ಟ್ಯಾಂಕರ್ ನಿಂದಲೇ ನೇರವಾಗಿ ಇಂಧನ ಟ್ಯಾಂಕ್ ಗೆ ಡೀಸೆಲ್ ಪೂರೈಕೆ: ಚಾಲಾಕಿತನ ಪತ್ತೆ ಹೆಚ್ಚಿಸ ಕೆಎಸ್ಆರ್ಟಿಸಿ

RELATED POSTS

ಬೆಂಗಳೂರು(www.thenewzmirror.com): ಕೆಎಸ್ಆರ್ಟಿಸಿಗೆ ಡೀಸೆಲ್ ಸರಬರಾಜು ಮಾಡುವ ಟ್ಯಾಂಕರ್ ನಿಂದ ಅದೇ ವಾಹನದ ಡೀಸೆಲ್ ಟ್ಯಾಂಕ್ ಗೆ ಇಂಧನ ಪೂರೈಕೆ ಮಾಡುತ್ತಿದ್ದ ಪ್ರಕರಣವನ್ನು ಡಿಕ್ಯಾಂಟಿಂಗ್ ತಂಡದ ಸದಸ್ಯರು ಪತ್ತೆ ಹೆಚ್ಚಿದ್ದು,ಟ್ಯಾಂಕರ್‌ನ ಮಾಲೀಕರು, ಚಾಲಕರು ಮತ್ತು ಕ್ಲೀನರ್ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕೆಎಸ್ಆರ್ಟಿಸಿ 13-05-2025 ರಂದು ಪಾಂಡವಪುರ ಘಟಕಕ್ಕೆ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್, ಹಾಸನ ಟರ್ಮಿನಲ್‌ನಿಂದ 20 ಸಾವಿರ ಲೀಟರ್ ಇಂಧನ ಸರಬರಾಜು ಮಾಡಲು ಬಂದಿದ್ದಂತಹ TN-02 BH-3039 ಟ್ಯಾಂಕರ್‌ನಿಂದ ಇಂಧನವನ್ನು ಪಡೆಯುವ ಮುನ್ನ ಘಟಕದ ಡಿಕ್ಯಾಂಟಿಂಗ್ ತಂಡದ ಸದಸ್ಯರುಗಳು ತಪಾಸಣೆ ಮಾಡಿದಾಗ ಟ್ಯಾಂಕರ್‌ನ 4ನೇ ಕಂಪಾರ್ಟ್‌ಮೆಂಟ್‌ ನಲ್ಲಿ ಸುಮಾರು 130 ಲೀಟರ್ ಕಡಿಮೆ ಇಂಧನ ಇರುವುದನ್ನು ಗಮನಿಸಿ, ಟ್ಯಾಂಕರ್ ಅನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ, 4ನೇ ಕಂಪಾರ್ಟ್‌ಮೆಂಟ್‌ನ ಡೆಲಿವರಿ ಪೈಪ್‌ನ ಒಳಗಿನಿಂದ ಕಾನೂನು ಬಾಹಿರವಾಗಿ ಬೇರೊಂದು ಪ್ಲೆಕ್ಸಿಬಲ್ ಪೈಪನ್ನು ಅಳವಡಿಸಿ ಅದರಿಂದ ನೇರವಾಗಿ ಇಂಧನ ಟ್ಯಾಂಕರ್‌ನ ಡೀಸೆಲ್ ಟ್ಯಾಂಕಿಗೆ ಡೀಸೆಲ್‌ ಅನ್ನು ಭರ್ತಿಮಾಡಿಕೊಳ್ಳುವ ವ್ಯವಸ್ಥೆ ಮಾಡಿಕೊಂಡಿರುವುದು ಕಂಡುಬಂದಿದೆ ಈ ಸಂಬಂಧ ಪಾಂಡವಪುರ ಘಟಕದ ಘಟಕ ವ್ಯವಸ್ಥಾಪಕರು ಸಹಾಯಕ ಆಯುಕ್ತರು, ಕಾನೂನು ಮಾಪನಶಾಸ್ತ್ರ ಇಲಾಖೆ (ತೂಕಮತ್ತು ಅಳತೆ), ಮಂಡ್ಯರವರಿಗೆ ದೂರನ್ನು ದಿನಾಂಕ:13-05-2025 ರಂದು ಸಲ್ಲಿಸಲಾಗಿದೆ ಎಂದು ತಿಳಿಸಿದೆ. 

ಸದರಿ ದೂರಿನನ್ವಯ ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು ಅವರ ತಂಡದೊಂದಿಗೆ ದಿನಾಂಕ:14-05-2025ರಂದು ಪಾಂಡವಪುರ ಘಟಕಕ್ಕೆ ಭೇಟಿ ನೀಡಿಸದರಿ TN-02 BH-3039 ಟ್ಯಾಂಕರ್‌ಅನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಟ್ಯಾಂಕರ್‌ನ 4ನೇ ಕಂಪಾರ್ಟ್‌ಮೆಂಟ್‌ ನ ಡೆಲಿವರಿ ಪೈಪ್ ಗೆ 15 MM external pipe ಅನ್ನು ಅಳವಡಿಸಿ ಅದರ ಮೂಲಕ ಟ್ಯಾಂಕರ್‌ ನ ಇಂಧನ

ಟ್ಯಾಂಕಿಗೆ ತುಂಬಿಸಿ ಕೊಳ್ಳುವ ವ್ಯವಸ್ಥೆ ಮಾಡಿ ಕೊಂಡಿರುವುದನ್ನು ಗಮನಿಸಿ, ಈ ನ್ಯೂನ್ಯತೆಯ ಬಗ್ಗೆ ಸ್ಥಳದಲ್ಲಿಯೇ ಪಂಚನಾಮೆಯನ್ನು ಮಾಡಿ, ಪ್ರಕರಣ ಸಂಖ್ಯೆ:0853295 ದಿನಾಂಕ:14-05-2025 ರನ್ವಯ ಪ್ರಕರಣವನ್ನು ದಾಖಲಿಸಿಕೊಂಡು seizure of articles u/s 15 of The Legal Metology Act, 2009 ರ ಅನ್ವಯ ಸದರಿ ಟ್ಯಾಂಕರ್ ಅನ್ನು ಮತ್ತು ಟ್ಯಾಂಕರ್‌ಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ನಂತರ ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು ಸದರಿ ಟ್ಯಾಂಕರ್‌ನ ಮಾಲೀಕರು, ಚಾಲಕರು ಮತ್ತು ಕ್ಲೀನರ್ ರವರುಗಳ ಮೇಲೆ ಕಾನೂನು ಕ್ರಮ ಜರುಗಿಸಲು ಪಾಂಡವಪುರದ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ಒಪ್ಪಿಸಿ ಮುಂದಿನ ಅಗತ್ಯ ಕ್ರಮ ಕೈ ಗೊಂಡಿರುತ್ತಾರೆ ಎಂದು ತಿಳಿಸಿದೆ.

ಈ ಪ್ರಕರಣವನ್ನು ಪಾಂಡವಪುರ ಘಟಕದ ಘಟಕ ವ್ಯವಸ್ಥಾಪಕರ ನೇತೃತ್ವದ ಇಂಧನ ಡಿಕ್ಯಾಂಟಿಂಗ್ ತಂಡದ ಸದಸ್ಯರು ಪತ್ತೆ ಹಚ್ಚಿ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist