Waqf Board Story | ದೇಶದಲ್ಲಿ ಎಷ್ಟಿದೆ ಗೊತ್ತಾ ವಕ್ಫ್‌ ಆಸ್ತಿ?, ದಕ್ಷಿಣ ಭಾರತದಲ್ಲೇ ಹೆಚ್ಚು ವಿರೋಧ ಏಕೆ?

What is in the Waqf Amendment Bill? Why is it being opposed? Here is the complete information

ಬೆಂಗಳೂರು, (www.thenewzmirror.com) ;

ಇಡೀ ದೇಶಾದ್ಯಂತ ವಕ್ಫ್ ಮಸೂದೆ ವಿಚಾರ ಭಾರೀ ಚರ್ಚೆ ಆಗುತ್ತಿದೆ. ಸಂಸತ್ ಒಳಗೆ ಹಾಗೂ ಹೊರಗೆ ವಕ್ಫ್ ಬಗೆಗಿನ ಪರ-ವಿರೋಧದ ಚರ್ಚೆ ಜೋರಾಗಿದೆ. ಆಡಳಿತಾರೂಢ ಎನ್ ಡಿಎ ಮಸೂದೆಗೆ ಬೆಂಬಲ ವ್ಯಕ್ತಪಡಿಸಿದರೆ ಪ್ರತಿಪಕ್ಷಗಳು ನಿರೀಕ್ಷೆಯಂತೆ ವಿರೋಧ ವ್ಯಕ್ತಪಡಿಸಿವೆ.

RELATED POSTS

ಸಾಕಷ್ಟು ವಿರೋಧದ ನಡುವೆನೂ ಲೋಕಸಭೆ ಹಾಗೂ ರಾಜ್ಯ ಸಭೆಯಲ್ಲಿ ವಕ್ಫ್‌ ಮಸೂದೆ ಮಂಡನೆ ಮಾಡಿ ಅನುಮೋದನೆಯನ್ನೂ ಪಡೆಯಲಾಗಿದೆ. ಸದ್ಯ ರಾಷ್ಟ್ರಪತಿ ಅಂಕಿತಕ್ಕೆ ಕಡತ ಕಳುಹಿಸಿ ಕೊಡಲಿರುವ ಕೇಂದ್ರ ಸರ್ಕಾರ ಬಳಿಕ ಇದು ಕಾನೂನಾಗಿ ಜಾರಿಗೆ ಬರಲಿದೆ. ಮನಮೋಹನ್‌ ಸಿಂಗ್‌ ಪ್ರಧಾನ ಮಂತ್ರಿಯಾಗಿದ್ದಾಗ ತಿದ್ದುಪಡಿ ತಂದ ಬಳಿಕ ದೇಶದಲ್ಲಿ ವಕ್ಪ್‌ ಆಸ್ತಿ ನಿರೀಕ್ಷೆಗೂ ಮೀರಿ ಹೆಚ್ಚುತ್ತಾ ಹೋಯ್ತು. ಒಂದು ಮೂಲಗಳ ಪ್ರಕಾರ ದೇಶದಲ್ಲಿ ಒಟ್ಟು 8.72 ಲಕ್ಷ ವಕ್ಫ್ ಆಸ್ತಿಗಳಿವೆಯಂತೆ. ಇದರಲ್ಲಿ 8 ಲಕ್ಷ ಎಕರೆ ವಕ್ಫ್ ಆಸ್ತಿ ವಿಸ್ತೀರ್ಣ ಆಗಿದೆ. ಒಟ್ಟು ಆಸ್ತಿಯ ಅಂದಾಜು ಮೌಲ್ಯ 1 ಲಕ್ಷ ಕೋಟಿ ರೂ ಅಂದು ಹೇಳಲಾಗುತ್ತಿದೆ. ವಕ್ಪ್‌ ಆಸ್ತಿಯಲ್ಲಿ ಒಟ್ಟು 1,50,569 ಸ್ಮಶಾನಗಳು, 1,19,200 ಮಸೀದಿಗಳಳು, 1,13,187 ಅಂಗಡಿ ಮತ್ತು 92,505 ಮನೆಗಳಿವೆಯಂತೆ. ಹಾಗೆನೇ 1,40,788 ಕೃಷಿ ಭೂಮಿ ವಕ್ಪ್‌ ಹೆಸರಿನಲ್ಲಿದೆಯಂತೆ. ಇನ್ನೊಂದು ಆತಂಕದ ವಿಚಾರ ಅಂದ್ರೆ ಒಟ್ಟು ವಕ್ಫ್‌ ಆಸ್ತಿಯ ವ್ಯಾಪ್ತಿಯಲ್ಲಿ 33,492 ಧಾರ್ಮಿಕ ಸ್ಥಳಗಳೂ ಸೇರಿಕೊಂಡಿವೆಯಂತೆ. ಇನ್ನು ದೇಶದಲ್ಲಿ ಒಟ್ಟು 32 ವಕ್ಫ್ ಮಂಡಳಿಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ.

