ಬೆಂಗಳೂರು(www.thenewzmirror.com):ಕೆ ಎಸ್ ಆರ್ ಟಿ ಸಿಗೆ ಹೊಸದಾಗಿ ನೇಮಕಗೊಂಡ ಚಾಲಕ-ಕಂ- ನಿರ್ವಾಹಕ ಅಭ್ಯರ್ಥಿಗಳಿಗೆ ಸ್ಥಳ ನಿಯೋಜನೆಗೆ ಗಣಕೀಕೃತ ಕೌನ್ಸಿಲಿಂಗ್ ನಿಗದಿಪಡಿಸಿದ್ದು, ಗಣಕೀಕೃತ ವ್ಯವಸ್ಥೆಯ ಮೂಲಕ ನೇರ ನಿಯೋಜನೆ ನಡೆಯುತ್ತಿರುವುದರಿಂದ ಅಭ್ಯರ್ಥಿಗಳು ಯಾವುದೇ ಆಮಿಷ ಅವ್ಯವಹಾರದಲ್ಲಿ ತೊಡಗಬಾರದೆಂದು ಕೆಎಸ್ಆರ್ಟಿಸಿ ತಿಳಿಸಿದೆ.
ಜಾಹೀರಾತು ಸಂ. 1/2020 ದಿನಾಂಕ : 14-02-2020 ರಂತೆ ಚಾಲಕ-ಕಂ-ನಿರ್ವಾಹಕ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ , ಆಯ್ಕೆ ಪಟ್ಟಿಯ ಜ್ಯೇಷ್ಠತೆಯನ್ವಯ ಗಣಕೀಕೃತ ಕೌನ್ಸೆಲಿಂಗ್ ಮೂಲಕ ನೇರವಾಗಿ ವಿಭಾಗ/ಘಟಕಗಳಿಗೆ ನಿಯೋಜನೆ ಮಾಡಲಾಗುತ್ತದೆ, ಜೂನ್ 16 ರಂದು ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕ್ರಮ ಸಂಖ್ಯೆ 1 – 325,ಮಧ್ಯಾಹ್ನ 2 ಗಂಟೆಯಿಂದ ಕ್ರಮಸಂಖ್ಯೆ326-650 ರವರೆಗೆ ಕೌನ್ಸಿಲಿಂಗ್ ಮಾಡಲಾಗುತ್ತದೆ ಎಂದು ಕೆಎಸ್ಆರ್ಟಿಸಿ ಪ್ರಕಟಣೆ ಮೂಲಕ ತಿಳಿಸಿದೆ.
ಜೂನ್ 18 ರಂದ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ 651-1050,ಮಧ್ಯಾಹ್ನ 1.30 ರಿಂದ
ಕ್ರಮ ಸಂಖ್ಯೆ 1051- 1350 ಹಾಗು 19 ರಂದು 8 ಗಂಟೆಯಿಂದ
ಮಧ್ಯಾಹ್ನ 1ಗಂಟೆಯವರೆಗೆ ಕ್ರಮ ಸಂಖ್ಯೆ 1351-1700 , ಮಧ್ಯಾಹ್ನ 1.30 ರಿಂದ ಕ್ರಮ ಸಂಖ್ಯೆ 1701- 2000ರವರೆಗೆ ಕೌನ್ಸಿಲಿಂಗ್ ನಡೆಸಲಾಗುತ್ತದೆ ಎಂದು ತಿಳಿಸಿದೆ.
ಅಭ್ಯರ್ಥಿಗಳು ನಿಗಮದ, ಕೇಂದ್ರಕಛೇರಿ, ಶಾಂತಿನಗರ, ಬೆಂಗಳೂರು ಇಲ್ಲಿ ಹಾಜರಾಗಬೇಕು, ಹೆಚ್ಚಿನ ಮಾಹಿತಿಗಾಗಿ ನಿಗಮದ ಅಧಿಕೃತ ವೆಬ್-ಸೈಟ್ ksrtcjobs.karnataka.gov.in ವೀಕ್ಷಿಸಬಹುದಾಗಿದೆ. ಸದರಿ ನೇಮಕಾತಿ ಮತ್ತು ಸ್ಥಳ ನಿಯೋಜನೆಯು ಸಂಪೂರ್ಣ ಪಾರದರ್ಶಕವಾಗಿ ನಡೆಯುತ್ತಿದ್ದು, ಮಾನವ ಹಸ್ತಕ್ಷೇಪರಹಿತವಾಗಿದ್ದು, ಗಣಕೀಕೃತ ವ್ಯವಸ್ಥೆಯ ಮೂಲಕ ನೇರ ನಿಯೋಜನೆ ನಡೆಯುತ್ತಿರುವುದರಿಂದ ಅಭ್ಯರ್ಥಿಗಳು ಯಾವುದೇ ಆಮಿಷ ಅವ್ಯವಹಾರದಲ್ಲಿ ತೊಡಗಬಾರದೆಂದು ತಿಳಿಸಲಾಗಿದೆ.