ಬೆಂಗಳೂರು(www.thenewzmirror.com):ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕ್ರೀಡಾ ಕೋಟಾದಡಿ ಸೀಟು ಪಡೆಯಲು ಇಚ್ಛಿಸುವವರ ಮೂಲ ದಾಖಲೆಗಳ ಪರಿಶೀಲನೆ ಇದೇ 16ರಿಂದ 20ರವರೆಗೆ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಯಾವ್ಯಾವ ಕ್ರೀಡೆಗಳಲ್ಲಿ ಭಾಗವಹಿಸಿದವರು ಅರ್ಹರು ಎಂಬುದರ ಪೂರ್ಣ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ನೀಡಲಾಗಿದೆ. ಅರ್ಹರು ವೆಬ್‌ಸೈಟ್‌ನಲ್ಲಿ ಬಿಟ್ಟಿರುವ ಲಿಂಕ್‌ಗೆ ಹೋಗಿ ದಿನಾಂಕ ಮತ್ತು ಸಮಯವನ್ನು ಮುಂಗಡವಾಗಿ ಕಾಯ್ದಿರಿಸಿಕೊಂಡು ಪರಿಶೀಲನೆಗೆ ಕೆಇಎ ಕಚೇರಿಗೆ ಬರಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕ್ರೀಡಾ ಪ್ರವರ್ಗದಲ್ಲಿ ವಿದ್ಯಾರ್ಥಿಗಳ ಅರ್ಹತೆಯನ್ನು ನಿರ್ಣಯಿಸುವುದಕ್ಕೆ ಸಂಬಂಧಿಸಿದಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳ ತೀರ್ಮಾನವೇ ಅಂತಿಮವಾಗಿರುತ್ತದೆ. ಈ ವಿಷಯದಲ್ಲಿ ಪ್ರಾಧಿಕಾರದ ಪಾತ್ರ ಏನೂ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ದಾಖಲೆ ಪರಿಶೀಲನೆ ದಿನಾಂಕ ವಿಸ್ತರಣೆ:
ಎ ಮತ್ತು ವೈ ಕ್ಲಾಸ್ ಹೊರತುಪಡಿಸಿ, ಉಳಿದ ಕ್ಲಾಸ್‌ಗಳ ದಾಖಲೆಗಳ ಪರಿಶೀಲನೆಯನ್ನು ಇದೇ 20ರವರೆಗೆ ವಿಸ್ತರಿಸಲಾಗಿದೆ. ಮೇ 15ಕ್ಕೆ ಕೊನೆ ದಿನವಾಗಿತ್ತು. ಮೇ 20ರೊಳಗೆ ಸಮಯ ನಿಗದಿ ಮಾಡಿಕೊಂಡು ಬಂದು ದಾಖಲೆ ಪರಿಶೀಲನೆ ಮಾಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
*ಹೊರಗಿನವರು ಅಂಕ ದಾಖಲಿಸಬೇಕು*
ಕರ್ನಾಟಕದ ಹೊರಗಿನ ರಾಜ್ಯಗಳಲ್ಲಿ ವ್ಯಾಸಂಗ ಮಾಡಿರುವ ಆಯಾ ರಾಜ್ಯ ಮಂಡಳಿ, ಸಿಬಿಎಸ್‌ಸಿ, ಸಿಐಎಸ್‌ಸಿಇ ಬೋರ್ಡ್‌ಗಳ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಲ್ಲಿ, ಅಂತಹವರು ಮಾತ್ರ ದ್ವಿತೀಯ ಪಿಯುಸಿಯಲ್ಲಿ ಪಡೆದ ಅಂಕಗಳನ್ನು ಲಿಂಕ್ ನಲ್ಲಿ ನಮೂದಿಸಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕದ ಪಿಯುಸಿ ಮಕ್ಕಳು ಸೇರಿದಂತೆ ರಾಜ್ಯದಲ್ಲಿ ಓದಿರುವ ಸಿಬಿಎಸ್‌ಸಿ, ಸಿಐಎಸ್‌ಸಿಇ ಬೋರ್ಡ್‌ಗಳ ವಿದ್ಯಾರ್ಥಿಗಳು ಲಿಂಕ್‌ನಲ್ಲಿ ಅಂಕಗಳನ್ನು ದಾಖಲಿಸುವ ಅಗತ್ಯ ಇರುವುದಿಲ್ಲ. ಅಂತಹವರು ಕೇವಲ ಪರೀಕ್ಷೆಯ ನೋಂದಣಿ ಸಂಖ್ಯೆಯನ್ನು ತಪ್ಪಿಲ್ಲದೆ ನಮೂದಿಸಬೇಕು. ಹಿಂದಿನ ವರ್ಷಗಳಲ್ಲಿ ಉತ್ತೀರ್ಣರಾಗಿದ್ದರೂ ಅಂತಹವರು ಕೂಡ ನೋಂದಣಿ ಸಂಖ್ಯೆ ನಮೂದಿಸಿದರೆ ಸಾಕು. ಒಂದು ವೇಳೆ ನೋಂದಣಿ ಸಂಖ್ಯೆ ತಪ್ಪಾಗಿದ್ದರೂ ಈಗ ಅದನ್ನು ಸರಿಪಡಿಸಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.
*ಡಿಸಿಇಟಿ/ಪಿಜಿಸಿಇಟಿ ದಿನಾಂಕ ವಿಸ್ತರಣೆ:*
ಪಿಜಿಸಿಇಟಿ ಮತ್ತು ಡಿಸಿಇಟಿ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಿರುವವರಿಗೆ ಶುಲ್ಕ ಕಟ್ಟಲು ಮೇ 15ರವರೆಗೆ ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
*ಆರ್ಕಿಟೆಕ್ಚರ್ ಕೋರ್ಸ್:*
ಸಿಇಟಿಯಲ್ಲಿ ನೋಂದಣಿ ಮಾಡಿ ಅರ್ಜಿ ಸಲ್ಲಿಸಿರುವ ಹಾಗೂ ನಾಟಾ-25 ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ‍್ಯರ್ಥಿಗಳು ಆರ್ಕಿಟೆಕ್ಚರ್ ಕೋರ್ಸ್‌ಗಳ ಪ್ರವೇಶಾತಿಗಾಗಿ ನಾಟಾ ಅಂಕಗಳನ್ನು ದಾಖಲಿಸಲು ಸದ್ಯದಲ್ಲೇ ಲಿಂಕ್ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.