ಅನಿವಾರ್ಯವಾದರೆ ಪಾಕಿಸ್ತಾನದ ವಿರುದ್ಧ ಯುದ್ದ ಮಾಡಬೇಕು,ಭಯೋತ್ಪಾದನೆಯ ಮೂಲೋಚ್ಚಾಟನೆಯಾಗಬೇಕು.:ಮುಖ್ಯಮಂತ್ರಿ ಸಿದ್ದರಾಮಯ್ಯ

RELATED POSTS

ಬಾಗಲಕೋಟೆ(www.thenewzmirror.com):  ಪಾಕಿಸ್ತಾನದ ಮೇಲೆ ಯುದ್ಧ ಅನಿವಾರ್ಯವಾದರೆ ಯುದ್ಧ ಮಾಡಬೇಕು  ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ  ಭಯೋತ್ಪಾದನೆಯ ಮೂಲೋಚ್ಚಾಟನೆಯಾಗಬೇಕು. ಎಲ್ಲರಿಗೂ ಭದ್ರತೆಯನ್ನು ಕೇಂದ್ರ ಸರ್ಕಾರ ಒದಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. 

ಕೂಡಲಸಂಗಮ ಸಭಾಭವನ  ಹತ್ತಿರ ಮಾಧ್ಯಮದರೊಂದಿಗೆ    ಮಾತನಾಡಿದ ಅವರು,ಹಿಂದೆ ಇಂದಿರಾ ಗಾಂಧಿಯವರು 1971ರಲ್ಲಿ ಯುದ್ಧ ಮಾಡಿ ಪಾಕಿಸ್ತಾನವನ್ನು ಬಗ್ಗು ಬಡಿದಿದ್ದರು. ಪಾಕಿಸ್ತಾನದ ಸುಮಾರು 80 ಸಾವಿರ ಸೈನಿಕರು ಶರಣಾಗತರಾಗಿದ್ದರು ಎಂದರು.

ಕೇಂದ್ರ ಸರ್ಕಾರದ ತೀರ್ಮಾನಕ್ಕೆ ನಮ್ಮ ಬೆಂಬಲ ಇದೆ:

ಉಗ್ರರ ದಾಳಿಯ ನಂತರ ಕೇಂದ್ರ ಸರ್ಕಾರದ ರಾಜತಾಂತ್ರಿಕ ನಡೆಯಿಂದಾಗಿ ತಾಯಿ ಮಕ್ಕಳು ಅಗಲಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಕೇಂದ್ರ ಸರ್ಕಾರದ ತೀರ್ಮಾನಕ್ಕೆ ನಮ್ಮ ಬೆಂಬಲ ಇದೆ ಎಂದರು.

ಮಾನಹಾನಿ ಮಾಡಬಾರದು:

ಮೋದಿಯವರ ತಲೆ ಇಲ್ಲದ ಚಿತ್ರ ಹಾಕಿ ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದ್ದು, ಅದನ್ನು ತೆಗೆದಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಸಾಮಾಜಿಕ ಮಾಧ್ಯಮದಲ್ಲಿ ನರೇಂದ್ರ ಮೋದಿಯವರದ್ದಾಗಲಿ ಬೇರೆ ಯಾರದ್ದೇ ಆಗಲಿ  ಮಾಡಬಾರದು. ವಾಕ್ ಮತ್ತು ವ್ಯಕ್ತಿ ಸ್ವಾತಂತ್ರ್ಯ ಇದೆ ಎಂದು ಇನ್ನೊಬ್ಬರ ಮಾನಹಾನಿ ಮಾಡಬಾರದು ಎಂದರು. 

ಸಾಮಾಜಿಕ ನ್ಯಾಯ ಒದಗಿಸಲು ಸಾಮಾಜಿಕ ಆರ್ಥಿಕ ಸಮೀಕ್ಷೆ ಮುಖ್ಯ:

ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ ಆಗಬೇಕೆಂದು ಹೇಳಿದ್ದು, ಕೇಂದ್ರ ಸರ್ಕಾರ ಜಾತಿ ಗಣತಿ ಮಾಡುತ್ತಾರೋ ಅಥವಾ ಸಾಮಾಜಿಕ ಆರ್ಥಿಕ ಸಮೀಕ್ಷೆ ಮಾಡುತ್ತಾರೋ ತಿಳಿದಿಲ್ಲ. ಕೇಂದ್ರ ಸರ್ಕಾರ  ಜಾತಿ ಮತ್ತು ಜನಗಣತಿ ಮಾಡುವುದಾಗಿ ಹೇಳಿದೆ. ಸಾಮಾಜಿಕ ನ್ಯಾಯ ಒದಗಿಸಲು ಸಾಮಾಜಿಕ ಆರ್ಥಿಕ ಸಮೀಕ್ಷೆ ಯಾಗಬೇಕಿರುವುದು ಬಹಳ ಮುಖ್ಯ ಎಂದರು.

ಸಾಮಾಜಿಕ, ಶೈಕ್ಷಣಿಕ ಆರ್ಥಿಕ ಸಮೀಕ್ಷೆಯನ್ನು ಸಚಿವ ಸಂಪುಟದಲ್ಲಿ ಮಂಡಿಸಲಾಗಿದ್ದು, ಈ ಬಗ್ಗೆ ಸಚಿವರು ಲಿಖಿತವಾಗಿ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸುವುದಾಗಿ ತಿಳಿಸಿದ್ದು, ಅದು ಸಲ್ಲಿಕೆಯಾದ ನಂತರ ಪುನಃ ಸಚಿವ ಸಂಪುಟ ಕರೆದು ಚರ್ಚೆ ಮಾಡುತ್ತೇವೆ ಎಂದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist