ಬೆಂಗಳೂರು, (www.thenewzmirror.com);
ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಗೆ 26 ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಾರೆ. ಸ್ಥಳೀಯರ ಕುಮ್ಮಕ್ಕಿನಿಂದಲೇ ಉಗ್ರರು ಈ ಕೃತ್ಯ ನಡೆಸಿರಬಹುದು ಎಂದು ಅಂದಾಜಿಸಲಾಗಿದೆ.
ಇದರ ಬೆನ್ನಲ್ಲೇ ಕೃತ್ಯ ನಡೆಸಿದವರು ಹಾಗೂ ಇದಕ್ಕೆ ಸಹಕರಿಸಿರುವವರಿಗೆ ಶೋಧ ಕಾರ್ಯ ಮಾಡ್ತಿರೋ ಭದ್ರತಾ ಪಡೆ, ಇದೀಗ ಸ್ಥಳೀಯ 14 ಮಂದಿ ಭಯೋತ್ಪಾದಕರ ಪಟ್ಟಿಯನ್ನ ಬಿಡುಗಡೆ ಮಾಡಿದೆ.
ಭಯೋತ್ಪಾದಕ ದಾಳಿಯ ನಂತರ ಗುಪ್ತಚರ ಸಂಸ್ಥೆ, ಕೇಂದ್ರಾಡಳಿತ ಪ್ರದೇಶದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ 14 ಸ್ಥಳೀಯ ಭಯೋತ್ಪಾದಕರ ಪಟ್ಟಿಯನ್ನು ಸಂಗ್ರಹಿ ರಿಲೀಸ್ ಮಾಡಿದೆ.
ಗುಪ್ತಚರ ಇಲಾಖೆ ಕೊಟ್ಟ ಮಾಹಿತಿ ಪ್ರಕಾರ 20 ರಿಂದ 40 ವರ್ಷ ವಯಸ್ಸಿನ ಸ್ಥಳೀಯ ಉಗ್ರರು, ಪಾಕಿಸ್ತಾನದ ವಿದೇಶಿ ಭಯೋತ್ಪಾದಕರಿಗೆ ಲಾಜಿಸ್ಟಿಕಲ್ ಮತ್ತು ನೆಲಮಟ್ಟದ ಬೆಂಬಲ ನೀಡುತ್ತಿದ್ದರು ಎಂದು ತಿಳಿದುಬಂದಿದೆ.
ಹಿಜ್ಬುಲ್ ಮುಜಾಹಿದ್ದೀನ್, ಲಷ್ಕರ್-ಎ-ತೈಬಾ, ಮತ್ತು ಜೈಶ್-ಎ-ಮೊಹಮ್ಮದ್ ಸಂಘಟನೆ ಜತೆಗೆ ಸಂಬಂಧ ಹೊಂದಿದ್ದ ಆಧಾರದ ಮೇಲೆ 14 ಮಂದಿ ಸ್ಥಳೀಯ ಭಯೋತ್ಪಾದಕರ ಪಟ್ಟಿ ರಿಲೀಸ್ ಮಾಡಿದೆ.
14 ಸ್ಥಳೀಯ ಭಯೋತ್ಪಾದಕರ ಪಟ್ಟಿ ಇಲ್ಲಿದೆ
ಆದಿಲ್ ರೆಹಮಾನ್ ಡೆಂಟೂ
ಆಸಿಫ್ ಅಹ್ಮದ್ ಶೇಖ್
ಅಹ್ಸಾನ್ ಅಹ್ಮದ್ ಶೇಖ್
ಹರಿಸ್ ನಜೀರ್
ಆಮಿರ್ ನಜೀರ್ ವಾನಿ
ಯಾವರ್ ಅಹ್ಮದ್ ಭಟ್
ಆಸಿಫ್ ಅಹ್ಮದ್ ಖಾಂಡೇ
ನಾಸೀರ್ ಅಹ್ಮದ್ ವಾನಿ
ಶಾಹಿದ್ ಅಹ್ಮದ್ ಕುಟೇ
ಆಮಿರ್ ಅಹ್ಮದ್ ದಾರ್
ಅದ್ನಾನ್ ಸಫಿ ದಾರ್
ಜುಬೈರ್ ಅಹ್ಮದ್ ವಾನಿ
ಹರೂನ್ ರಶೀದ್ ಗನೈ
ಜಾಕಿರ್ ಅಹ್ಮದ್ ಗನಿ