ಶಿವಮೊಗ್ಗ(www.thenewzmirror.com): ದಿಢೀರ್ ಎಂದು ಶಾಲಾ ಮಕ್ಕಳ ಕರೆದೊಯ್ಯುವ ವಾಹನಗಳ ತಪಾಸಣೆ ನಡೆಸಿದ ಪೊಲೀಸರು, ಕುಡಿದು ವಾಹನ ಚಾಲನೆ,ಹೆಚ್ಚುವರಿ ಮಕ್ಕಳ ಕರೆದೊಯ್ಯುವುದು ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆ ಆರೋಪದ ಮೇಲೆ ಒಟ್ಟು 24 ಪ್ರಕರಣ ದಾಖಲಿಸಿದ್ದಾರೆ.
ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷಾರಂಭಗೊಂಡು ಶಾಲೆಗಳು ಪುನರಾರಂಭವಾಗುತ್ತಿದ್ದಂತೆ ಶಾಲಾ ಮಕ್ಕಳಸುರಕ್ಷತೆಯ ದೃಷ್ಠಿಯಿಂದ ವಮೊಗ್ಗ ನಗರದ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರು ಶಿವಮೊಗ್ಗ ನಗರದದಾದ್ಯಂತ ವಿವಿಧ ಸ್ಥಳಗಳಲ್ಲಿ ಹಾಗೂ ಪ್ರಮುಖ ವೃತ್ತಗಳಲ್ಲಿ ಶಾಲೆಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುವ ಶಾಲಾ ಕಾಲೇಜು ವಾಹನಗಳನ್ನು ತಪಾಸಣೆ ಮಾಡಿದರು.
ನಿಯಮ ಉಲ್ಲಂಘನೆ ಮಾಡಿದ ವಾಹನ ಚಾಲಕರ ವಿರುದ್ಧ 01) CARRYING EXCESS SCHOOL CHILDREN -17 ಪ್ರಕರಣಗಳು, 02) DRUNK AND DRIVE-04 ಪ್ರಕರಣಗಳು ಮತ್ತು 03) FITNESS EXPIRED (FC)-03 ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಳ್ಳಲಾಯಿತು.
ವಾಹನ ಚಾಲಕರಿಗೆ ವಾಹನದವಿಮೆ, ಎಮಿಷನ್ ರಿಪೋರ್ಟ್ ಹಾಗೂ ಫಿಟ್ನೆಸ್ ಸರ್ಟಿಫಿಕೇಟ್ ಅನ್ನು ಚಾಲ್ತಿಯಲ್ಲಿ ಇರುವಂತೆ ನೋಡಿಕೊಳ್ಳಲು ಸೂಚನೆಗಳನ್ನು ನೀಡಿದ್ದು, ಕಡ್ಡಾಯವಾಗಿ ಸಂಚಾರ ನಿಯಮಗಳ ಪಾಲಿಸುವಂತೆ ಸೂಚಿಸಲಾಯಿತು.