ಇನ್ನು ನೂತನ ವಕ್ಫ್‌ ಮಸೂದೆ ಪ್ರಕಾರ ಸಮಿತಿಯಲ್ಲಿ ಎಷ್ಟು ಜನ ಸದಸ್ಯರು ಇರುತ್ತಾರೆ? ಯಾರೆಲ್ಲಾ ಇರುತ್ತಾರೆ ಅನ್ನೋದನ್ನೂ ಉಲ್ಲೇಖ ಮಾಡಲಾಗಿದೆ. ಅದರ ಪ್ರಕಾರ ಕೇಂದ್ರ ವಕ್ಫ್‌ ಸಮಿತಿಯಲ್ಲಿ ಒಟ್ಟು 21 ಜನರ ಸಮಿತಿ ಇರಲಿದೆ.
ಇದರಲ್ಲಿ ಓರ್ವ ಕೇಂದ್ರ ಸಚಿವರು, ಮುಸ್ಲಿಮೇತರರು ನಾಲ್ಕು ಜನ, ಸಂಸಸದರು ಮೂವರು, ಮುಸ್ಲಿಂ ಸದಸ್ಯರು ೧೦ ಜನ, ನಿವೃತ್ತ ಜಡ್ಜ್‌ ಇಬ್ಬರು ಇದ್ದರೆ ವಕೀಲರು ಒಬ್ಬರು ಇರಲಿದ್ದಾರೆ. ಹಾಗೆನೇ ರಾಜ್ಯ ಸಮಿತಿಯಲ್ಲಿ ಒಬ್ಬರು ಅಧ್ಯಕ್ಷರು, ಒಬ್ಬರು ಸಂಸದರು ಒಬ್ಬರು ಶಾಸಕರು ಮುಸ್ಲಿಮೇತರರು ಇಬ್ಬರು ಮುಸ್ಲಿಂದ ಸದ್ಯರು ನಾಲ್ವರು, ವಕೀಲರು ಒಬ್ಬರು ಇದ್ರೆ ಜಂಟಿ ಕಾರ್ಯದರ್ಶಿ ಒಬ್ಬರು ಇರಲಿದ್ದಾರೆ.

What is in the Waqf Amendment Bill? Why is it being opposed? Here is the complete information
Waqf Amendment Bill

ಸೆಪ್ಟೆಂಬರ್ 2024 ರ ದತ್ತಾಂಶದ ಪ್ರಕಾರ 25 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ವಕ್ಫ್ ಮಂಡಳಿಗಳಲ್ಲಿ, ಒಟ್ಟು 5973 ಸರ್ಕಾರಿ ಆಸ್ತಿಗಳನ್ನು ವಕ್ಫ್ ಆಸ್ತಿಗಳೆಂದು ಘೋಷಿಸಲಾಗಿದೆ ಯಂತೆ ಹಾಗೆನೇ ಕರ್ನಾಟಕದಲ್ಲಿ 2024 ರಲ್ಲಿ, ವಕ್ಫ್ ಮಂಡಳಿಯು ವಿಜಯಪುರದಲ್ಲಿ 15,000 ಎಕರೆಗಳನ್ನು ವಕ್ಫ್ ಭೂಮಿ ಎಂದು ಗೊತ್ತುಪಡಿಸಿದ ನಂತರ ರೈತರು ಪ್ರತಿಭಟಿಸಿದ್ದರು. ಬಳ್ಳಾರಿ, ಚಿತ್ರದುರ್ಗ, ಯಾದಗಿರಿ ಮತ್ತು ಧಾರವಾಡದಲ್ಲಿಯೂ ವಿವಾದಗಳು ಹುಟ್ಟಿಕೊಂಡವು. ಆದಾಗ್ಯೂ, ಯಾವುದೇ ತೆರವು ನಡೆಯುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿತ್ತು.

ಸಂಸದೀಯ ಮಂಡಳಿಯ ವರದಿ ಪ್ರಕಾರ ಕರ್ನಾಟಕ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ ಮತ್ತು ಕೇರಳದಲ್ಲಿ ವಕ್ಫ್ ಆಸ್ತಿ ವಿವಾದಗಳು ಹೆಚ್ಚಾಗಿವೆಯಂತೆ. ಈ ವಿವಾದ ವಕ್ಪ್‌ ಮಸೂದೆ ಮಂಡನೆ ಮಾಡುವುದರಿಂದ ಕಡಿಮೆಯಾಗುವ ನಿರೀಕ್ಷೆಯಿದೆ. ಮಸೂದೆ ಮಂಡನೆ ಆಗಿದ್ದರಿಂದ ಅನುಕೂಲಗಳೇನು ಅನ್ನೋದನ್ನ ನೋಡೋದಾದ್ರೆ ವಕ್ಫ್ ಆಸ್ತಿ ನಿರ್ವಹಣೆ ಕಂಪ್ಲೀಟ್‌ ಡಿಜಿಟಲೀಕರಣವಾಗಲಿದೆ. ಕಾನೂನುಬಾಹಿರವಾಗಿ ವಕ್ಫ್ ಘೋಷಣೆಗೆ ತಡೆಗಟ್ಟುವ ವ್ಯವಸ್ಥೆ ಜಾರಿ ಬರಲಿದೆ. ಬಡವರ ಕಲ್ಯಾಣದ ಜತೆಗೆ ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗ ನಿರ್ವಹಣೆಯಲ್ಲಿ ಮುಸ್ಲಿಂ ಸಮುದಾಯದ ಬಡವರಿಗಾಗಿ ಹೆಚ್ಚುವರಿ ಅನುದಾನ ಮೀಸಲಿಟ್ಟದಂತೆ ಆಗಲಿದೆ. ಪಾರದರ್ಶಕತೆ ಹೆಚ್ಚಿಸಲು ನಿಗಮಿತ ಲೆಕ್ಕಪರಿಶೋಧನೆ ಮತ್ತು ತನಿಖಾ ಸಮಿತಿಗಳ ಸ್ಥಾಪನೆ ಮಾಡುವುದರಿಂದ ವಕ್ಫ್ ಮಂಡಳಿಗಳ ಮೇಲ್ವಿಚಾರಣೆ ಹೆಚ್ಚಳವಾಗಲಿದೆ.

ಅಂತಿಮವಾಗಿ ಕೇಂದ್ರ ಸರ್ಕಾರ ಇದೀಗ ಮಸೂದೆಯನ್ನ ಜಾರಿಗೆ ತರಲು ಮುಂದಾಗಿದ್ದು, ಆಮೂಲಕ ವಕ್ಫ್‌ ಬೋರ್ಡ್‌ ಹೆಸರಿನಲ್ಲಿ ಕೊಡುತ್ತಿದ್ದ ಕಿರುಕುಳ ನಿಂತತಾಗುತ್ತೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist