ಬೆಂಗಳೂರು/ನವದೆಹಲಿ, (www.thenewzmirror.com);

ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋದ 5 ಜಿ ನೆಟ್ವರ್ಕ್, ಮಹಾ ಕುಂಭ ಮೇಳದಲ್ಲಿ ಅದ್ಭುತ ಪ್ರದರ್ಶನ ನೀಡಿದೆ ಎಂದು ಓಕ್ಲಾ ಬಿಡುಗಡೆ ಮಾಡಿದ ವರದಿಯಲ್ಲಿ ಉಲ್ಲೇಖವಾಗಿದೆ. ಮಹಾಕುಂಭಮೇಳದಲ್ಲಿ ಜಿಯೋದಾ ಸರಾಸರಿ ಡೌನ್ಲೋಡ್ ವೇಗ 201.87 ರಷ್ಟಿತ್ತು. ಜಿಯೋ ಪ್ರತಿಸ್ಪರ್ಧಿ ಏರ್ಟೆಲ್ ನ ಸರಾಸರಿ ಡೌನ್ಲೋಡ್ ವೇಗ 165.23 ಎಂಬಿಪಿಎಸ್ ನಷ್ಟಿತ್ತು ಎಂದು ಓಕ್ಲಾ ವರದಿ ತಿಳಿಸಿದೆ.

ಕೋಟ್ಯಾಂತರ ಜನ್ರು ಸೇರಿದ್ದ ಮಹಾಕುಂಭಮೇಳದಲ್ಲಿ ರಿಲಯನ್ಸ್ ಜಿಯೋದ ನೆಟ್ವರ್ಕ್ ವೇಗವು ಅತ್ಯಂತ ವೇಗವಾಗಿತ್ತು. ಇದರ ಜತೆಗೆ 5 ಜಿ ನೆಟ್ವರ್ಕ್ ಲಭ್ಯತೆಯಲ್ಲಿ ಅದರ ಪ್ರತಿಸ್ಪರ್ಧಿ ಭಾರ್ತಿ ಏರ್ಟೆಲ್ ಅನ್ನು ಹಿಂದಿಕ್ಕಿದೆ ಎಂದು ತಿಳಿಸಲಾಗಿದೆ. ಜನವರಿ ಆರಂಭದಿಂದ ಫೆಬ್ರವರಿ ಅಂತ್ಯದವರೆಗೆ ಪ್ರಯಾಗ್ ರಾಜ್ ನಲ್ಲಿ ಮಹಾ ಕುಂಭ ಮೇಳ ನಡೆದಿತ್ತು. ಈ ವೇಳೆ 5 ಜಿ ನೆಟ್ವರ್ಕ್‌ನ ವೇಗವು 4 ಜಿಗಿಂತ ಸುಮಾರು 9 ಪಟ್ಟು ವೇಗವಾಗಿತ್ತು ಎಂದೂ ಓಕ್ಲಾ ತನ್ನ ವರದಿಯಲ್ಲಿ ತಿಳಿಸಿದೆ. 5ಜಿ ನೆಟ್ವರ್ಕ್ ಕಾರ್ಯಕ್ಷಮತೆಯಲ್ಲಿ ಜಿಯೋ ಅಗ್ರಸ್ಥಾನದಲ್ಲಿದೆ. ಜಿಯೋದ ಸರಾಸರಿ ಡೌನ್ಲೋಡ್ ವೇಗ 201.87 ಎಂಬಿಪಿಎಸ್ ಆಗಿದ್ದರೆ, ಏರ್ಟೆಲ್ 165.23 ಎಂಬಿಪಿಎಸ್ ಹೊಂದಿದೆ. ಮಹಾಕುಂಭದಲ್ಲಿ ರಿಲಯನ್ಸ್ ಜಿಯೋದ 5 ಜಿ ನೆಟ್ವರ್ಕ್‌ನ ಸರಾಸರಿ ಡೌನ್ಲೋಡ್ ವೇಗವು ಏರ್ಟೆಲ್‌ಗಿಂತ ಸುಮಾರು 36 ಎಂಬಿಪಿಎಸ್ ಹೆಚ್ಚಾಗಿದೆ. ಜಿಯೋ ಮತ್ತು ಏರ್ಟೆಲ್ ಮಾತ್ರ ಭಾರತದಲ್ಲಿ 5 ಜಿ ಸೇವೆಗಳನ್ನು ನೀಡುತ್ತಿವೆ. ಮೇಳ ಮೈದಾನದಲ್ಲಿ ಜಿಯೋದ 5 ಜಿ ನೆಟ್ವರ್ಕ್ ಲಭ್ಯತೆಯು 89.9% ಆಗಿತ್ತು, ಇದು ಏರ್ಟೆಲ್‌ನ 42.4% ಲಭ್ಯತೆಗಿಂತ ಎರಡು ಪಟ್ಟು ಹೆಚ್ಚಾಗಿದೆ.
ಮಹಾಕುಂಭ ಮೇಳದ ಸಮಯದಲ್ಲಿ ದಟ್ಟಣೆಯ ಹೊರತಾಗಿಯೂ, 5 ಜಿ ನೆಟ್ವರ್ಕ್ 4 ಜಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿತು. ಜನವರಿ ಆರಂಭದಲ್ಲಿ 5 ಜಿ ಡೌನ್ಲೋಡ್ ವೇಗವು 259.67 ಎಂಬಿಪಿಎಸ್ ಆಗಿತ್ತು, ಇದು ಜನವರಿ 26 ರಂದು 151.09 ಎಂಬಿಪಿಎಸ್‌ಗೆ ಇಳಿದಿದೆ. ಆದರೆ ಜಾತ್ರೆಯ ಅಂತ್ಯದ ವೇಳೆಗೆ 206.82 ಎಂಬಿಪಿಎಸ್‌ಗೆ ಮರಳಿದೆ. ಗರಿಷ್ಠ ದಟ್ಟಣೆಯ ಸಮಯದಲ್ಲಿಯೂ ಬ್ರೌಸಿಂಗ್ ಮತ್ತು ವೀಡಿಯೊ ಪ್ಲೇಬ್ಯಾಕ್‌ನಲ್ಲಿ ಗಮನಾರ್ಹ ವಿಳಂಬಗಳು ಕಂಡುಬಂದಿಲ್ಲ ಎಂದು ವರದಿ ತಿಳಿಸಿದೆ.