ಬೆಂಗಳೂರು, (www.thenewzmirror.com);
ಭಾರತದ ವಿಶಿಷ್ಟ ಪ್ಲಾಟ್‌ಫಾರಂ ಆಗಿರುವ ಸ್ವಿಗ್ಗಿ ಈಗ ಸ್ವಿಗ್ಗಿ ಸಿಕ್ಸೆಸ್ ಎಂಬ ರಿಯಲ್ ಟೈಮ್, ಕ್ರಿಕೆಟ್ ಮ್ಯಾಚ್‌ಗೆ ಲಿಂಕ್ ಆಗಿರುವ ಕೊಡುಗೆಯನ್ನು ಬಿಡುಗಡೆ ಮಾಡಿದೆ. ಪ್ರಸ್ತುತ IPL ಕ್ರಿಕೆಟ್ ಸೀಸನ್‌ನ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿರುವುದಲ್ಲದೇ ನಿಮ್ಮ ಮೆಚ್ಚಿನ ರೆಸ್ಟೋರೆಂಟ್‌ಗಳಲ್ಲಿ ಇನ್ನಷ್ಟು ಆಫರ್‌ಗಳನ್ನು ಒದಗಿಸಲಿದೆ. ಇಡೀ ದೇಶದಲ್ಲಿ ಕ್ರಿಕೆಟ್ ಉತ್ಸಾಹ ವ್ಯಾಪಕವಾಗಿ ಹರಡಿದ್ದು, ಸ್ವಿಗ್ಗಿ ಸಿಕ್ಸೆಸ್ ಮೂಲಕ ಪ್ರತಿ ಸಿಕ್ಸ್ ಅನ್ನೂ ಅದ್ಭುತ ಫುಡ್ ಡೀಲ್‌ಗಳನ್ನು ಪಡೆದುಕೊಳ್ಳುವ ಅವಕಾಶವನ್ನಾಗಿ ಪರಿವರ್ತಿಸಲಾಗುತ್ತಿದೆ.


ಸ್ವಿಗ್ಗಿ ಸಿಕ್ಸೆಸ್ ಮೂಲಕ ಬಳಕೆದಾರರು ಆಕರ್ಷಕ ರಿಯಾಯಿತಿಗಳನ್ನು ಪಡೆಯಬಹುದು. ಇದರಲ್ಲಿ 66% ರಿಯಾಯಿತಿ, ₹266 ರಿಯಾಯಿತಿ, ₹166 ರಿಯಾಯಿತಿ ಅಥವಾ ₹66 ರಿಯಾಯಿತಿ ಇರುತ್ತದೆ. ಈ ಸೌಲಭ್ಯವು ದೇಶದ 50,000 ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳ ಆರ್ಡರ್‌ಗಳ ಮೇಲೆ ಸಿಗಲಿದೆ. ಈ ಸೀಮಿತ ಸಮಯದ ಆಫರ್ ಪ್ರತಿ ಬಾರಿ ಒಂದು ಸಿಕ್ಸ್ ಹೊಡೆದಾಗಲೂ ಆಕ್ಟಿವೇಟ್ ಆಗುತ್ತದೆ ಮತ್ತು ಹತ್ತು ನಿಮಿಷಗಳವರೆಗೆ ಇರುತ್ತದೆ. ನೈಜ ಸಮಯದ “ಬಾಲ್ ಫ್ಲೋಟಿ” ಟೈಮರ್ ಸ್ವಿಗ್ಗಿ ಆಪ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಅದರಲ್ಲಿ “ಸಿಕ್ಸ್ ಹಿಟ್ ಆದಾಗ ಆಫರ್ ಅನ್‌ಲಾಕ್ ಆಗುತ್ತದೆ” ಎಂಬ ಸಂದೇಶ ಕಾಣಿಸುತ್ತದೆ. ಇದು ಲೈವ್ ಅನ್‌ಲಾಕ್ ಅನ್ನು ಸುಲಭವಾಗಿ ಬಳಕೆದಾರರು ಟ್ರ್ಯಾಕ್ ಮಾಡಬಹುದು.
ಆಫರ್ ಪಡೆಯಲು ಒಂದು ಸಿಕ್ಸ್ ಹೊಡೆದ ನಂತರ 10 ನಿಮಿಷದೊಳಗೆ ಬಳಕೆದಾರರು ಆರ್ಡರ್ ಮಾಡಬೇಕಿರುತ್ತದೆ. ಚೆಕ್ ಔಟ್ ಸೇರಿದಂತೆ ಆರ್ಡರ್ ಮಾಡುವ ಪ್ರಕ್ರಿಯೆ ಈ ಅವಧಿಯಲ್ಲಿ ಮುಗಿದಿರಬೇಕು. ಈ ಸೀಮಿತ ಸಮಯದ ಕೊಡುಗೆಯನ್ನು ಮ್ಯಾಚ್ ಅನುಭವವನ್ನು ಇನ್ನಷ್ಟು ಸುಧಾರಿಸಲು ಮತ್ತು ಸಮಯಕ್ಕೆ ಸರಿಯಾಗಿ ರಿವಾರ್ಡ್ ಮತ್ತು ಅನುಕೂಲವನ್ನು ಒದಗಿಸುವುದಕ್ಕಾಗಿ ವಿನ್ಯಾಸ ಮಾಡಲಾಗಿದೆ.
ಅಭಿಯಾನದ ಬಗ್ಗೆ ಮಾತನಾಡಿದ ಸ್ವಿಗ್ಗಿ ಫುಡ್ ಮಾರ್ಕೆಟ್‌ಪ್ಲೇಸ್‌ನ ಮುಖ್ಯ ಬ್ಯುಸಿನೆಸ್ ಆಫೀಸರ್ ಆಗಿರುವ ಸಿದ್ಧಾರ್ಥ ಭಾಕೂ ಮಾತನಾಡಿ “ನಮ್ಮ ಗ್ರಾಹಕರ ಪ್ರತಿ ದಿನದ ಕ್ಷಣಗಳನ್ನು ಇನ್ನಷ್ಟು ಸುಧಾರಿಸುವುದಕ್ಕೆ ಅರ್ಥವತ್ತಾದ ವಿಧಾನಗಳನ್ನು ನಾವು ನಿರಂತರವಾಗಿ ಹುಡುಕುತ್ತಿರುತ್ತೇವೆ. ಸ್ವಿಗ್ಗಿ ಸಿಕ್ಸೆಸ್ ಮೂಲಕ ಭಾರತಕ್ಕೆ ಇಷ್ಟವಾಗಿರುವ ಕ್ರಿಕೆಟ್ ಮತ್ತು ಆಹಾರವನ್ನು ನಾವು ಒಟ್ಟಿಗೆ ತರುತ್ತಿದ್ದೇವೆ. ಈ ಮೂಲಕ ನಾವು ಉತ್ಸಾಹ ಮತ್ತು ಅಚ್ಚರಿಯನ್ನು ಒಟ್ಟಿಗೆ ಸೇರಿಸಿ, ಮ್ಯಾಚ್‌ನ ಅನುಭವವನ್ನು ಇನ್ನಷ್ಟು ಸುಂದರವಾಗಿಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.