ಬೆಂಗಳೂರು, (www.thenewzmirror.com);
ದೇಶದ ನಂಬರ್ ಒನ್ ಸಾರಿಗೆ ಸಂಸ್ಥೆ KSRTCಗೆ ಮತ್ತೆ ಮೂರು ಪ್ರಶಸ್ತಿ ಲಭಿಸಿದೆ. ಅಂತರರಾಷ್ಟ್ರೀಯ ಮಟ್ಟದ 3 ಬ್ರಾಂಡ್ ಕೌನ್ಸಿಲ್ ರೇಟಿಂಗ್ಸ್ ಪ್ರಶಸ್ತಿ ಲಭಿಸಿದ್ದರ ಬಗ್ಗೆ ನಿಗಮ ಪತ್ರಿಕಾಪ್ರಕಟಣೆ ಹೊರಡಿಸಿದೆ.

ನಿಗಮ ಇತ್ತೀಚೆಗೆ ಪ್ರಯಾಣಿಕರ ಅನುಕೂಲಕ್ಕಾಗಿ ಅಶ್ವಮೇಧ ಎಂಬ ಹೆಸರಿನ ವಿನೂತನ ಬ್ರ್ಯಾಂಡ್ ಪರಿಚಯಿಸಿತ್ತು. ಈ ಬ್ರ್ಯಾಂಡ್ ಗೆ ವರ್ಷದ ಐಕಾನಿಕ್ ಬ್ರ್ಯಾಂಡ್ ಪ್ರಶಸ್ತಿ, ಹಾಗೆನೇ ಕೆಎಸ್ಆರ್ಟಿಸಿ ಆರೋಗ್ಯ ಉಪಕ್ರಮಕ್ಕಾಗಿ ವರ್ಷದ ಅತ್ಯುತ್ತಮ ಉಪಕ್ರಮ ಪ್ರಶಸ್ತಿ ಮತ್ತು ಉತ್ತಮ ಕಾರ್ಮಿಕ ಕಲ್ಯಾಣ ಉಪಕ್ರಮಗಳಿಗಾಗಿ, ಉತ್ತಮ ಸಂಸ್ಥೆ ಪ್ರಶಸ್ತಿ ಲಭಿಸಿದೆ.
ಬ್ಯಾಂಕಾಕ್ ನ ಥೈಲ್ಯಾಂಡ್ ನಲ್ಲಿ ನಡೆದ ನಡೆದ ಇಂಡಿಯಾ ಥಾಯ್ ಚೇಂಬರ್ ಆಫ್ ಕಾಮರ್ಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿಗಮಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಯಿತು.