ಧಾರವಾಡ ಸೇರಿ ಐದು ಐಐಟಿಗಳ ಶೈಕ್ಷಣಿಕ ಮತ್ತು ಮೂಲಸೌಕರ್ಯ ಸಾಮರ್ಥ್ಯ ವಿಸ್ತರಣೆಗೆ ಸಂಪುಟದ ಅನುಮೋದನೆ

RELATED POSTS

ನವದೆಹಲಿ(www.thenewzmirror.com):ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಐದು ಹೊಸ ಐಐಟಿಗಳ ಶೈಕ್ಷಣಿಕ ಮತ್ತು ಮೂಲಸೌಕರ್ಯ ಸಾಮರ್ಥ್ಯ ವಿಸ್ತರಣೆಗೆ (ಹಂತ-‘ಬಿ’ನಿರ್ಮಾಣ) ಅನುಮೋದನೆ ನೀಡಿದೆ. ಈ ಐದು ಹೊಸ ಐಐಟಿಗಳನ್ನು ಆಂಧ್ರಪ್ರದೇಶ (ಐಐಟಿ ತಿರುಪತಿ), ಕೇರಳ (ಐಐಟಿ ಪಾಲಕ್ಕಾಡ್), ಛತ್ತೀಸಗಢ (ಐಐಟಿ ಭಿಲಾಯಿ), ಜಮ್ಮು ಮತ್ತು ಕಾಶ್ಮೀರ (ಐಐಟಿ ಜಮ್ಮು) ಮತ್ತು ಕರ್ನಾಟಕ (ಐಐಟಿ ಧಾರವಾಡ) ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ಥಾಪಿಸಲಾಗಿದೆ.

2025-26 ರಿಂದ 2028-29 ರವರೆಗಿನ ನಾಲ್ಕು ವರ್ಷಗಳ ಅವಧಿಯಲ್ಲಿ ಇದಕ್ಕಾಗಿ ಒಟ್ಟು 11,828.79 ಕೋಟಿ ರೂ. ವೆಚ್ಚ ತಗುಲಲಿದೆ.ಈ ಐಐಟಿಗಳಲ್ಲಿ 130 ಬೋಧಕರ ಹುದ್ದೆಗಳನ್ನು (ಪ್ರಾಧ್ಯಾಪಕರ ಮಟ್ಟದಲ್ಲಿ ಅಂದರೆ ಹಂತ 14 ಮತ್ತು ಅದಕ್ಕಿಂತ ಹೆಚ್ಚಿನ) ಸೃಷ್ಟಿಸಲು ಸಂಪುಟ ಅನುಮೋದನೆ ನೀಡಿದೆ.

ಉದ್ಯಮ-ಶೈಕ್ಷಣಿಕ ಸಂಪರ್ಕವನ್ನು ಬಲಪಡಿಸಲು ಐದು ಹೊಸ ಅತ್ಯಾಧುನಿಕ ಸಂಶೋಧನಾ ಪಾರ್ಕ್ ಗಳನ್ನು ಸಹ ಅಭಿವೃದ್ಧಿಪಡಿಸಲಾಗುವುದು.

ಅನುಷ್ಠಾನ ತಂತ್ರ ಮತ್ತು ಗುರಿಗಳು:

ಮುಂದಿನ ನಾಲ್ಕು ವರ್ಷಗಳಲ್ಲಿ ಈ ಐಐಟಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು 6500 ಕ್ಕಿಂತ ಹೆಚ್ಚು ಏರಿಸಲಾಗುವುದು, ಇದರೊಂದಿಗೆ ಪದವಿ (ಯುಜಿ), ಸ್ನಾತಕೋತ್ತರ (ಪಿಜಿ) ಮತ್ತು ಪಿ ಎಚ್ ಡಿ ಕೋರ್ಸ್ ಗಳಾದ್ಯಂತ ಮೊದಲ ವರ್ಷದಲ್ಲಿ 1364 ವಿದ್ಯಾರ್ಥಿಗಳು, ಎರಡನೇ ವರ್ಷದಲ್ಲಿ 1738 ವಿದ್ಯಾರ್ಥಿಗಳು, ಮೂರನೇ ವರ್ಷದಲ್ಲಿ 1767 ವಿದ್ಯಾರ್ಥಿಗಳು ಮತ್ತು ನಾಲ್ಕನೇ ವರ್ಷದಲ್ಲಿ 1707 ವಿದ್ಯಾರ್ಥಿಗಳು ಹೆಚ್ಚಾಗಲಿದ್ದಾರೆ.

