ಹೆಚ್ ಎ ಎಲ್ ಇದೇ ಮೊದಲ ಬಾರಿಗೆ 2400 ಕೋಟಿ ರೂ ಬೃಹತ್ ಒಪ್ಪಂದಕ್ಕೆ BEL ಜತೆ ಒಪ್ಪಂದ ಮಾಡಿಕೊಂಡಿದೆ. ಇದು ಭಾರತೀಯ ಕಂಪನಿಯಲ್ಲಿ ಇದುವರೆಗೆ ಮಾಡಲಾದ ಅತಿದೊಡ್ಡ ಆರ್ಡರ್ ಅಂತ HAL ಹೇಳಿಕೊಂಡಿದೆ.
ಸ್ಥಳೀಯೀಕರಣ ಉತ್ತೇಜಿಸೋ ನಿಟ್ಟಿನಲ್ಲಿ ಈ ಯೋಜನೆ ಮಹತ್ವ ಪಡೆದುಕೊಂಡಿದೆ. LCA ತೇಜಸ್ Mk1A ಗಾಗಿ 20 ವಿಧದ ಸಿಸ್ಟಮ್‌ಗಳ ಅಭಿವೃದ್ಧಿ ಮತ್ತು ಪೂರೈಕೆಗಾಗಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನೊಂದಿಗೆ HAL ಒಪ್ಪಂದಕ್ಕೆ ಸಹಿ ಹಾಕಿದೆ.
2023 ರಿಂದ 2028 ರವರೆಗಿನ ಐದು ವರ್ಷಗಳ ಒಪ್ಪಂದ ಇದಾಗಿದ್ದು, ಸುಮಾರು 2400 ಕೋಟಿ ರೂಪಾಯಿಗಳ ಮೌಲ್ಯದ್ದಾಗಿದೆ. ನಿರ್ಣಾಯಕ ಏವಿಯಾನಿಕ್ಸ್ ಲೈನ್ ರಿಪ್ಲೇಸಬಲ್ ಯುನಿಟ್‌ಗಳು (LRUs), ಫ್ಲೈಟ್ ಕಂಟ್ರೋಲ್ ಕಂಪ್ಯೂಟರ್‌ಗಳು ಮತ್ತು ರಾತ್ರಿ ಹಾರುವ LRU ಗಳನ್ನು ಪೂರೈಸುವ ಒಪ್ಪಂದವೆಂದು HAL ಹೇಳಿದೆ. ಅಷ್ಟೇ ಅಲ್ದೇ ಆತ್ಮನಿರ್ಭರ್ ಭಾರತ್ ಅಭಿಯಾನ ಉತ್ತೇಜಿಸುವ ನಿಟ್ಟಿನಲ್ಲಿ ಇದು ಪೂರಕ ಎಂದು ಹೇಳಲಾಗ್ತಿದೆ.
ತೇಜಸ್ Mk1A ಗಾಗಿ 20 ವಿಧದ ನಿರ್ಣಾಯಕ ಏವಿಯಾನಿಕ್ಸ್ LRU ಗಳ ಅಭಿವೃದ್ಧಿ ಮತ್ತು ಪೂರೈಕೆಗಾಗಿ ಪ್ರಸ್ತುತ ಆದೇಶ ಮೇಕ್ ಇನ್ ಇಂಡಿಯಾ ಚಟುವಟಿಕೆಗಾಗಿ ಶಾಟ್-ಇನ್-ದಿ-ಆರ್ಮ್ ಆಗಿದ್ದು, ಎಚ್‌ಎಎಲ್ ಸ್ವದೇಶಿ ಉತ್ಪನ್ನಗಳಿಗೆ ಬದ್ಧವಾಗಿದೆ ಎಂದು ಎಚ್‌ಎಎಲ್ ಸಿಎಂಡಿ ಆರ್ ಮಾಧವನ್ ತಿಳಿಸಿದ್ದಾರೆ.
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನ ಎರಡು ವಿಭಾಗಗಳು ಬೆಂಗಳೂರು ಮತ್ತು ಪಂಚಕುಲ (ಹರಿಯಾಣ) ನಲ್ಲಿ ನಿರ್ಮಾಣವಾಗಲಿವೆ. 83 ತೇಜಸ್ Mk1A ಆದೇಶದ ಅಡಿಯಲ್ಲಿ IAF ಗೆ 2023-24 ರಿಂದ ಪೂರೈಕೆಯಾಗಲಿವೆ.