ಬೆಂಗಳೂರು(www.thenewzmirror.com): 2024-25ನೇ ಆರ್ಥಿಕ ವರ್ಷಾಂತ್ಯದ ದಿನಗಳಾದ ದಿನಾಂಕ:30-03-2025 ಹಾಗೂ ದಿನಾಂಕ: 31-03-2025 ದಿನ ಸಾರ್ವತ್ರಿಕ ರಜಾ ದಿನಗಳಾಗಿದ್ದರೂ, ತೆರಿಗೆ ಪಾವತಿದಾರರ ಅನುಕೂಲಕ್ಕಾಗಿ ಸದರಿ ದಿನಗಳಂದು ವಾಣಿಜ್ಯ ತೆರಿಗೆಗಳ ಇಲಾಖೆಯ ಎಲ್ಲಾ ಕಛೇರಿಗಳು ಕಾರ್ಯನಿರ್ವಹಿಸಲಿವೆ ಎಂದು ವಾಣಿಜ್ಯ ತೆರಿಗೆಗಳ ಇಲಾಖೆಯ ಆಯುಕ್ತರಾದ ವಿಪುಲ್ ಬನ್ಸಾಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.