ಬೆಂಗಳೂರು(www.thenewzmirror.com):ಬಸವಣ್ಣನವರ ನುಡಿ ವಾಕ್ಯದಂತೆ “ಕಾಯಕವೇ ಕೈಲಾಸ” ಇದನ್ನು ಜಾರಿಗೆ ತರುವ ನಿಟ್ಟಿನಲ್ಲಿ, ಬಸವ ಜಯಂತಿಯಂದೇ ಅಂದರೆ,30-04-2025 ರಂದು ಮಲ್ಲೇಶ್ವರಂ ಉದ್ಯೋಗ ಮೇಳ 2025” ಡಾ.ಸಿ.ಎನ್. ಅಶ್ವತ್ಥ್‌ನಾರಾಯಣ್ ಫೌಂಡೇಶನ್ ಆಶ್ರಯದಲ್ಲಿ ಆಯೋಜಿಸಲಾಗಿದೆ.
ಈ ಮಹತ್ತರ ಕಾರ್ಯಕ್ರಮದ ಒಂದೇ ವೇದಿಕೆಯಡಿಯಲ್ಲಿ 87 ಪ್ರಮುಖ ಕಂಪನಿಗಳು ಭಾಗವಹಿಸುತ್ತಿವೆ. ಇದೇ ಸಮಯದಲ್ಲಿ 16000+ ಉದ್ಯೋಗಾವಕಾಶಗಳು ಲಭ್ಯವಿರುವುದು ವಿಶೇಷ. ನೀವು ಬನ್ನಿ, ನಿಮ್ಮವರನ್ನು ಕರೆ ತನ್ನಿ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ FKCCI ಪ್ರೆಸಿಡೆಂಟ್ ಎಂ ಜಿ ಬಾಲಕೃಷ್ಣ ರವರು, ಈಶ್ವರ ಸೇವಾ ಮಂಡಳಿಯ ಶ್ರೀಮತಿ ಸೌಭಾಗ್ಯಮ್ಮ ಈಶ್ವರಯ್ಯರವರು, ಡಾ. ಸಿ. ಏನ್. ಅಶ್ವಥ್ ನಾರಾಯಣ ಎಂಎಲ್ಎ ಹಾಗೂ ಹರೀಶ್ ಅಧ್ಯಕ್ಷರು ಭಾ.ಜ.ಪ. ಉತ್ತರ ಲೋಕಸಭಾ ಕ್ಷೇತ್ರ ಭಾಗವಹಿಸಲಿದ್ದಾರೆ.
ಸ್ಥಳ: ಎಸ್.ಎಚ್.ವಿ.ಎನ್.ಎಂ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು, 13 ನೇ ಕ್ರಾಸ್ ಮಲ್ಲೇಶ್ವರ ಬೆಂಗಳೂರು- 560003.
ದಿನಾಂಕ: 30-04-2025
ಸಮಯ: ಬೆಳಿಗ್ಗೆ 8:30 ಗಂಟೆಯಿಂದ ಸಂಜೆ 4 ಗಂಟೆಯವರೆಗೆ.
ಈ ಉದ್ಯೋಗ ಮೇಳದಲ್ಲಿ ವಿವಿಧ ಕ್ಷೇತ್ರಗಳ, ಖಾಸಗಿ ಹಾಗೂ ಮಲ್ಟಿನ್ಯಾಷನಲ್ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸುತ್ತಿದ್ದು, ಡಿಪ್ಲೋಮಾ, ಐಟಿಐ, ಪದವಿ ಹಾಗೂ ಸ್ನಾತಕೋತ್ತರ ಪದವಿದಾರರಿಗೆ ವೃತ್ತಿಪರ ಅವಕಾಶಗಳು ಲಭ್ಯವಿರುತ್ತವೆ. ಉಚಿತ ನೋಂದಣಿ ವ್ಯವಸ್ಥೆ ಇರಿಸಲಾಗಿದ್ದು, ಉದ್ಯೋಗಾಕಾಂಕ್ಷಿಗಳು ತಮ್ಮ ಜೈವಿಕ ವಿವರಗಳು (Resume) ಮತ್ತು ಅಗತ್ಯ ದಾಖಲೆಗಳೊಂದಿಗೆ ಹಾಜರಾಗುವಂತೆ ಕೋರಲಾಗಿದೆ.
ವಿಶೇಷತೆಯು ಏನೆಂದರೆ:
• ಸ್ಥಳದಲ್ಲಿಯೇ ಸಂದರ್ಶನ ಪ್ರಕ್ರಿಯೆ
• ಉದ್ಯೋಗ ನಿರ್ದೇಶನ ಹಾಗೂ ಮಾರ್ಗದರ್ಶನ ಸೆಷನ್ಸ್
• ಉದ್ಯೋಗ ನೀಡುವ ಕಂಪನಿಗಳೊಂದಿಗೆ ನೇರ ಸಂಭಾಷಣೆ
ಡಾ. ಸಿ.ಎನ್.ಅಶ್ವತ್ಥ್‌ನಾರಾಯಣ್ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ.
📍https://g.co/kgs/MMvs3yg