ಬೆಂಗಳೂರು(www.thenewzmirror.com):ಈ ಹಿಂದೆ ರಾಜ್ಯಾದಂತ 2 ಭಾರಿ ನಡೆದ ಕೆ.ಎ.ಎಸ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಲ್ಲಿ ಸುಮಾರು 79 ಕ್ಕಿಂತ ಹೆಚ್ಚು ತಪ್ಪುಗಳಿದ್ದರೂ KPSC ಕೇವಲ 5 ಪ್ರಶ್ನೆಗಳಿಗೆ ಮಾತ್ರ ಕೃಪಾಂಕ ನೀಡಿದೆ. ಇದು ರಾಜ್ಯದ ಕನ್ನಡ ಮಾಧ್ಯಮದ ಅಭ್ಯರ್ಥಿ ಗಳಿಗೆ ಬಹುದೊಡ್ಡ ಅನ್ಯಾಯ KPSC ಮಾಡಿದೆ ಹಾಗಾಗಿ ಎಲ್ಲ ಅಭ್ಯರ್ಥಿಗಳಿಗೂ KAS ಮರು ಪರೀಕ್ಷೆ ಬರೆಯಲು ಸರ್ಕಾರ ಅವಕಾಶ ನೀಡಬೇಕು ಎಂದು ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕಎನ್ ರವಿಕುಮಾರ್ ಒತ್ತಾಯಿಸಿದ್ದಾರೆ.
kPSC ಯ ಪ್ರಶ್ನೆ ಪತ್ರಿಕೆಗಳಲ್ಲಿ ದೋಷಗಳು ಸೇರಿದಂತೆ ಅನೇಕ ಅನ್ಯಾಯ ಹಾಗೂ KAS ಮರು ಪರೀಕ್ಷೆ ನಡೆಸಬೇಕೆಂದು ಪರೀಕ್ಷಾರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದರು. ಕಳೆದ ಬಜೆಟ್ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಎಲ್ಲ ಪಕ್ಷದ ಶಾಸಕರು KPSC ಯ ಕಾರ್ಯವೈಖರಿ ಹಾಗೂ ಅವಾಂತರ ಬಗ್ಗೆ ಸುದೀರ್ಘ ಚರ್ಚೆ ನಡೆದಿತ್ತು. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಉಭಯ ಸದನಗಳಲ್ಲಿ ಹೇಳಿದಂತೆ ನ್ಯಾಯಾಲಯದ ತೀರ್ಪು ಬಂದಕೂಡಲೇ ಪರೀಕ್ಷಾರ್ಥಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸುವುದಾಗಿ ಆಶ್ವಾಸನೆ ನೀಡಿದ್ದರು.
ಈಗ ನ್ಯಾಯಾಲಯವು 32 ಅಭ್ಯರ್ಥಿಗಳಿಗೆ ಮಾತ್ರ ಮರು ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಿದೆ ಎಂದು ವಿವರಿಸಿದ್ದಾರೆ.
ರಾಜ್ಯದ ಸುಮಾರು 70 ಸಾವಿರಕ್ಕಿಂತ ಹೆಚ್ಚು ಅಭ್ಯರ್ಥಿಗಳು KAS ಪರೀಕ್ಷೆಗೆ ಅರ್ಜಿ ಸಲ್ಲಿಸಿ, ಪರೀಕ್ಷೆ ಬರೆದಿದ್ದರು. ಎಲ್ಲ ಅಭ್ಯರ್ಥಿಗಳು ಕೂಡ ಕೋರ್ಟ್ ಮೊರೆ ಹೋಗಿದ್ದರೆ ಎಲ್ಲರಿಗೂ ಪರೀಕ್ಷೆ ಬರೆಯಲು ಅವಕಾಶ ಸಿಗುತ್ತಿತ್ತೇನೋ.ಆದರೆ ರಾಜ್ಯದ ಬಡ, ಗ್ರಾಮೀಣ ಪ್ರದೇಶದ, ರೈತಾಪಿ ವರ್ಗದ ಮಕ್ಕಳ ಅಭ್ಯರ್ಥಿಗಳು ಕೋರ್ಟ್ ಮೊರೆ ಹೋಗಲು ಆರ್ಥಿಕವಾಗಿ ಅವರಿಗೆ ಕಷ್ಟ. ಮತ್ತು ಎಲ್ಲ ಅಭ್ಯರ್ಥಿಗಳು ಮರು ಪರೀಕ್ಷೆ ನಡೆಸಬೇಕೆಂದು ಅವರ ಒತ್ತಾಯವಿತ್ತು.ಹೀಗಾಗಿ KAS ಆಗಬೇಕೆಂಬ ಆಕಾಂಕ್ಷೆ ಹೊಂದಿರುವ ಎಲ್ಲ ಅಭ್ಯರ್ಥಿಗಳ ಭವಿಷ್ಯದ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸಿ, ಎಲ್ಲಾ ಅಭ್ಯರ್ಥಿಗಳಿಗೂ ಮತ್ತೆ ಮರು ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.