ಫಲಾನುಭವಿಗಳು:

ನಿರ್ಮಾಣ ಪೂರ್ಣಗೊಂಡ ನಂತರ, ಈ ಐದು ಐಐಟಿಗಳು ಪ್ರಸ್ತುತ ಇರುವ 7,111 ವಿದ್ಯಾರ್ಥಿಗಳ ಸಂಖ್ಯೆಗೆ ಬದಲಾಗಿ 13,687 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಿವೆ, ಅಂದರೆ 6,576 ವಿದ್ಯಾರ್ಥಿಗಳ ಹೆಚ್ಚಳವಾಗುತ್ತದೆ. ಒಟ್ಟು ಸೀಟುಗಳ ಸಂಖ್ಯೆಯಲ್ಲಿನ ಈ ಹೆಚ್ಚಳದೊಂದಿಗೆ, ಹೆಚ್ಚುವರಿಯಾಗಿ 6,500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ದೇಶದ ಅತ್ಯಂತ ಪ್ರತಿಷ್ಠಿತ ಮತ್ತು ಬೇಡಿಕೆಯ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುವ ತಮ್ಮ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದು ಕೌಶಲ್ಯಪೂರ್ಣ ಕಾರ್ಯಪಡೆಯನ್ನು ಸೃಷ್ಟಿಸುವ ಮೂಲಕ, ನಾವೀನ್ಯತೆಯನ್ನು ಹೆಚ್ಚಿಸುವ ಮೂಲಕ ಮತ್ತು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ ಮೂಲಕ ರಾಷ್ಟ್ರ ನಿರ್ಮಾಣವನ್ನು ಉತ್ತೇಜಿಸುತ್ತದೆ. ಇದು ಸಾಮಾಜಿಕ ಚಲನಶೀಲತೆಯನ್ನು ಹೆಚ್ಚಿಸುತ್ತದೆ, ಶೈಕ್ಷಣಿಕ ಅಸಮಾನತೆಯನ್ನು ಕಡಿಮೆ ಮಾಡುತ್ತದೆ ಮತ್ತು ಭಾರತದ ಜಾಗತಿಕ ಸ್ಥಾನವನ್ನು ಬಲಪಡಿಸುತ್ತದೆ.

ಉದ್ಯೋಗ ಸೃಷ್ಟಿ:

ಹೆಚ್ಚಿದ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಸೌಲಭ್ಯಗಳನ್ನು ನಿರ್ವಹಿಸಲು ಬೋಧಕರು, ಆಡಳಿತ ಸಿಬ್ಬಂದಿ, ಸಂಶೋಧಕರು ಮತ್ತು ಸಹಾಯಕ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಮೂಲಕ ನೇರ ಉದ್ಯೋಗ ಸೃಷ್ಟಿಯಾಗುತ್ತದೆ. ಅಲ್ಲದೆ, ಐಐಟಿ ಕ್ಯಾಂಪಸ್ ಗಳ ವಿಸ್ತರಣೆಯು ವಸತಿ, ಸಾರಿಗೆ ಮತ್ತು ಸೇವೆಗಳಿಗೆ ಬೇಡಿಕೆಯನ್ನು ಸೃಷ್ಟಿಸುವ ಮೂಲಕ ಸ್ಥಳೀಯ ಆರ್ಥಿಕತೆಯನ್ನು ಉತ್ತೇಜಿಸುತ್ತದೆ. ಐಐಟಿಗಳಿಂದ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರ ಸಂಖ್ಯೆ ಹೆಚ್ಚಾಗುವುದರಿಂದ ನಾವೀನ್ಯತೆ ಮತ್ತು ನವೋದ್ಯಮ ಪೂರಕ ವ್ಯವಸ್ಥೆಗಳು ಮತ್ತಷ್ಟು ಉತ್ತೇಜನಗೊಳ್ಳುತ್ತವೆ, ವೈವಿಧ್ಯಮಯ ವಲಯಗಳಲ್ಲಿ ಉದ್ಯೋಗ ಸೃಷ್ಟಿಗೆ ಕೊಡುಗೆ ನೀಡುತ್ತವೆ.

