ಬಿಟಿಎಂ ಲೇಔಟ್ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ,ಬ್ಯಾಗ್ ವಿತರಣೆ: ರಾಮಲಿಂಗಾರೆಡ್ಡಿ ಅವರ ಶಿಕ್ಷಣ ಸ್ನೇಹಿ ಬದ್ಧತೆಗೆ ಇದು ಜ್ವಲಂತ ಸಾಕ್ಷಿ

RELATED POSTS

ಬೆಂಗಳೂರು(www.thenewzmirror.com):ಬಿ.ಟಿ.ಎಂ ವಿಧಾನಸಭಾ ಕ್ಷೇತ್ರದ ಒಟ್ಟು 43 ಸರ್ಕಾರಿ/ಅನುದಾನಿತ ಶಾಲಾ/ಕಾಲೇಜುಗಳಿಗೆ ಉಚಿತವಾಗಿ ನೋಟ್ ಬುಕ್ ಗಳು  ಮತ್ತು ಬ್ಯಾಗ್ ಗಳನ್ನು ಸ್ಥಳೀಯ ಶಾಸಕರೂ ಆದ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮುಂದಾಗಿದ್ದು ಸಾಂಕೇತಿಕವಾಗಿ ವಿತರಣಾಕಾರ್ಯಕ್ಕೆ ಸಚಿವರು ಚಾಲನೆ ನೀಡಿದ್ದಾರೆ.

ಜೂನ್ 9 ರಿಂದ 15 ರೊಳಗೆ ಉಚಿತ ಪುಸ್ತಕ ಮತ್ತು ಬ್ಯಾಗ್ ವಿತರಣೆ ಮಾಡಲು ನಿರ್ಧರಿಸಲಾಗಿದೆ, ಬಿ ಟಿ ಎಂ‌ ಕ್ಷೇತ್ರ -ಬೆಂಗಳೂರು ನಗರದ ಶಿಕ್ಷಣ ಕಾಶಿ – ಸ್ಥಳೀಯ ಶಾಸಕರು, ಸಾರಿಗೆ ಹಾಗೂ ಮುಜರಾಯಿ ಸಚಿವರ ರಾಮಲಿಂಗಾರೆಡ್ಡಿ ರವರ ಶಿಕ್ಷಣ ಸ್ನೇಹಿ ಬದ್ಧತೆಗೆ ಇದು ಜ್ವಲಂತ ಸಾಕ್ಷಿಯಾಗಿದೆ.

ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 

1. 23 ಸರ್ಕಾರಿ ಶಾಲಾ/ಕಾಲೇಜುಗಳು 

2. ಸರ್ಕಾರಿ* *ಅನುದಾನಿತ* *ಶಾಲೆಗಳು* 

3. ಅತ್ಯಂತ ಬಡ ಜನರು ವಾಸಿಸುವ ಪ್ರದೇಶದಲ್ಲಿನ *ಕಾನ್ವೆಂಟ್* ಶಾಲೆಗಳು

ಸದರಿ ಶಾಲಾ/ಕಾಲೇಜಿನಲ್ಲಿ ಓದುವ  13000 ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ನೋಟ್ ಬುಕ್ ಗಳು, ಬ್ಯಾಗ್ ಗಳ ವಿತರಣೆಯ ವಿಶೇಷ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿತ್ತು.

ಸಾಂಕೇತಿಕವಾಗಿ ಈ ಕಾರ್ಯಕ್ರಮಕ್ಕೆ ಇಂದು ಕೋರಮಂಗಲ ಗ್ರಾಮದಲ್ಲಿರುವ ಸರ್ಕಾರಿ ಪ್ರೈಮರಿ ಮಾಡಲ್ ಶಾಲೆ,‌ಚಾಲನೆ ನೀಡಲಾಯಿತು

ಬಿ.ಟಿ.ಎಂ ವಿಧಾನಸಭಾ ಕ್ಷೇತ್ರದ ಒಟ್ಟು 43 ಶಾಲಾ/ಕಾಲೇಜುಗಳಿಗೆ ನೋಟ್ ಬುಕ್ ಗಳು  ಮತ್ತು ಬ್ಯಾಗ್ ಗಳನ್ನು ಜೂನ್ 9 ರಿಂದ 15 ರೊಳಗೆ ವಿತರಣೆ ಮಾಡಲಾಗುವುದು.  ರಾಮಲಿಂಗಾ ರೆಡ್ಡಿ ರವರು, ಮಾಜಿ ಬಿಬಿಎಂಪಿ ಸದಸ್ಯರುಗಳು, ಬ್ಲಾಕ್ ಅಧ್ಯಕ್ಷರುಗಳು, ಕಾಂಗ್ರೆಸ್ ಮುಖಂಡರುಗಳೊಡನೆ  ಈ ಶಾಲಾ ಕಾಲೇಜುಗಳಿಗೆ ಖುದ್ದು ಭೇಟಿ ನೀಡಿ, ಮಕ್ಕಳಿಗೆ  ನೋಟ್ ಬುಕ್ ಹಾಗೂ ಬ್ಯಾಗ್ ಗಳನ್ನು ವಿತರಣೆ ಮಾಡಲಿದ್ದಾರೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist