ಬೆಂಗಳೂರು,(www.thenewzmirror.com) ;
ಬಿಬಿಎಂಪಿ ಇತಿಹಾಸದಲ್ಲೇ ಇಂಥದೊಂದು ಸಾಧನೆ ಮಾಡಿದ ಖ್ಯಾತಿಗೆ ಒಳಗಾಗಿದೆ. ಕೇವಲ ನಾಲ್ಕೇ ತಿಂಗಳಲ್ಲಿ 3200 ಕೋಟಿ ತೆರಿಗೆ ಸಂಗ್ರಹ ಮಾಡಿದ ದಾಖಲೆ ಬರೆಯುವ ಮೂಲಕ ಬಿಬಿಎಂಪಿ ಮಹಾನ್ ಸಾಧನೆ ಮಾಡಿದೆ.
ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರ ನಿರ್ದೇಶನದ ಮೇರೆಗೆ ಕಂದಾಯ ವಿಭಾಗದ ಅಧಿಕಾರಿಗಳು 2024 ರ ಏಪ್ರಿಲ್ ನಿಂದ ಜುಲೈ 31 ರ ವರೆಗೆ 3200 ಕೋಟಿ ತೆರಿಗೆ ಸಂಗ್ರಹ ಮಾಡಿದೆ. ಕಳೆದ ವರ್ಷ ಈ ಅವಧಿಯಲ್ಲಿ ಕೇವಲ 2500 ಕೋಟಿ ತೆರಿಗೆ ಸಂಗ್ರಹ ಮಾಡಿತ್ತು.

ಬಿಬಿಎಂಪಿ ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಒನ್ ಟೈಂ ಸೆಟ್ಲಮೆಂಟ್ ಪಾಲಿಸಿನೂ ವರ್ಕೌಟ್ ಆಗಿದೆ ಅಂತ ಆರ್ಥಿಕ ತಜ್ಞರು ಅಭಿಪ್ರಾಯ ಪಡ್ತಿದ್ದಾರೆ. ಪಾಲಿಕರ ವ್ಯಾಪ್ತಿಯಲ್ಲಿರೋ 3 ಲಕ್ಷ ಆಸ್ತಿ ಪೈಕಿ 1 ಲಕ್ಷದ 16 ಸಾವಿರ ಮಂದಿ ಮಾತ್ರ ತೆರಿಗೆ ಪಾವತಿಸಿದ್ದಾರೆ.
ಯಾವ್ಯಾವ ವಲಯದಲ್ಲಿ ಎಷ್ಟೆಷ್ಟು ತೆರಿಗೆ ಸಂಗ್ರಹ.?
ಬೊಮನಹಳ್ಳಿ ವಲಯ 316.10 ಕೋಟಿ
ದಾಸರಹಳ್ಳಿ ವಲಯ 96.21 ಕೋಟಿ
ಪೂರ್ವ ವಲಯ 544.46 ಕೋಟಿ
ಮಹದೇವಪುರ ವಲಯ 808.40 ಕೋಟಿ
ರಾಜರಾಜೇಶ್ವರಿನಗರ ವಲಯ 212.42 ಕೋಟಿ
ದಕ್ಷಿಣ ವಲಯ 459.01 ಕೋಟಿ
ಪಶ್ಚಿಮ ವಲಯ 337.82 ಕೋಟಿ
ಯಲಹಂಕ ವಲಯ 291.40 ಕೋಟಿ