ರಾಜ್ಯಗಳು ಮತ್ತು ಜಿಲ್ಲೆಗಳು:

ಈ ಐದು ಐಐಟಿಗಳು ಆಂಧ್ರಪ್ರದೇಶ (ಐಐಟಿ ತಿರುಪತಿ), ಕೇರಳ (ಐಐಟಿ ಪಾಲಕ್ಕಾಡ್), ಛತ್ತೀಸಗಢ (ಐಐಟಿ ಭಿಲಾಯಿ), ಜಮ್ಮು ಮತ್ತು ಕಾಶ್ಮೀರ (ಐಐಟಿ ಜಮ್ಮು) ಮತ್ತು ಕರ್ನಾಟಕ (ಐಐಟಿ ಧಾರವಾಡ) ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿವೆ. ಆದಾಗ್ಯೂ, ಐಐಟಿಗಳಿಗೆ ಪ್ರವೇಶವು ದೇಶಾದ್ಯಂತ ನಡೆಯುವುದರಿಂದ ಈ ವಿಸ್ತರಣೆಯು ದೇಶಾದ್ಯಂತ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರಯೋಜನವನ್ನು ನೀಡುತ್ತದೆ.

2025-26ರ ಬಜೆಟ್ ಘೋಷಣೆ:

‘ಕಳೆದ 10 ವರ್ಷಗಳಲ್ಲಿ 23 ಐಐಟಿಗಳಲ್ಲಿನ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 65,000 ದಿಂದ 1.35 ಲಕ್ಷಕ್ಕೆ 100 ಪ್ರತಿಶತ ಹೆಚ್ಚಾಗಿದೆ. 2014ರ ನಂತರ ಪ್ರಾರಂಭವಾದ ಐದು ಐಐಟಿಗಳಲ್ಲಿ 6,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಸುಲಭಗೊಳಿಸಲು ಹೆಚ್ಚುವರಿ ಮೂಲಸೌಕರ್ಯಗಳನ್ನು ನಿರ್ಮಿಸಲಾಗುವುದು.’

ಹಿನ್ನೆಲೆ:

ಈ ಐದು ಹೊಸ ಐಐಟಿಗಳನ್ನು ಆಂಧ್ರಪ್ರದೇಶ (ಐಐಟಿ ತಿರುಪತಿ), ಕೇರಳ (ಐಐಟಿ ಪಾಲಕ್ಕಾಡ್), ಛತ್ತೀಸಗಢ (ಐಐಟಿ ಭಿಲಾಯಿ), ಜಮ್ಮು ಮತ್ತು ಕಾಶ್ಮೀರ (ಐಐಟಿ ಜಮ್ಮು) ಮತ್ತು ಕರ್ನಾಟಕ (ಐಐಟಿ ಧಾರವಾಡ) ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ಥಾಪಿಸಲಾಗಿದೆ. ಪಾಲಕ್ಕಾಡ್ ಮತ್ತು ತಿರುಪತಿಯಲ್ಲಿರುವ ಐಐಟಿಗಳ ಶೈಕ್ಷಣಿಕ ಅವಧಿಯು 2015-16 ರಲ್ಲಿ ಪ್ರಾರಂಭವಾಯಿತು ಮತ್ತು ಉಳಿದ ಮೂರು ಐಐಟಿಗಳು 2016-17ರಲ್ಲಿ ತಾತ್ಕಾಲಿಕ ಕ್ಯಾಂಪಸ್ ಗಳಲ್ಲಿ ಪ್ರಾರಂಭವಾದವು. ಈ ಐಐಟಿಗಳು ಈಗ ತಮ್ಮ ಶಾಶ್ವತ ಕ್ಯಾಂಪಸ್ ಗಳಿಂದ ಕಾರ್ಯನಿರ್ವಹಿಸುತ್ತಿವೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist