ಬೆಂಗಳೂರು(www.newzmirror.com):ಘಟಪ್ರಭಾ ಮತ್ತು ರಾಯಬಾಗದಲ್ಲಿ ರೈಲುಗಳ ತಾತ್ಕಾಲಿಕ ನಿಲುಗಡೆ ಮುಂದುವರಿಕೆ ನಿರ್ಧಾರ ಕೈಗೊಂಡಿದ್ದು,ಹೊಸಪೇಟೆ-ಮುಂಬೈ ಎಕ್ಸ್ ಪ್ರೆಸ್ ರೈಲು ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದ್ದುಕಲ್ಯಾಣ್ ನಿಲ್ದಾಣದಲ್ಲಿ ನಿಲುಗಡೆಯಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಯಶವಂತಪುರ-ಪಂಢರಪುರ-ಯಶವಂತಪುರ ಸಾಪ್ತಾಹಿಕ ಎಕ್ಸ್ ಪ್ರೆಸ್ (ರೈ.ಸಂ.16541/16542) ರೈಲುಗಳಿಗೆ ಘಟಪ್ರಭಾ ಮತ್ತು ರಾಯಬಾಗ ನಿಲ್ದಾಣಗಳಲ್ಲಿ ಒದಗಿಸಲಾಗಿರುವ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆಯನ್ನು ಮಾರ್ಚ್ 27, 2025 ರಿಂದ ಜೂನ್ 30, 2025 ರವರೆಗೆ ಮೂರು ತಿಂಗಳ ಅವಧಿಗೆ ಮುಂದುವರಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.
ಹೊಸಪೇಟೆ-ಮುಂಬೈ ಎಕ್ಸ್ ಪ್ರೆಸ್ ರೈಲು ಮಾರ್ಗದಲ್ಲಿ ಬದಲಾವಣೆ; ಕಲ್ಯಾಣ್ ನಿಲ್ದಾಣದಲ್ಲಿ ನಿಲುಗಡೆಯಿಲ್ಲ:
ಮಧ್ಯ ರೈಲ್ವೆಯು ಅಂಬರನಾಥ ಮತ್ತು ಬದ್ಲಾಪುರ ನಡುವೆ ರೈಲ್ವೆ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವುದರಿಂದ, ಮಾರ್ಚ್ 29 ರಂದು ಹೊಸಪೇಟೆಯಿಂದ ಹೊರಡುವ ರೈಲು ಸಂಖ್ಯೆ 11140 ಹೊಸಪೇಟೆ-ಸಿಎಸ್ಎಂಟಿ ಮುಂಬೈ ಎಕ್ಸ್ಪ್ರೆಸ್ ರೈಲಿನ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಈ ರೈಲು ಲೋನಾವಲ, ಕರ್ಜತ್, ಪನ್ವೇಲ್, ದಿವಾ ಮತ್ತು ಥಾಣೆ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಇದರಿಂದಾಗಿ, ಈ ರೈಲು ಕಲ್ಯಾಣ್ ನಿಲ್ದಾಣದಲ್ಲಿ ತನ್ನ ನಿಗದಿತ ನಿಲುಗಡೆಯನ್ನು ಹೊಂದಿರುವುದಿಲ್ಲ. ಪ್ರಯಾಣಿಕರ ಅನುಕೂಲಕ್ಕಾಗಿ, ಈ ರೈಲಿಗೆ ಪನ್ವೇಲ್ನಲ್ಲಿ ಹೆಚ್ಚುವರಿ ತಾತ್ಕಾಲಿಕ ನಿಲುಗಡೆಯನ್ನು ಕಲ್ಪಿಸಲಾಗಿದೆ ಎಂದು ಮಧ್ಯ ರೈಲ್ವೆಯು ಸೂಚಿಸಿದೆ.