ಪ್ರತಿಭೆಯನ್ನು ಜಾತಿಯಿಂದ ಅಳೆಯುವುದು ತಪ್ಪು; ವ್ಯಕ್ತಿತ್ವದಿಂದ ಅಳೆಯಬೇಕು: ಸಿಎಂ

RELATED POSTS

ಬೆಂಗಳೂರು(www.thenewzmirror.com):ಶೋಷಿತರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ಬಂದಾಗ ಮಾತ್ರ ಜಾತಿ ಪ್ರಭಾವ ಕಡಿಮೆ ಆಗುತ್ತದೆ. ಜಾತಿಗೆ ಚಲನೆ ಇಲ್ಲ. ವರ್ಗಕ್ಕೆ ಮಾತ್ರ ಚಲನೆ ಇದೆ ಹಾಗಾಗಿ ಪ್ರತಿಭೆಯನ್ನು ಜಾತಿಯಿಂದ ಅಳೆಯುವುದು ತಪ್ಪು.ವ್ಯಕ್ತಿತ್ವದಿಂದ ಅಳೆಯಬೇಕು ಎಂದು ಮುಖ್ಯಮಂತ್ರಿ ಸಿದ್ದಾರಾಮಯ್ಯ ತಿಳಿಸಿದ್ದಾರೆ.

ಬೀ ಕಲ್ಚರ್ ಸಂಸ್ಥೆ ಕೊಂಡಜ್ಜಿ ಸಭಾ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಬಿ.ಎಂ.ತಿಪ್ಪೇಸ್ವಾಮಿ ಅವರ “ಮುಟ್ಟಿಸಿಕೊಂಡವರು” ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು,ಸತ್ಯವನ್ನು ಅತ್ಯಂತ ನಿಷ್ಠುರವಾಗಿ ಹೇಳುತ್ತಿದ್ದರು. ಈ ಕಾರಣಕ್ಕಾಗಿ ಅವರು ಹಲವು ಬಾರಿ ಸತ್ಯ ಹೇಳಿ ಸಮಸ್ಯೆಗೆ ಸಿಕ್ಕಿಕೊಂಡರು ಎಂದು ಹಳೆಯ ಘಟನೆಗಳನ್ನು ನೆನಪಿಸಿಕೊಂಡರು.

ಡಾ.ತಿಪ್ಪೇಸ್ವಾಮಿಯವರ ಜೊತೆ ನಾನೂ 1985 ರಿಂದ ಶಾಸಕನಾಗಿದ್ದೆ. ಸಚಿವರಾಗುವ ಎಲ್ಲಾ ಅರ್ಹತೆಗಳಿದ್ದರೂ  ಶಾಸಕಾಂಗ ಪಕ್ಷದ ಉಪನಾಯಕರಾದರೇ ಹೊರತು ಸಚಿವರಾಗಲಿಲ್ಲ ಎನ್ನುವ ಬೇಸರ ನನಗೂ ಇದೆ. ಅಸ್ಪೃಶ್ಯತೆ ಸಮಾಜಕ್ಕೆ ಅಂಟಿದ ಶಾಪ. ಅಸ್ಪೃಶ್ಯ ಸಮಾಜದಿಂದ ಬಂದ ಅತ್ಯಂತ ಪ್ರತಿಭಾವಂತ ವೈದ್ಯರಾಗಿದ್ದರು. ಶಿಕ್ಷಣ ಅಸ್ಪೃಶ್ಯತೆ ಮತ್ತು ದಾಸ್ಯದಿಂದ ಮುಕ್ತಿ ದೊರಕಿಸಿಕೊಡುತ್ತದೆ ಎಂದರು.

ತಿಪ್ಪೇಸ್ವಾಮಿಯವರು ತಮ್ಮ‌ ಸಮಾಜ, ಸಮುದಾಯದ ಪ್ರಗತಿ ಮತ್ತು ಅಭಿವೃದ್ಧಿಗೆ ಸದಾ ತುಡಿಯುತ್ತಿದ್ದರು. ಅಂಬೇಡ್ಕರ್ ಅವರೂ ಕೂಡ ಇಡೀ ಸಮಾಜ ಮತ್ತು ಸಮುದಾಯಕ್ಕಾಗಿ ತಮ್ಮ ಶಿಕ್ಷಣ ಮತ್ತು ಜ್ಞಾನವನ್ನು ಮುಡಿಪಾಗಿಟ್ಟು ಹೋರಾಡಿದರು ಎಂದು ವಿವರಿಸಿದರು‌ . ಈಗ ಬಹಳಷ್ಟು ಮಂದಿ ಶಿಕ್ಷಿತರು ತಮ್ಮ ಸಮುದಾಯದಿಂದ ದೂರ ಉಳಿಯುತ್ತಾರೆ ಎಂದರು. 

ಶೋಷಿತರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ಬಂದಾಗ ಮಾತ್ರ ಜಾತಿ ಪ್ರಭಾವ ಕಡಿಮೆ ಆಗುತ್ತದೆ. ಜಾತಿಗೆ ಚಲನೆ ಇಲ್ಲ. ವರ್ಗಕ್ಕೆ ಮಾತ್ರ ಚಲನೆ ಇದೆ. ಪ್ರತಿಭೆಯನ್ನು ಜಾತಿಯಿಂದ ಅಳೆಯುವುದು ತಪ್ಪು. ವ್ಯಕ್ತಿತ್ವದಿಂದ ಅಳೆಯಬೇಕು.

ಸಮಾಜ ಸಮಾನ ಅವಕಾಶಗಳಿಂದ ಪರಿವರ್ತನೆ ಆದಾಗ ಮೀಸಲಾತಿ ಅಗತ್ಯವಿಲ್ಲ. ಜಾತಿ ವ್ಯವಸ್ಥೆ ಇರುವವರೆಗೂ ಮೀಸಲಾತಿ ಅಗತ್ಯ ಎನ್ನುವ ಅಂಬೇಡ್ಕರ್ ಅವರ ಮಾತನ್ನು ಸ್ಮರಿಸಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist