್ತು.ಈಗ ಮತ್ತೊಮ್ಮೆ ರವಿಕುಮಾರ್ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಕುರಿತ ಹೇಳಿಕೆ? ಸರ್ಕಾರವನ್ನು ನಡೆಸಲು ಶ್ರಮಿಸುವ ಮಹಿಳಾ ಅಧಿಕಾರಿ ಅದರಲ್ಲೂ ಅತ್ಯುನ್ನತ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುವವರ ಬಗ್ಗೆ ಮಾತನಾಡುವಾಗ ಕನಿಷ್ಠ ಸೌಜನ್ಯವೂ ತೋರದೆ, ತಮ್ಮ ಮನೆಯ ಹೆಣ್ಣುಮಕ್ಕಳಿಗಾದರೆ ಈ ರೀತಿ ಭಾಷೆ ಬಳಸುತ್ತೇವೆಯೇ  ಎಂದು ಯೋಚಿಸುವ ಔದಾರ್ಯವೂ ಇಲ್ಲದ ಕೊಳಕು  ಮನಸ್ಸಿನ ಮನುಷ್ಯ ಇವರು ಎಂದು ಟೀಕಿಸಿದರು.

ಹುಟ್ಟು ಗುಣ ಸುಟ್ಟರು ಹೋಗಲ್ಲ‌ ಎಂಬ ಗಾದೆ ಬಿ.ಜೆ.ಪಿ ನಾಯಕರಿಗೆ ಅನ್ವರ್ಥ ಅನ್ನಿಸುತ್ತದೆ.ಬಿ.ಜೆ.ಪಿ, ಆರ್ ಎಸ್ ಎಸ್ , ವಿಶ್ವ ಹಿಂದೂ ಪರಿಷತ್ ನವರು ಅವರ ಪಕ್ಷದ ಪದಾಧಿಕಾರಿಗಳಿಗೆ/ ನಾಯಕರುಗಳಿಗೆ ನಾಲಿಗೆ ಬಿಗಿ ಹಿಡಿದು ಮಾತನಾಡುವುದಕ್ಕೆ ತರಬೇತಿ ನೀಡಲು ಮರೆತಿರಬೇಕು.  ಅದರಲ್ಲೂ ಮಹಿಳೆಯರ ಕುರಿತು ಮಾತನಾಡುವಾಗ ಸೌಜನ್ಯ, ಸಂಸ್ಕೃತಿ, ಆಚಾರ ವಿಚಾರ ಯಾವುದೂ ಇಲ್ಲದೆ ಅನಾಗರೀಕ, ಅಪಾರ್ಥ‌ ಕಲ್ಪಿಸುವ ಭಾಷೆ ಬಳಸುವುದನ್ನು ಕಲಿಸಿರಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಮಾತು ಮಾತಿಗೆ ಭಾರತ ಮಾತೆಗೆ ಜೈಕಾರ ಹಾಕುವ ಇವರು ಬೂಟಾಟಿಕೆಯವರು,  ನಮ್ಮೊಡನೆ ಇರುವ ಹೆಣ್ಣುಮಕ್ಕಳನ್ನು ಗೌರವಿಸುವುದೇ ಭಾರತ ಮಾತೆಗೆ ನಾವು ಸಲ್ಲಿಸುವ ನಿಜವಾದ ಗೌರವ. ಆದರೆ  ಇದನ್ನು ಬಿ.ಜೆ.ಪಿ ಅವರಿಂದ ನಿರೀಕ್ಷಿಸಬೇಡಿ, ನಾವು ಭಾಷಣಕ್ಕೆ ಮಾತ್ರ ಸೀಮಿತ ಎಂಬುದನ್ನು ಜಗತ್ತಿಗೆ ಸಾರಲು  ಹೊರಟಿರುವ ಇಂತಹ ಮನಸ್ಥಿತಿಯ ನಾಯಕರುಗಳಿಗೆ ನನ್ನ ಧಿಕ್ಕಾರ ಎಂದಿದ್ದಾರೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist