ದೈಹಿಕ ಶಿಕ್ಷಕರನ್ನು ಸಹ  ಶಿಕ್ಷಕರೆಂದು ಪರಿಗಣಿಸುವ ಕುರಿತು ಚರ್ಚಿಸಿ ತೀರ್ಮಾನ: ಸಚಿವ ಮಧು ಬಂಗಾರಪ್ಪ

RELATED POSTS

ಬೆಂಗಳೂರು(thenewzmirror.com):ದೈಹಿಕ ಶಿಕ್ಷಕರನ್ನು ಸಹ ಶಿಕ್ಷಕರೆಂದು ಪರಿಗಣಿಸುವ ಬಗ್ಗೆ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಎಸ್. ಮಧು ಬಂಗಾರಪ್ಪ ಅವರು ತಿಳಿಸಿದರು.

ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ವಿಧಾನ ಪರಿಷತ್ ಸದಸ್ಯ ರಾಮೋಜಿಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ವೃಂದ ಮತ್ತು ನೇವiಕಾತಿ ನಿಯಮಗಳು ಬೇರೆ ಬೇರೆ ಆಗಿರುತ್ತದೆ. ಶಾಲಾ ಶಿಕ್ಷಣ ಇಲಾಖೆಯ ಪ್ರಸ್ತುತ ಜಾರಿಯಲ್ಲಿರುವ ವೃಂದ ಮತ್ತು ನೇಮಕಾತಿ ನಿಯಮಗಳಂತೆ ಗ್ರೂಪ್ ಬಿ ಮತ್ತು ಮುಖ್ಯ ಶಿಕ್ಷಕರು / ಉಪ ಪ್ರಾಂಶುಪಾಲರು ವೃಂದದ ಹುದ್ದೆಗೆ ಬಡ್ತಿಗೆ, ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ವೃಂದವು ಪೋಷಕ ವೃಂದವಾಗಿರುತ್ತದೆ. ಮುಖ್ಯ ಶಿಕ್ಷಕರ ವೃಂದಕ್ಕೆ, ವೃಂದ ಮತ್ತು ನೇಮಕಾತಿ ನಿಯಮದಂತೆ ನಿಗದಿಪಡಿಸಿರುವ ವಿದ್ಯಾರ್ಹತೆ ಎಂದರೆ ಪದವಿ ಜೊತೆಗೆ ಶೈಕ್ಷಣಿಕ ಆಡಳಿತಕ್ಕೆ ಅಗತ್ಯ ಇರುವ ಬಿ.ಎಡ್ ಪದವಿ. ದೈಹಿಕ ಶಿಕ್ಷಣ ಶಿಕ್ಷಕರು ಬಿ.ಎಡ್. ಪದವಿಯನ್ನು ಹೊಂದಿರುವುದಿಲ್ಲ.

ಮುಖ್ಯ ಶಿಕ್ಷಕರು ಬೋಧನೆಯಲ್ಲಿ ಪ್ರಾವೀಣ್ಯತೆ ಹಾಗೂ ಅನುಭವವನ್ನು ಹೊಂದಿರುತ್ತಾರೆ. ಸಹ ಶಿಕ್ಷಕರ ಅನುಪಸ್ಥಿತಿಯಲ್ಲಿ ವಿಷಯ ಬೋಧನೆಯನ್ನು ಮಾಡುತ್ತಾರೆ. ಆದರೆ ದೈಹಿಕ ಶಿಕ್ಷಕರಿಗೆ ವಿಷಯ ಬೋಧನೆ ತರಬೇತಿ ಆಗಿಲ್ಲದೆ ಇರುವುದರಿಂದ ಸಹ ಶಿಕ್ಷಕರ ಅನುಪಸ್ಥಿತಿಯಲ್ಲಿ ವಿಷಯ ಬೋಧನೆÉಯನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಮುಖ್ಯ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು / ಹಿರಿಯ ಉಪನ್ಯಾಸಕರು  ನಿರ್ದೇಶಕರು ಮಧ್ಯಾಹ್ನ ಯೋಜನೆ ಹಾಗೂ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಹುದ್ದೆಗಳಿಗೆ ಭರ್ತಿ ಹೊಂದಲು ಅವಕಾಶವಿರುತ್ತದೆ. ಈ ಎಲ್ಲಾ ಹುದ್ದೆಗಳು ಶೈಕ್ಷಣಿಕವಾಗಿ ಶಾಲೆಗಳಲ್ಲಿ ವಿಷಯ ಬೋಧನೆ ಅನುಭವವನ್ನು ಹಾಗೂ ಶೈಕ್ಷಣಿಕ ಮಾರ್ಗದರ್ಶನ ನೀಡುವ ಅನುಭವವನ್ನು ಅಪೇಕ್ಷಿಸುತ್ತದೆ. ಆದರೆ ದೈಹಿಕ ಶಿಕ್ಷಕರಿಗೆ ವಿಷಯ ಬೋಧನೆಯ ತರಬೇತಿ ಇರುವುದಿಲ್ಲ. ಬದಲಾಗಿ ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಾತ್ರ ತರಬೇತಿಯನ್ನು ಪಡೆದಿರುತ್ತಾರೆ.

ದೈಹಿಕ ಶಿಕ್ಷಣದ ಶಿಕ್ಷಕರ ಜೇಷ್ಠತಾ ಪಟ್ಟಿಯನ್ನು ಪ್ರತ್ಯೇಕವಾಗಿ ನಿರ್ವಹಿಸಲಾಗುತ್ತಿದ್ದು, ಇವರ ಪ್ರಾವೀಣ್ಯತೆ ಹಾಗೂ ಅನುಭವ ಆಧಾರದ ಮೇಲೆ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರು, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ, ಸಹಾಯಕ ನಿರ್ದೇಶಕರು (ದೈಹಿಕ ಶಿಕ್ಷಣ) ಸಹ ನಿರ್ದೇಶಕರು (ದೈಹಿಕ ಶಿಕ್ಷಣ) ಹುದ್ದೆಗಳಿಗೆ ಮುಂಬಡ್ತಿ ಕಲ್ಪಿಸಲಾಗಿದೆ. ಶೈಕ್ಷಣಿಕ ಆಡಳಿತದ ಹಿತದೃಷ್ಠಿಯಿಂದ ಪ್ರಸ್ತುತ ವೃಂದ ಮತ್ತು ನೇಮಕಾತಿ ನಿಯಮದಂತೆ ಪದವಿ ಹಾಗೂ ಶಿಕ್ಷಣದಲ್ಲಿ ಪದವಿ ವಿದ್ಯಾರ್ಹತೆ ಪೋಷಕ ವೃಂದ ಎಂಬುದಾಗಿ ಗುರುತಿಸಿರುವ ವೃಂದದಿಂದ ಮುಖ್ಯ ಶಿಕ್ಷಕರ ವೃಂದಕ್ಕೆ ಬಡ್ತಿಗಳನ್ನು ಪರಿಗಣಿಸಲಾಗುತ್ತಿದೆ. ಅದಗ್ಯೂ ದೈಹಿಕ ಶಿಕ್ಷಕರಿಗೆ ಸಹ ಶಿಕ್ಷಕರ ಹುದ್ದೆಗೆ ಮುಂಬಡ್ತಿ ನೀಡುವ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿ, ಆದೇಶಗಳನ್ನು ಪರಿಶೀಲಿಸಿ ನಂತರ ಮಾನ್ಯ ಮುಖ್ಯ ಮಂತ್ರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಉನ್ನತ ಶಿಕ್ಷಣದ ಗುಣ ಮಟ್ಟ ಕಾಪಾಡುವುದು ಇಲಾಖೆಯ ಕರ್ತವ್ಯ:

ಉನ್ನತ ಶಿಕ್ಷಣದ ಗುಣ ಮಟ್ಟ ಕಾಪಾಡುವುದು ಇಲಾಖೆಯ ಬದ್ದತೆಯಾಗಿದೆ. ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಭೋದಕ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ತಿಳಿಸಿದರು.

ಇಂದು ವಿಧಾನ ಪರಿಷತ್ತಿನ ಕಲಾಪದ ವೇಳೆ ಸದಸ್ಯ ಎಸ್.ವಿ ಸಂಕನೂರ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು ನಿವೃತ್ತಿ, ನಿಧನ ಹಾಗೂ ಇತ್ಯಾದಿ ಕಾರಣಗಳಿಂದಾಗಿ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಬೋಧಕ 416, ಬೋಧಕೇತರ 849, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬೋಧಕ 234, ಬೋಧಕೇತರ 780, ಮೈಸೂರು ವಿಶ್ವವಿದ್ಯಾಲಯದಲ್ಲಿ ಬೋಧಕ 380, ಬೋಧಕೇತರ 368 ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಬೋಧಕ 171, ಬೋಧಕೇತರ 268 ಹುದ್ದೆಗಳು ಖಾಲಿ ಇವೆ. ಈ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ವಿಶ್ವವಿದ್ಯಾಲಯಗಳಿಂದ ಪ್ರಸ್ತಾವನೆಯನ್ನು ಸ್ವೀಕರಿಸಲಾಗಿದ್ದು, ಪ್ರಸ್ತಾವನೆಗಳು ಪರಿಶೀಲನೆಯಲ್ಲಿವೆ ಎಂದು ತಿಳಿಸಿದರು.

ವಿಶ್ವವಿದ್ಯಾಲಯಗಳಲ್ಲಿ ಸುಮಾರು 2800 ಬೋಧಕ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ಹಿಂದಿನಿಂದಲೂ ತುಂಬಿರುವುದಿಲ್ಲ. ಸರ್ಕಾರ ಈಗ ಈ ಹುದ್ದೆಗಳನ್ನು ತುಂಬಲು ಕ್ರಮ ವಹಿಸಿದೆ. ರಾಯಚೂರಿನಲ್ಲಿ 25 ಸಹಾಯಕ ಪ್ರಾಧ್ಯಾಪಕರುಗಳ ಹುದ್ದೆ ನೇಮಕಕ್ಕೆ ಕೆ.ಇ.ಎ ಯಿಂದ ಪರೀಕ್ಷೆ ಸಹ ನಡೆಸಲಾಗಿದೆ. ಎಲ್ಲಾ ಹುದ್ದೆಗಳನ್ನು ತರ್ಕಬದ್ಧವಾಗಿ ಮಾಡಿ ಆರ್ಥಿಕ ಇಲಾಖೆಯ ಅನುಮೋದನೆ ಪಡೆದುಕೊಂಡು ಅಗತ್ಯ ಕ್ರಮ ಜರುಗಿಸಲಾಗುವುದು.

ದೂರ ಶಿಕ್ಷಣ ಇದ್ದಾಗ ವಿಶ್ವವಿದ್ಯಾಲಯಗಳಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಢೀಕೃತವಾಗುತ್ತಿತ್ತು. ಕರ್ನಾಟಕ ವಿಶ್ವವಿದ್ಯಾಲಯ ಪ್ರಾರಂಭವಾದ ನಂತರ  ದೂರ ಶಿಕ್ಷಣ ನಿಂತು ಹೋಯಿತು. ಇದರಿಂದಾಗಿ ವಿಶ್ವವಿದ್ಯಾಲಯಗಳಲ್ಲಿ ಆರ್ಥಿಕ ಸಂಪನ್ಮೂಲದ ಕೊರತೆಯಾಗಿದೆ. ವಿಶ್ವವಿದ್ಯಾಲಯಗಳ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ಚಿಂತಸಲಾಗುತ್ತಿದೆ. ಕರ್ನಾಟಕ ವಿಶ್ವವಿದ್ಯಾಲಯದ ಮೇಲೆ ಸುಮಾರು 140 ಕೋಟಿ ರೂ ಹೊರೆ ಬಿದ್ದಿದೆ. ಈ ಬಗ್ಗೆ ಚರ್ಚೆ ಮಾಡಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕಲಾಗುವುದು. ಎಲ್ಲಾ ವಿಶ್ವವಿದಯಾಲಯಗಳಲ್ಲಿ ಇರುವ ಹುದ್ದೆಗಳನ್ನು ಗುರುತಿಸಿ ತರ್ಕಬದ್ಧವಾಗಿ, ವೈಜ್ಞಾನಿಕವಾಗಿ ಮಾಡಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ಹಂತ ಹಂತವಾಗಿ ತುಂಬಲು ಕ್ರಮ ವಹಿಸಲಾಗುವುದು.

ವಿಶ್ವವಿದ್ಯಾಲಯಗಳ ಉಳಿದ / ಹೆಚ್ಚುವರಿ ಪಿಂಚಣಿ ಅನುದಾನದ ಕೋರಿಕೆಗೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯು ವಿಶ್ವವಿದ್ಯಾಲಯಗಳ ಆಂತರಿಕ ಸಂಪನ್ಮೂಲದಿಂದ ಭರಿಸುವಂತೆ ಹಾಗೂ ಹೆಚ್ಚುವರಿ ಅನುದಾನವನ್ನು ಒದಗಿಸಲು ಸಾಧ್ಯವಿಲ್ಲವೆಂದು ತಿಳಿಸಿರುತ್ತದೆ. ಈ ಬಗ್ಗೆ ಸರ್ಕಾರ ರಚಿಸಿರುವ ಉಪ ಸಮಿತಿಯಲ್ಲಿ ಪರಿಹಾರ ಹುಡುಕಲು ಪರಿಶೀಲಿಸಲಾಗುವುದು ಎಂದು ಸಚಿವರು ತಿಳಿಸಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist